twitter
    For Quick Alerts
    ALLOW NOTIFICATIONS  
    For Daily Alerts

    ಬಟ್ಟೆ ಬಿಚ್ಚಿ ಕುಣಿಯುವವರಿಗೆ ಮಾತ್ರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು

    By Rajendra
    |

    Pyate Hudugi Akshata
    ಸುವರ್ಣ ವಾಹಿನಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 2' ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಷತಾ ಎಂಬ ಯುವತಿ ಆರೋಪಿಸಿದ್ದಾರೆ. ಈ ರಿಯಾಲಿಟಿ ಶೋ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಆಕೆ ಹೇಳಿದ್ದಾರೆ.

    ಈ ಕಾರ್ಯಕ್ರಮದ ನಿರೂಪಕ ಅಕುಲ್ ಹಾಗೂ ನಿರ್ದೇಶಕರ ತಂಡ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಇಲ್ಲಿ ಬಟ್ಟೆ ಬಿಚ್ಚಿ ಕುಣಿಯುವವರಿಗೆ ಮಾತ್ರ ಅವಕಾಶ. ಇಲ್ಲಿ ಸಾಕಷ್ಟು ಮೋಸಗಳು ನಡೆದಿವೆ. ಅಕುಲ್ ಮಾತು ಕೇಳಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಶೋನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅಕ್ಷತಾ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

    ಪೂರ್ಣಿಮಾ ಎಂಬ ಮಂಡ್ಯ ಯವತಿಗೂ ಇದೇ ಗತಿ ಆಗಿದೆ. ಆಕೆ ಮತ್ತು ನಾನು ಕಾರ್ಯಕ್ರಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆವು ಎಂಬ ಕಾರಣಕ್ಕೆ ನಮ್ಮನ್ನು ಎಲಿಮಿನೇಟ್ ಮಾಡಲಾಗಿದೆ."ಲೋ ಕ್ಲಾಸ್ ಕನ್ನಡಮಾತನಾಡುತ್ತಾಳೆ. ಹಳ್ಳಿ ಗುಗ್ಗು ಎಂದು ಕುಮುದಾ ನಿಂದಿಸಿದ್ದರು. ಆದರೂ ಆಕೆಯ ವಿರುದ್ಧ ಯಾರು ಕ್ರಮ ಕೈಗೊಳ್ಳಲಿಲ್ಲ" ಎಂದು ಅಕ್ಷತಾ ಬೇಸರ ವ್ಯಕ್ತಡಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂದು ರಿಯಾಲಿಟಿ ಶೋ ಒಪ್ಪಂದಕ್ಕೆ ನಮ್ಮ ಬಳಿ ಸಹಿ ಹಾಕಿಸಿಕೊಂಡಿದ್ದ್ದರು. ಆದರೂ ಕಾರ್ಯಕ್ರಮದ ಬಗ್ಗೆ ಬೇಸತ್ತು ಅಲ್ಲಿನ ಅನ್ಯಾಯ, ಅಶ್ಲೀಲತೆಯನ್ನು ಬಯಲಿಗೆಳೆಯಲು ಪತ್ರಿಕಾಗೋಷ್ಠಿ ಕರೆದಿದ್ದೇವೆ. ಸಾಕಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶ ನಮ್ಮದು ಎಂದು ಅಕ್ಷತಾ ಹೇಳಿದ್ದಾರೆ.

    ಒಮ್ಮ್ಮೆ ಕಾರ್ಯಕ್ರಮದಲ್ಲಿ ಅಕ್ಷತಾ ಅವರಿಗೆ ಕುಮುದಾ ಕಪಾಳಮೋಕ್ಷ ಮಾಡಿದ್ದರಂತೆ. ಆಗ ತಮಗೆ ರಕ್ತಸ್ರಾವೂ ಆಗಿತ್ತು. ಆದರೆ ಈ ಸನ್ನಿವೇಶವನ್ನು ಟಿವಿಯಲ್ಲಿ ಪ್ರಸಾರ ಮಾಡಲೇ ಇಲ್ಲ ಎಂದಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರ ಅವರು ಅಲ್ಲಗಳೆದಿದ್ದು, ಅಕ್ಷತಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ.

    ಅಕ್ಷತಾ ಹಾಗೂ ಪೂರ್ಣಿಮಾ ಅವರು ಎಲಿಮಿನೇಟ್ ಆಗಿ ಹತಾಶೆಯಿಂದ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಯಾವ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಈಗಲೂ ಅವರೊಂದಿಗೆ ಮಾತುಕತೆ ಸಿದ್ಧರಿದ್ದೇವೆ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವರು ಒಳ್ಳೆಯ ಮನೆತನದವರಾಗಿದ್ದಾರೆ ಎಂದಿದ್ದಾರೆ ರಾಘವೇಂದ್ರ.

    English summary
    One of the participant has made serious allegations on Pyate Hudigiru Halli Lifu (PHHL-City Girl Village life). Akshata, who was contestant on second season of jungle theme reality show, has blamed that the Suvarna TV programme is meant to harass the participants mentally and physically.
    Wednesday, April 27, 2011, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X