ಕನ್ನಡದ ಕೋಟ್ಯಾಧಿಪತಿ ಮಾರ್ಚ್ 12ಕ್ಕೆ ಪ್ರಾರಂಭ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ ಸುವರ್ಣ' ವಾಹಿನಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮುಂದಿನ ತಿಂಗಳು, ಮಾರ್ಚ್ 12, 2012ರಿಂದ ಪ್ರಾರಂಭವಾಗಲಿದೆ. ಸೋಮವಾರದಿಂದ ಗುರುವಾರದವರೆಗೆ ಸಾಯಂಕಾಲ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಕನ್ನಡದ ಕೋಟ್ಯಾಧಿಪತಿಯಲ್ಲಿ ಒಟ್ಟೂ 40 ಸಂಚಿಕೆಗಳಿವೆ. ಕನ್ನಡ, ತಮಿಳು ಹಾಗೂ ಮಲೆಯಾಳಂ, ಹೀಗೆ 3 ಭಾಷೆಗಳಲ್ಲಿ ಇದು ಸಿದ್ಧವಾಗುತ್ತಿದ್ದು ಮೂರೂ ಭಾಷೆಗಳ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಸಂಚಿಕೆಗಳ ಚಿತ್ರೀಕರಣ ಮುಗಿದ್ದಿದ್ದು ಇದೀಗ ಪ್ರಸಾರಕ್ಕೆ ದಿನಗಣನೆ ಪ್ರಾರಂಭವಾಗಿದೆ.
ಮೂರೂ ಭಾಷೆಗಳ ಸಂಚಿಕೆಗಳು ಒಂದಾದ ನಂತರ ಮತ್ತೊಂದರಂತೆ ಚಿತ್ರೀಕರಣಗೊಳ್ಳುತ್ತಿವೆ. ಕನ್ನಡದಲ್ಲಿ ಈ ಕಾರ್ಯಕ್ರಮ ಹೊಸ ಪ್ರಯತ್ನವಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಾಕಷ್ಟು ಪ್ರಚಾರ ಪಡೆದಿರುವ ಈ ಶೋ, ಪ್ರಸಾರ ಪ್ರಾರಂಭದ ನಂತರ ದಾಖಲೆ ಮೆರೆದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
Power Star Puneeth Rajkumar hosting 'Kannadada Kotyadhipati' Programme of Suvarna Channel starts from 12th March, 2012. This will telecasts Monday to Thursday, 8 pm IST.
ಪುನೀತ್ ರಾಜ್ ಕುಮಾರ್ ಕಿರುತೆರೆ ಸುವರ್ಣ ಟಿವಿ puneeth rajkumar tv suvarna tv ಕನ್ನಡ ಕೋಟ್ಯಾಧಿಪತಿ kannada kotyadipathi


Click it and Unblock the Notifications











