For Quick Alerts
  ALLOW NOTIFICATIONS  
  For Daily Alerts

  ಚಂದನ ವಾಹಿನಿ ಸುದ್ದಿ ವಿಭಾಗಕ್ಕೆ ಹೊಸ ನಾವಿಕ

  By Mahesh
  |

  ಬೆಂಗಳೂರು ದೂರದರ್ಶನದ ಸುದ್ದಿ ವಾಹಿನಿಗೆ ಹೊಸ ರೂಪ ಹಾಗೂ ಶೈಲಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ದೂರದರ್ಶನ ವಾಹಿನಿಯ ಸುದ್ದಿ ಹಳ್ಳಿಯಿಂದ ದಿಲ್ಲಿಗೆ ತಲುಪುತ್ತಿದ್ದು, ಜನರಿಗೆ ನೈಜ ಸುದ್ದಿಗಳನ್ನು ಬಿತ್ತರಿಸುವ ಕಾರ್ಯ ಮುಂದುವರೆಸಲಿದೆ ಎಂದು ಚಂದನದ ಸುದ್ದಿ ವಾಹಿನಿಯ ಹೊಸ ನಿರ್ದೇಶಕರಾಗಿ ಆಯ್ಕೆಯಾದ ರವೀಂದ್ರ ಅವರು ಹೇಳಿದ್ದಾರೆ.

  ಇಂಡಿಯನ್ ಇನ್ ಫಾರ್ಮೆಷನ್ ಸರ್ವೀಸ್ ನ 'ಎ' ಶ್ರೇಣಿ ಆಧಿಕಾರಿ(1997 ಬ್ಯಾಚ್ ) ಯಾಗಿರುವ ರವೀಂದ್ರ ಅವರ ಜೊತೆಗೆ ನಟಾಶಾ ಶರೋನ್ ಡಿ'ಸೋಜ ಅವರಿಗೂ ಭಡ್ತಿ ನೀಡಿ ವಾರ್ತಾ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದೆ.

  ನಟಾಶಾ ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಾಹೀರಾತು ಮತ್ತು ದೃಶ್ಯ ಪ್ರಚಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

  ರವೀಂದ್ರ ಅವರಿಗೆ ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ಹೊಣೆ ಜೊತೆಗೆ ಬೆಂಗಳೂರು ಆಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕರಾಗಿಯೂ ಮುಂದುವರೆಯುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

  ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಣೆ ಯೋಜನೆಗಳಲ್ಲಿ 2005-2008ರವರೆಗೆ ರವೀಂದ್ರ ಅವರು ಕರ್ತವ್ಯ ನಿರ್ವಹಿಸಿದ್ದಾರೆ.

  English summary
  S.G. Raveendra is promoted and continues in the upgraded post as Director(News) and Head of Regional NEWS UNIT, Doordarshan Kendra, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X