ಕನ್ನಡ ಟಿವಿಗಳಿಂದ ತೆಲುಗು ದೂಕುಡು ಚಿತ್ರಕ್ಕೆ ಪ್ರಚಾರ ಏಕೆ?

By * ಅಮರನಾಥ್ ಶಿವಶಂಕರ್, ಬೆಂಗಳೂರು

ಇತ್ತೀಚೆಗೆ ಮಹೇಶ್ ಬಾಬು ಅಭಿನಯದ 'ದೂಕುಡು' ಅನ್ನುವ ತೆಲುಗು ಚಿತ್ರವೊಂದು ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪರಭಾಷ ಚಿತ್ರ ವಿತರಕರ ಜೊತೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಗಾಳಿಗೆ ತೂರಿ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರೋ ವಿಷಯಕ್ಕೆ ಮತ್ತೆ ಬರೋಣ.

ಕೆಲವು ಗಡಿ ತಾಲೂಕುಗಳಲ್ಲಿ ಮತ್ತು ಬೆಂಗಳೂರಿಗೆ ಅನ್ನ ಅರಸಿ ಬಂದಿರುವ ಕೆಲವು ತೆಲುಗು ವಲಸಿಗರನ್ನ ಒಳಗೊಂಡಿರುವ ಚಿಕ್ಕ ಮಾರುಕಟ್ಟೆ ತೆಲುಗು ಚಿತ್ರರಂಗಕ್ಕಿರೋದು ವಾಸ್ತವ.

ಈ ಹಿಂದೆ ಮಗಧೀರ ಅನ್ನುವ ಮೆಗಾ ಹಿಟ್ ತೆಲುಗು ಚಿತ್ರ ಸುಮಾರು 100 ಕೋಟಿ ಗಳಿಸಿತ್ತು ಅಂತ ಮಾತುಗಳಿಗೆ. ಅದರಲ್ಲಿ ಕರ್ನಾಟಕದಿಂದ ಬಂದ ಗಳಿಕೆ ಸುಮಾರು 5 ಕೋಟಿಯಷ್ಟು ಅಷ್ಟೇ.

ಕರ್ನಾಟಕದಲ್ಲಿ ಎಲ್ಲ ಭಾಷೆ ಚಿತ್ರಗಳಿಂದ ಆಗುವ ವಹಿವಾಟು ಸುಮಾರು ವರ್ಷಕ್ಕೆ 400-450 ಕೋಟಿಯಷ್ಟಿದ್ದರೆ,ಅದರಲ್ಲಿ ತೆಲುಗು ಚಿತ್ರಗಳಿಂದಾಗುವ ಗಳಿಕೆ ಸುಮಾರು 25-30 ಕೋಟಿಯಷ್ಟಿರಬಹುದು, ಅಂದರೆ ತೆಲುಗು ಚಿತ್ರಗಳ ಮಾರುಕಟ್ಟೆ ಕರ್ನಾಟಕದಲ್ಲಿ ಶೇಕಡ 5-6% ಅಷ್ಟು..

ಕನ್ನಡ ವಾಹಿನಿಗಳು ಮತ್ತು ಪತ್ರಿಕೆಗಳ ಕನ್ನಡ ವಿರೋಧಿ ಧೋರಣೆ:

ಇನ್ನು ಕನ್ನಡ ದಿನಪತ್ರಿಕೆಗಳು ಮತ್ತು ಕನ್ನಡ ವಾಹಿನಿಗಳಿಗೆ ಒಂದು ದೊಡ್ಡ ಬಡ್ಜೆಟ್ ತೆಲುಗು, ಹಿಂದಿ ಅಥವಾ ತಮಿಳು ಚಿತ್ರ ಬಿಡುಗಡೆ ಆಗಿತ್ತದೆ ಅಂದ್ರೆ ಸಾಕು, ದೊಡ್ಡ ಹಬ್ಬವೋ ಹಬ್ಬ.

ತಮ್ಮ ಪ್ರೇಕ್ಷಕರು ಮತ್ತು ಓದುಗರು ಅಪ್ಪಟ ಕನ್ನಡಿಗರು ಅನ್ನುವ ಚಿಕ್ಕ ಅಂಶವನ್ನೂ ಅರಿಯದ ಈ ಮುಗ್ಧರು ಪಾಪ ಪರಭಾಷೆ ಚಿತ್ರಗಳಿಗೆ ಬಿಟ್ಟು ಪ್ರಚಾರ ಕೊಡುತ್ತಲೇ ಇದ್ದಾರೆ.

ಮೊನ್ನೆ ಒಂದು ಟಿ.ವಿ. ವಾಹಿನಿಯಲ್ಲಂತು "ಹಿಟ್ ಬೇಕು ಹಿಟ್" ಅನ್ನುವ ಕಾರ್ಯಕ್ರಮವನ್ನು ಮಾಡಿ ನಟ ಮಹೇಶ್ ಬಾಬು ಚಿತ್ರಗಳು ನೆಲಕಚ್ಚುತ್ತಿದ್ದು ಆ ನಟ ಹಿಟ್ಟಿಗಾಗಿ ಪರಿತಪಿಸುತ್ತಿದ್ದಾನೆ ಅಂತ ತಾವೇ ಉದಾರ ಮನೋಭಾವದಿಂದ ಕಾರ್ಯಕ್ರಮವನ್ನು ನಿರ್ಮಿಸಿದ್ದನ್ನು ನೋಡಿದರೆ, ತಾವು ಸಹ ಪರಭಾಷ ಚಿತ್ರಗಳನ್ನ ಕರ್ನಾಟಕದಲ್ಲಿ ಹಿಟ್ ಮಾಡಲು ಪರಿತಪಿಸುತ್ತಿದ್ದಾರೆ ಅನ್ನೋದು ಗೋಚರವಾಗುತ್ತದೆ.

