twitter
    For Quick Alerts
    ALLOW NOTIFICATIONS  
    For Daily Alerts

    ಶತಕದ ಸಮೀಪದಲ್ಲಿ ಗುರು ರಾಘವೇಂದ್ರ ವೈಭವ

    By Mahesh
    |

    ಕರ್ನಾಟಕ ಜನತೆಯ ಆರಾಧ್ಯ ಗುರು, ಮಂತ್ರಾಲಯದ ಮಹಿಮಾ ಪುರುಷ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನಗಾಥೆಯ ಸಂಪೂರ್ಣ ಚಿತ್ರಣ ನೀಡುವ "ಗುರು ರಾಘವೇಂದ್ರ ವೈಭವ" ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಸದ್ಯವೇ ಶತಕ ಬಾರಿಸಲಿದೆ. ಎಂ ಎಸ್ ರಾಮಯ್ಯ ಅವರ ಪುರ ಎಂ ಆರ್ ಪಟ್ಟಾಭಿರಾಮ್ ಅವರಿಗೆ ಗಂಡುಗಲಿ ಕುಮಾರ ರಾಮ ಚಿತ್ರ ತೋಪೆದ್ದು ಆದ ಆರ್ಥಿಕ ನಷ್ಟ, ಮಾನಸಿಕ ನೋವನ್ನು 'ಗುರು ರಾಘವೇದ್ರ ವೈಭವ' ಸಿರೀಯಲ್ ನೀಗಿಸಿದೆ ಎಂದರೆ ತಪ್ಪಾಗಲಾರದು.

    ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ 10 ಗಂಟೆಗೆ ಕನ್ನಡ ಜನತೆ ಭಯ ಭಕ್ತಿಗಳಿಂದ ಟಿವಿಯ ಮುಂದೆ ಕೂತು ಭಾಗವತ್ತೋಮರ ಕಥೆಯನ್ನು ಸವಿಯುತ್ತಿದ್ದಾರೆ. ವಿಭನ್ನ ಕಾರ್ಯಕ್ರಮಗಳನ್ನು ಮಾಡುವ ಕಾತುರತೆಯಲ್ಲಿದ್ದ ಸುವರ್ಣ ವಾಹಿನಿಗೆ ಈ ಧಾರಾವಾಹಿ ಹೊಸ ಹುರುಪನ್ನು ನೀಡಿದೆ.

    ಮಂತ್ರಾಲಯ ಮಹಾತ್ಮೆ ಸೇರಿದಂತೆ ರಾಯರ ಬಗ್ಗೆ ಅನೇಕ ಚಿತ್ರಗಳು ಈಗಾಗಲೇ ಜನಜನಿತವಾಗಿದೆ. ಡಾ. ರಾಜ್ ಕುಮಾರ್, ರಜಿನಿ ಕಾಂತ್ ರಂಥ ಮೇರು ನಟರು ರಾಯರ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಜನಕ್ಕೆ ಹೊಸತನ್ನು ನೀಡುವುದರ ಜೊತೆಗೆ, ಶ್ರೀ ರಾಘವೇಂದ್ರಸ್ವಾಮಿಗಳ ಸಂಪೂರ್ಣ ಚರಿತ್ರೆಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ಜನರ ಅಪೇಕ್ಷೆಗೆ ತಕ್ಕಂತೆ ಧಾರಾವಾಹಿ ಮುಂದುವರೆದಿದ್ದು, ಇದೇ ನವೆಂಬರ್ 5 ರಂದು ನೂರನೇ ಕಂತು ಪೂರೈಸುತ್ತಿರುವುದು ಹರ್ಷ ತಂದಿದೆ ಎನ್ನುತ್ತಾರೆ ಪಟ್ಟಾಭಿರಾಮ್.

    ಈ ಸೀರಿಯಲ್ ಮಾಡುವ ಬುದ್ಧಿ ನನಗೆ ನೀಡಿದ್ದು ರಾಯರು, ಅವರ ಆಶೀರ್ವಾದದಿಂದಲೇ ಎಲ್ಲ ಸುಸೂತ್ರವಾಗಿ ನಡೆದಿದೆ. ಇನ್ನೂ 200 ಎಪಿಸೋಡ್ ಗಳಷ್ಟು ಕಥೆ ಹೇಳುವುದು ಬಾಕಿಯಿದೆ. ವಿಜಯನಗರ ಅರಸರ ಕಥೆ ಹಾಗೂ ಶ್ರೀ ಶಂಕರಾಚಾರ್ಯರ ಕಥೆಯನ್ನು ಕಿರುತೆರೆ ತರುವ ಆಲೋಚನೆ ಕೂಡಾ ನಡೆದಿದೆ ಎಂದರು.

    ಐತಿಹಾಸಿಕ ಹಾಗೂ ಪುರಾಣಗಳನ್ನು ಆಧಾರಿತವಾದ ಧಾರಾವಾಹಿಗಳನ್ನು ನಿರ್ದೇಶಿಸುವ ಕಷ್ಟವನ್ನು ತೋಡಿಕೊಂಡ ನಿರ್ದೇಶಕ ಬ.ಲ. ಸುರೇಶ್, ನಾವು ಜನಕ್ಕೆ ಸರಳವಾಗಿ ಹಾಗೂ ಸ್ಪಷ್ಟವಾಗಿ ಸಂದೇಶವನ್ನು ಮುಟ್ಟಿಸಬೇಕು ಇಲ್ಲದಿದ್ದರೆ ನಾವು ಗೊಂದಲಕ್ಕೀಡಾದರೆ ಜನಕ್ಕೂ ಅದನ್ನು ತಲುಪಿಸಿಬಿಡುತ್ತೀವಿ. ಕ್ರಿ.ಶ.1595 ರಲ್ಲಿ ವೆಂಕಟನಾಥನ ಜನನದಿಂದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳಾಗುವವರೆಗಿನ ಕಥೆ ತುಂಬಾ ಸುದೀರ್ಘವಾದದ್ದು,ಆಳವಾದ ಅಧ್ಯಯನ ನಡೆಸಿ ಚಿತ್ರಕತೆ-ಸಂಭಾಷಣೆ ರಚಿಸಲಾಗಿದೆ ಎಂದರು.

    ಮಾಸ್ಟರ್ ಸೌರಭ್, ಪರೀಕ್ಷೀತ್, ಲಕ್ಷ್ಮಿ ಹೆಗಡೆ, ಶಂಕರ್ ಭಟ್, ಪ್ರಶಾಂತ್ ಮುಂತಾದವರ ಅಭಿನಯವನ್ನು ಹೊಗಳಿದ ನಿರ್ದೇಶಕರು, ಕೆಲ ಎಪಿಸೋಡ್ ಗಳು ತುಂಬಾನೆ ಎಳೆದಾಡಿದಂತ್ತಿದೆ ಎನ್ನುವುದನ್ನು ಒಪ್ಪಿಕೊಂಡರಲ್ಲದೆ, ಅದಷ್ಟು ಜಾಗರೂಕತೆಯಿಂದ ಕಥೆಯ ವೇಗವನ್ನು ಹೆಚ್ಚಿಸುವ ಭರವಸೆ ನೀಡಿದರು.


    ವಿಡಿಯೋಗಳು:
    .ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
    ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

    Thursday, October 28, 2010, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X