twitter
    For Quick Alerts
    ALLOW NOTIFICATIONS  
    For Daily Alerts

    ಮೇ.29ರಂದು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಗ್ರ್ಯಾಂಡ್ ಫಿನಾಲೆ

    By Rajendra
    |

    Pyate Hudigiru Halli Lifu 2 grand finale
    ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-2' ಅಂತಿಮ ಹಂತಕ್ಕೆ ತಲುಪಿದೆ. ಕನ್ನಡಿಗರ ಮನೆಮಾತಾದ ಈ ಶೋನ ಗ್ರ್ಯಾಂಡ್ ಫಿನಾಲೆ ಇದೇ ಭಾನುವಾರ ಮೇ.29ರಂದು ಪ್ರಸಾರವಾಗಲಿದೆ ತಪ್ಪದೆ ನೋಡಿ ಆನಂದಿಸಿ.

    ಗ್ರ್ಯಾಂಡ್ ಫಿಲಾಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸುತ್ತಿರುವುದು ಪ್ರಮುಖ ಆಕರ್ಷಣೆ. ಉತ್ತರ ಕರ್ನಾಟಕದ ವಿಶಿಷ್ಟ ಸಂಸ್ಕೃತಿ, ಜೀವನ ಕ್ರಮವನ್ನು ಈ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗಿದೆ.

    ಈ ಶೋನಲ್ಲಿ ಹನ್ನೆರಡು ಮಂದಿ ಪ್ಯಾಟೆ ಹುಡ್ಗೀರು ಹಳ್ಳಿ ಬದುಕನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ಫೈನಲ್ ಪ್ರವೇಶಿಸುತ್ತಾರೆ. ಕಳೆದ ಮೂರು ತಿಂಗಳಿಂದ ಹಲವಾರು ಸುತ್ತುಗಳನ್ನು ಪೂರೈಸಿ ಈಗ ಅಂತಿಮ ಹಂತ ತಲುಪಿದೆ.

    ಇದೇ ಭಾನುವಾರ ಸತತ 14 ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ನಿರಂತರವಾಗಿ 14 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ವಾಹಿನಿಯ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ತಿಳಿಸಿದ್ದಾರೆ.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮವೇ ಪ್ಯಾಟೆ ಹುಡ್ಗೀರ್ ಹಳ್ಳಿ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Suvarna TV will be airing the final episode of Pyate Hudigiru Halli Lifu 2 (PHHL) for 14 hours tomorrow. The grand finale episode will begin at 9 am and will run until 11 pm on 29th May. The show spotlights 12 girls from city who left their urban surroundings and lived and experienced life among the village and learnt about their progress.
    Friday, May 27, 2011, 11:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X