ಒಂದೊಳ್ಳೆ ಕನ್ನಡ ಚಿತ್ರ ಬಿಡುಗಡೆಯಾದಾಗ ಕಾಲೆಳೆದು ಚಿತ್ರ ಸೋಲುವಂತೆ ಶ್ರಮಿಸುವ ಕನ್ನಡ(?) ವಾಹಿನಿಗಳು ಮತ್ತು ಪತ್ರಿಕೆಗಳು ಯಾಕಿಷ್ಟು ಆಸಕ್ತಿಯಿಂದ ತೆಲುಗು ಚಿತ್ರಗಳ ಮಾರುಕಟ್ಟೆಯನ್ನು ಬೆಳೆಸಲು ಹೊರಟಿದ್ದಾರೋ ನಾ ಕಾಣೆ.


ಎಲ್ಲಕ್ಕಿಂತ ಮಿಗಿಲಾಗಿ ತೆಲುಗು ಚಿತ್ರಗಳ ಬಗ್ಗೆ ತಿಳುದುಕೊಳ್ಳುವ ಆಸಕ್ತಿ ಇರುವ ತೆಲುಗು ಭಾಷಿಕರು ತೆಲುಗು ಪತ್ರಿಕೆಗಳಲ್ಲಿ ಮತ್ತೆ ತೆಲುಗು ವಾಹಿನಿಗಳನ್ನು ನೋಡುತ್ತಾರೆ ಹೊರತು ಕನ್ನಡ ಪತ್ರಿಕೆಗಳು ಮತ್ತೆ ವಾಹಿನಿಗಳಿಗೆ ಸೊಪ್ಪು ಹಾಕಲ್ಲ.

ಹಾಗಿದ್ದ ಮೇಲೆ ಕನ್ನಡ ಪತ್ರಿಕೆಗಳು ಮತ್ತೆ ವಾಹಿನಿಗಳಲ್ಲಿ ಕನ್ನಡಿಗರಿಗೆ ಬೇಕಿಲ್ಲದ ಪ್ರಚಾರ ಕೊಡುವುದು ಎಷ್ಟು ಅಸಮಂಜಸ ಅಲ್ಲವೇ?

ಒಟ್ಟಾರೆ ತೆಲುಗು ಚಿತ್ರಗಳಿಗೆ ಇಲ್ಲದ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಡುವ ಕೆಲಸ ಭರದಿಂದ ನಡೆಯುತ್ತಿದೆ.

ಇನ್ನು ಈ ದೂಕುಡು ಚಿತ್ರ ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ ಅನ್ನುವುದು ಸತ್ಯ. ಬೆಂಗಳೂರಿನಲ್ಲೇ ಸುಮಾರು 27 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

ಈ ಪಾಟಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಿದ್ದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲೀ, ಕನ್ನಡ ಚಿತ್ರರಂಗದ ಗಣ್ಯರಾಗಲೀ ಆಕ್ಷೇಪ ವ್ಯಕ್ತಪಡಿಸದಿರುವುದು ವಿಪರ್ಯಾಸವೇ ಸರಿ.

ಪರಭಾಷೆ ಚಿತ್ರಗಳ ಪ್ರಿಂಟುಗಳಿಗೆ ಕಡಿವಾಣವೂ ಹಾಕದೇ ಈ ಚಿತ್ರಗಳನ್ನು ಡಬ್ ಮಾಡಿ ಕನ್ನಡದಲ್ಲಿಯೂ ನೋಡದಂತೆ ಅಡ್ಡ ಗೋಡೆ ನಿರ್ಮಿಸಿರುವುದು ಕನ್ನಡಕ್ಕೆ ಆಘಾತಕಾರಿ ಬೆಳವಣಿಗೆ ಅನ್ನುವುದಂತು ದಿಟ.

ಕರ್ನಾಟಕದಲ್ಲಿರೋ ಸುಮಾರು 600 ಚಿತ್ರಮಂದಿರಗಳಲ್ಲಿ ಒಂದೇ ತೆಲುಗು ಚಿತ್ರ 60
ಚಿತ್ರಮಂದಿರಗಳಲ್ಲಿ ಬಿಡುಗಡೆ ಆದರೆ, ಕನ್ನಡ ಚಿತ್ರಗಳು ಚಿತ್ರಮಂದಿರಗಳ ಕೊರತೆಯಿಂದ ಏನ್ ಚಂದ್ರಲೋಕದಲ್ಲಿ ಬಿಡುಗಡೆ ಆಗಬೇಕೋ ಏನೋ..

More from Filmibeat

English summary
Kannada tv media channels TV9, Suvarna and other are exclusively promoting Mahesh Babu's latest flick Dookudu. This is hurting sentiments of Kannada viewers. Kannada channels are neglecting the Kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X