twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡದಲ್ಲಿ ಮುಂಜಾನೆ ಮೂಡಿಬರುತ್ತಿದೆ ಓಂಕಾರ

    |

    Ravishankar
    ವೀಕ್ಷಕರ ಜೀವನ ಸಾಮಾನ್ಯದಿಂದ ಉತ್ತಮತೆಯೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಅವಿವೇಕದಿಂದ ವಿವೇಕದೆಡೆಗೆ ಸಾಗಲಿ ಎಂಬ ಸದುದ್ದೇಶದಿಂದ ಜೀ ಕನ್ನಡ ರೂಪಿಸಿರುವ ಮುಂಜಾನೆಯ ವಿಶೇಷ ಕಾರ್ಯಕ್ರಮವೇ ಓಂಕಾರ. ಏಪ್ರಿಲ್ 23 ರಿಂದ ಆರಂಭಗೊಂಡು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ಗಂಟೆಗೆ ಪ್ರಸಾರವಾಗುತ್ತಿದೆ. ಇದನ್ನು ಮುನ್ನಡೆಸುತ್ತಿರುವವರು ಶ್ರೀ ರವಿಶಂಕರ ಗುರೂಜಿ.

    ಓಂಕಾರದಲ್ಲಿ ಧಾರ್ಮಿಕ ಆಚಾರ ವಿಚಾರಗಳಲ್ಲದೇ ವಿವಿಧ ಕ್ಷೇತ್ರಗಳ ಮಹಿಮೆ, ವಾಸ್ತು, ವಿವಿಧ ವ್ರತಗಳು, ಸಂಕಲ್ಪಗಳು, ಸರಳ ಪೂಜಾ ವಿಧಾನಗಳು ತಿಳಿಯಿಸಲ್ಪಡುತ್ತಿವೆ. ಆದರೆ ಯಾವ ವಿಚಾರವೂ ಮೌಢ್ಯದ ತಳಹದಿ ಮೇಲೆ ನಿಂತಿಲ್ಲ. ಸುಖಾಸುಮ್ಮನೆ ಹರಕೆ, ವ್ರತಗಳಿಂದಾಗುವ ಅನಾಹುತಗಳನ್ನು ಬಿಂಬಿಸುತ್ತ, ಧಾರ್ಮಿಕತೆಯಲ್ಲಿನ ಮೌಢ್ಯವನ್ನು ಹೊಡೆದೋಡಿಸುವ ಪ್ರಯತ್ನ ಮಾಡಲಾಗುತ್ತಿದೆ.

    ಇತ್ತೀಚೆಗೆ ಜನರಲ್ಲಿ ಋಣಾತ್ಮಕ ಚಿಂತನೆ ಹೆಚ್ಚುತ್ತಿದೆ. ಇದರಿಂದ ಜೀವನ ದುರ್ಬರವಾಗುತ್ತಿದೆ. ಅದನ್ನು ಹೋಗಲಾಡಿಸಿ ಧನಾತ್ಮಕ ಚಿಂತನೆಯತ್ತ ವಾಲುವಂತೆ ಮಾಡುವುದು; ತನ್ಮೂಲಕ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡುವುದು ಓಂಕಾರದ ಉದ್ದೇಶ.

    ಶ್ರೀ ರವಿಶಂಕರ ಗುರೂಜಿಯವರು 'ಸಹಿ ಜ್ಯೋತಿಷ್ಯ',(ವ್ಯಕ್ತಿಗಳ ಸಹಿ ನೋಡಿ ಅವರ ಭವಿಷ್ಯ ತಿಳಿಸುವುದು) ಸಂಖ್ಯಾಶಾಸ್ತ್ರ, ಮುದ್ರಾಯೋಗದಲ್ಲೂ ಪರಿಣಿತರಾಗಿದ್ದು ಸರಳ ಮುದ್ರಾಯೋಗದ ಮೂಲಕ ದೇಹವ್ಯಾಧಿಗಳನ್ನು ಹೇಗೆ ನಿವಾರಿಸಿಕೊಳ್ಳಬಹುದೆಂಬುದನ್ನು ಮುಂಬರುವ ಸಂಚಿಕೆಗಳಲ್ಲಿ ವಿವರಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Zee Kannada Channel telecasts 'Omkar' programme, on Monday to Satarday 9 AM
    Thursday, April 26, 2012, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X