For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯಿಂದ ಕಿರುತೆರೆಗೆ ಬಂದ ಚಳಿಚಳಿ ತಾಳೆನು ಅಂಬಿಕಾ

  By Rajendra
  |

  ಎಂಬತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡಿದ್ದ ತಾರೆ ಅಂಬಿಕಾ ಈಗ ಕಿರುತೆರೆಗೆ ಬಂದಿದ್ದಾರೆ. ಅಶೋಕ್ ಕಶ್ಯಪ್ ನಿರ್ದೇಶನದ 'ಪ್ರೀತಿಯಿಂದ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಂಬಿಕಾ ಅಭಿನಯಿಸುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಮೇ.25ರಿಂದ ಪ್ರಸಾರ ಆರಂಭಿಸಿದೆ.

  ಸೋಮವಾರದಿಂದ ಶುಕ್ರವಾರದತನಕ ಪ್ರತಿದಿನ ರಾತ್ರಿ 9 ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಬಳಿಕ ಅಂಬಿಕಾ ಅವರು ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. "ತಮ್ಮ ಧಾರಾವಾಹಿಗೆ ಅಂಬಿಕಾ ಅವರೇ ಸೂಕ್ತ ಅನ್ನಿಸಿದ ಕಾರಣ ಅವರಿಗೆ ಅವಕಾಶ ನೀಡಿದ್ದೇವೆ. ಖಂಡಿತ ಅವರು ವೀಕ್ಷಕರ ಮನಸೆಳೆಯುತ್ತಾರೆ ಎಂದು ಕಶ್ಯಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಚತುರ್ಭಾಷಾ ತಾರೆ ಅಂಬಿಕಾ ಎಂಬತ್ತು, ತೊಂಬತ್ತರ ದಶಕದಲ್ಲಿ ಡಾ.ರಾಜ್ ಕುಮಾರ್, ಶಂಕರನಾಗ್, ಅಂಬರೀಷ್, ವಿಷ್ಣುವರ್ಧನ್ ಮುಂತಾದ ನಾಯಕರ ಜೊತೆ ನಟಿಸುವ ಮೂಲಕ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಈಗ ಕಿರುತೆರೆಯಲ್ಲಿ ಅವರ ಪಯಣ ಸಾಗಲಿದೆ. (ದಟ್ಸ್‌‍ಕನ್ನಡ ಸಿನಿವಾರ್ತೆ)

  English summary
  Yesteryear heroine Ambika, who ruled the South Indian film industry in the 80s is entered the small screen and returning to acting with Ashok Kashyap's mega serial titled Preethiyinda. The mega soap airs from 25th May from Monday to Friday at 9 P.M.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X