For Quick Alerts
  ALLOW NOTIFICATIONS  
  For Daily Alerts

  ಅಮೀರ್ ಶೋ ಸತ್ಯಮೇವ ಜಯತೆಯಲ್ಲಿ ಏನಿದೆ?

  By Rajendra
  |
  <ul id="pagination-digg"><li class="previous"><a href="/tv/28-satyamev-jayate-aamir-khan-remuneration-aid0052.html">« Previous</a>

  ಜನಪ್ರಿಯ ಧಾರಾವಾಹಿಗಳಾಗಿದ್ದ ರಾಮಾಯಣ ಹಾಗೂ ಮಹಾಭಾರತ ಪ್ರಸಾರವಾಗಿದ್ದ ಸಮಯವನ್ನು ದೂರದರ್ಶನ ಹಾಗೂ ಸ್ಟಾರ್ ನೆಟ್‌ವರ್ಕ್ಸ್ ವಾಹಿನಿಗಳು ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಕಾರ್ಯಕ್ರಮಕ್ಕೆ ನಿಗದಿಪಡಿಸಿವೆ. ಅಂದರೆ ಹೆಚ್ಚಾಗಿ ಫ್ಯಾಮಿಲಿ ಆಡಿಯನ್ಸನ್ನು ಸೆಳೆಯುವ ಉದ್ದೇಶ ಅವರದು.

  'ಸತ್ಯಮೇವ ಜಯತೆ' ಕಾರ್ಯಕ್ರಮ ಯಾವುದರ ಬಗ್ಗೆ ಬೆಳಕು ಚೆಲ್ಲುತ್ತದೆ? ಈ ಕಾರ್ಯಕ್ರಮದ ಉದ್ದೇಶಗಳೇನು? ಇದೊಂದು ರಿಯಾಲಿಟಿ ಕಾರ್ಯಕ್ರಮವೇ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಈ ಕಾರ್ಯಕ್ರಮದ ಉದ್ದೇಶವೇನು ಎಂಬ ಗುಟ್ಟನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ.

  ಮೂಲಗಳ ಪ್ರಕಾರ ಈ ಕಾರ್ಯಕ್ರಮ 'ಕಾಮನ್ ಮ್ಯಾನ್'ಗೆ ಸಂಬಂಧಪಟ್ಟಿದ್ದು. ಇಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲಕಾರ್ಮಿಕ ಪದ್ಧತಿ, ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದಂತೆ. ಹೌದೇ ಎಂದರೆ ಈ ಬಗ್ಗೆ ಅಮೀರ್ ಕೂಡ ತುಟಿ ಬಿಚ್ಚುತ್ತಿಲ್ಲ. "ಈ ಬಗ್ಗೆ ಹೆಚ್ಚಿಗೇನು ನಾನು ಮಾತನಾಡುವುದಿಲ್ಲ. ಪ್ರತಿಯೊಬ್ಬರು ಟಿವಿ ನೋಡಿ. ನಿಮಗೇ ಗೊತ್ತಾಗುತ್ತದೆ" ಎಂದಿದ್ದಾರೆ. ಆಯ್ತು ಮೇ 6ರ ತನಕ ಕಾಯೋಣ. (ಒನ್‌ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/tv/28-satyamev-jayate-aamir-khan-remuneration-aid0052.html">« Previous</a>
  English summary
  The concept of Aamir Khan's Satyamev Jayate show was not revealed in the Indian media till the show officially went on air on 6 May 2012. However, various sources reported the show to be based on "the common man" rather than being fictional. Also, based on its content, it was mostly referred as a talk show discussing social issues like child labour, health problems and other issues affecting the country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X