»   » ಟಿವಿ ಹೆಸರು ಗೊತ್ತಿಲ್ಲ! ಆದರೂ ಕೆಲಸ ಖಾಲಿ ಇದೆ!

ಟಿವಿ ಹೆಸರು ಗೊತ್ತಿಲ್ಲ! ಆದರೂ ಕೆಲಸ ಖಾಲಿ ಇದೆ!

Posted By:
Subscribe to Filmibeat Kannada
Kannada TV channel recruitment
ಟಿವಿ ಹೆಸರು ಗೊತ್ತಿಲ್ಲ! ಆದರೂ ಕೆಲಸ ಖಾಲಿ ಇದೆ! ಷರತ್ತುಗಳನ್ನು ಓದದೇ ಅರ್ಜಿ ಹಾಕಬೇಡಿ. ಈ ರೀತಿಯ ಜಾಹೀರಾತೊಂದು ಮಾಧ್ಯಮ ವಲಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಇದು ಯಾವ ವಾಹಿನಿ ಇರಬಹುದು? ಯಾವ ಯಾವ ಕೆಲಸಗಳು ಖಾಲಿ ಇವೆ ಎಂಬ ಅತೀವ ಕುತೂಹಲ ಮಾಧ್ಯಮ ಮಿತ್ರರನ್ನು ಥಕತೈ ಎಂದು ಕುಣಿಯುವಂತೆ ಮಾಡಿದೆ.

ಟಿವಿ ವಾಹಿನಿಯ ಷರತ್ತುಗಳು ಹೀಗಿವೆ. ತಂಡ ಸ್ಫೂರ್ತಿ ಇದ್ದರೆ ಮಾತ್ರ. ಅನುಭವ ಇಲ್ಲದಿದ್ದರೂ ಸರಿ, ವಿಪರೀತ ಅನುಭವ ಮಾತ್ರ ಬೇಡವೇ ಬೇಡ. ಗಡಿಯಾರ ನೋಡದ ಅಭ್ಯಾಸ ಇದ್ದವರು. ಕಷ್ಟ ಮಾರ್ಗದಲ್ಲಿ ಕಲಿಯುವ ಭರವಸೆ ಇದ್ದವರು. 25 ರಿಂದ 35 ವರುಷದ ಒಳಗಿನವರು.

ಯಾವ ಯಾವ ಹುದ್ದೆಗಳು ಖಾಲಿ ಇವೆ. ವರದಿಗಾರರು, ಕಾಪಿ ಎಡಿಟರ್‌ಗಳು, ಕ್ಯಾಮೆರಾ ಮೆನ್‌ಗಳು, ವಿಡಿಯೋ ಎಡಿಟರ್‌ಗಳು, ಆಂಕರ್‌ಗಳು (ಅರ್ಜಿ ಜೊತೆ ಫೋಟೋ ಕಳುಹಿಸಿ), ಮೇಕಪ್ ಮೆನ್‌ಗಳು, ಗ್ರಾಫಿಕ್ ಕಲಾವಿದರು, ಆನ್‌ಲೈನ್ ಆಡಿಯೋ ವಿಡಿಯೋ ಎಡಿಟರ್‌ಗಳು. ಇಂದಿನಿಂದ(ಆಗಸ್ಟ್ 26, 2011) ಏಳು ದಿನಗಳ ಒಳಗೆ ಅರ್ಜಿ ಕಳುಹಿಸಬೇಕು.

ವಿಳಾಸ: Writemen Media Private Limited, # 57, 4th Main, MLA Layout, RT Nagar, Banaglore-560032. Email: writemenjobs@gmanil.com, writemenjobs@rediffmail.com. ಸೂಚನೆ: ಅರ್ಜಿಯಲ್ಲಿ ಯಾವ ಹುದ್ದೆಗೆ ಎಂದು ನಮೂದಿಸಿ. ಅರ್ಜಿ ಕಳುಹಿಸಿದ ಮೇಲೆ ದೂರವಾಣಿ ಕರೆ ಮಾಡಬೇಡಿ! ಆಲ್ ದ ಬೆಸ್ಟ್. (ದಟ್ಸ್‌ಕನ್ನಡ ವಾರ್ತೆ)

English summary
Writemen Media Private Limited is a media house in Bangalore. It is currently recruiting competent professional for its upcoming Kannada TV channel for the following positions: News Desk Executive, Copy Writers, Copy Editors, Cameramen, Graphic Designers, Editors, Make-up Artists etc., Forward email to : writemenjobsgmanil.com, writemenjobsrediffmail.com.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada