For Quick Alerts
  ALLOW NOTIFICATIONS  
  For Daily Alerts

  ಸಮಯ ಟಿವಿಯಲ್ಲಿ ಮಹತ್ತರ ಬದಲಾವಣೆ

  By Rajendra
  |

  ಸಮಯ ಟಿವಿ ವಾಹಿನಿಯಲ್ಲಿ ಹವಾಮಾನ ಬದಲಾಗುತ್ತಿದೆ. ಆಷಾಢ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆ ವಾತಾವರಣ ಹಿತಕರವಾಗಿರುತ್ತದೆ. ಆದರೆ ಸಮಯ ವಾಹಿನಿಯಲ್ಲಿ ಕೊಂಚ ಬದಲಾವಣೆ ಆಗಲಿದೆ. ಮೂಲಗಳ ಪ್ರಕಾರ ಶಶಿಧರ್ ಭಟ್ ಚಾನಲ್‌ಗೆ ಗುಡ್ ಬೈ ಹೇಳುವ ಕಾಲ ಹತ್ತಿರವಾಗಿದೆ.

  ಶಶಿಧರ್ ಭಟ್ಟರು ತಮ್ಮ ಬ್ಲಾಗ್ ಹಾಗೂ ಫೇಸ್ ಬುಕ್ ಅಕೌಂಟ್‌ಗಳಲ್ಲಿ ಈ ಬಗ್ಗೆ ಪರೋಕ್ಷವಾಗಿ ಸುಳಿವೂ ನೀಡಿದ್ದಾರೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಭಟ್ಟರಿಗೆ ಸಾವಿರಾರು ಕರೆಗಳು ಬಂದಿವೆಯಂತೆ. ನಿಮ್ಮ ಪ್ರೀತಿಗೆ ವಿಶ್ವಾಸಕ್ಕೆ ನಾನು ಹೇಗೆ ಕೃತಜ್ಞತೆ ಸಲ್ಲಿಸಲಿ ಎಂದಿದ್ದಾರೆ ಭಟ್ಟರು.

  ಫೇಸ್ ಬುಕ್‌ನಲ್ಲಿನ ಅವರ ವೈರಾಗ್ಯದ ಮಾತುಗಳು ವಿದಾಯಕ್ಕೆ ಮುನ್ಸೂಚನೆ ನೀಡಿವೆ. ಶಶಿಧರ್ ಭಟ್ ನಿರ್ಗಮನದ ನಂತರ ಸಮಯ ಟಿವಿ ವಾಹಿನಿಯ ಸ್ಥಾವನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಈಗಾಗಲೆ ಮಾಧ್ಯಮ ವಲಯದಲ್ಲೂ ಉತ್ತರ ಸಿಕ್ಕಿದೆ.

  ಸಮಯ ಚಾನಲ್ ಹೆಡ್ ಆಗಿ ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಸಾರಥ್ಯ ವಹಿಸಲಿದ್ದಾರೆ. ಪ್ರಜಾವಾಣಿ, ಈಟಿವಿ ನ್ಯೂಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವ ಜಿ ಎಸ್ ಮೋಹನ್ ಅವರಿಗಿದೆ. ಅವಧಿ ವೆಬ್ ಸೈಟ್‌ನ ಮೋಹನ್ ಎಷ್ಟರ ಮಟ್ಟಿಗೆ ಮನಮೋಹನ್ ಆಗುತ್ತಾರೆ ಎಂಬುದು ಕಾದು ನೋಡಬೇಕು. ಶಶಿಧರ್ ಭಟ್ ಮುಂದಿನ ಪಯಣ ಎತ್ತ ಎಂಬುದು ನಿಗೂಢವಾಗಿದೆ. (ವಿವಿಧ ಮೂಲಗಳಿಂದ)

  English summary
  Media sources claims that present Samaya TV head Shashidhara Bhat has decided to resign from his post. The grapevine is abuzz that senior journalist GN Mohan would be appointed as new chief of the channel. Previously, he had worked in Prajavani and ETV Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X