ಮೇ.29ರಂದು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಗ್ರ್ಯಾಂಡ್ ಫಿನಾಲೆ

ಗ್ರ್ಯಾಂಡ್ ಫಿಲಾಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸುತ್ತಿರುವುದು ಪ್ರಮುಖ ಆಕರ್ಷಣೆ. ಉತ್ತರ ಕರ್ನಾಟಕದ ವಿಶಿಷ್ಟ ಸಂಸ್ಕೃತಿ, ಜೀವನ ಕ್ರಮವನ್ನು ಈ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗಿದೆ.
ಈ ಶೋನಲ್ಲಿ ಹನ್ನೆರಡು ಮಂದಿ ಪ್ಯಾಟೆ ಹುಡ್ಗೀರು ಹಳ್ಳಿ ಬದುಕನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಫೈನಲ್ ಪ್ರವೇಶಿಸುತ್ತಾರೆ. ಕಳೆದ ಮೂರು ತಿಂಗಳಿಂದ ಹಲವಾರು ಸುತ್ತುಗಳನ್ನು ಪೂರೈಸಿ ಈಗ ಅಂತಿಮ ಹಂತ ತಲುಪಿದೆ.
ಇದೇ ಭಾನುವಾರ ಸತತ 14 ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ನಿರಂತರವಾಗಿ 14 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ವಾಹಿನಿಯ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ತಿಳಿಸಿದ್ದಾರೆ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮವೇ ಪ್ಯಾಟೆ ಹುಡ್ಗೀರ್ ಹಳ್ಳಿ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Suvarna TV will be airing the final episode of Pyate Hudigiru Halli Lifu 2 (PHHL) for 14 hours tomorrow. The grand finale episode will begin at 9 am and will run until 11 pm on 29th May. The show spotlights 12 girls from city who left their urban surroundings and lived and experienced life among the village and learnt about their progress.
ಸುವರ್ಣ ಟಿವಿ ರಿಯಾಲಿಟಿ ಶೋ ಬಾದಾಮಿ ಬಾಗಲಕೋಟೆ ಶಿವಮೊಗ್ಗ ಕಿರುತೆರೆ ಉತ್ತರ ಕರ್ನಾಟಕ suvarna tv reality show bagalkot shimoga badami small screen


Click it and Unblock the Notifications











