For Quick Alerts
  ALLOW NOTIFICATIONS  
  For Daily Alerts

  ಪಬ್ಲಿಕ್ ಟಿವಿ ಪರೀಕ್ಷಾರ್ಥ ಪ್ರಸಾರ ಕಾರ್ಯಾರಂಭ

  By Rajendra
  |

  ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್ ಟಿವಿ ಗುರುವಾರ (ಜ.26) ರಿಪಬ್ಲಿಕ್ ಡೇ ದಿನ ಪರೀಕ್ಷಾರ್ಥ ಪ್ರಸಾರ ಆರಂಭಿಸಿತು. ನಾಡಿನ ಹಲವಾರು ರಾಜಕೀಯ ಧುರೀಣರು, ಸಾಹಿತಿಗಳು, ಸಿನಿಮಾ ತಾರೆಗಳು ಹೊಸ ಸುದ್ದಿ ವಾಹಿನಿಗೆ ಶುಭ ಕೋರಿದರು.

  ನಾಲ್ಕಾರು ಮಂದಿ ಉದ್ಯಮಶೀಲರು ಕಲೆತು ಆರಂಭಿಸಿರುವ Writemen Media Pvt Ltd ಸಂಸ್ಥೆ ಪಬ್ಲಿಕ್ ಟಿವಿಯನ್ನು ಸಾದರಪಡಿಸುತ್ತಿದೆ. ರಂಗನಾಥ್ ಅವರು ಸಂಸ್ಥೆಯ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್. ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬುದು ಪಬ್ಲಿಕ್ ಟಿವಿ ಉದ್ಘೋಷಣೆ.

  ಬೆಂಗಳೂರು ಯಶವಂತಪುರದ ಪಬ್ಲಿಕ್ ಟಿವಿ ಕಚೇರಿಯಿಂದ ಹೊರಟ ಸಿಗ್ನಲ್ ಇನ್ನು ಕೆಲವೇ ದಿನಗಳಲ್ಲಿ ಮನೆ ಮನೆ ತಲುಪಲಿದೆ. ಆ ದಿನವನ್ನು ಶೀಘ್ರದಲ್ಲೇ ತಿಳಿಸುವುದಾಗಿ ವಾಹಿನಿ ತಿಳಿಸಿದೆ. ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವುದು, ಕಂಪನಿ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಸಾರ್ವಜನಿಕರ ಆಶೋತ್ತರಗಳಿಗೆ ಕನ್ನಡಿಯಾಗುವುದು ನಮ್ಮ ಕಾಯಕ ಎಂದಿದ್ದಾರೆ ರಂಗನಾಥ್. (ಒನ್‌ಇಂಡಿಯಾ ಕನ್ನಡ)

  English summary
  Public TV by HR Ranganatha and his young team's dream venture. A 24X7 news channel for the people... not wwned by any politician, or buisenessman... Its News channel of a true Journalist starts test signal on Jan 26th Republic Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X