For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡದಲ್ಲಿ ಪಿ ಶೇಷಾದ್ರಿ ಚಕ್ರತೀರ್ಥ ಧಾರಾವಾಹಿ

  By Rajendra
  |

  ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ ಚಕ್ರತೀರ್ಥ ಧಾರಾವಾಹಿ ಈಟಿವಿ ಕನ್ನಡದಲ್ಲಿ ಆರಂಭವಾಗಿದೆ. ಇದೇ ಫೆಬ್ರವರಿ 27ರಿಂದ ಮಧ್ಯಾಹ್ನ 1ಗಂಟಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಬಹುತೇಕ ಹೊಸಬರು ತುಂಬಿರುವುದು ವಿಶೇಷ.

  'ಚಕ್ರತೀರ್ಥ' ಎಂಬ ಹಿನ್ನೀರ ದ್ವೀಪ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳ. ಅದನ್ನು 'ಕೋರಿಕೆ ಗುಡ್ಡ" ಎಂದೂ ಕರೆಯುತ್ತಾರೆ. ಅಲ್ಲಿ ಏನನ್ನಾದರೂ ಕುರಿತುಕೊಂಡರೆ ಅದು ತಪ್ಪದೆ ಈಡೇರುತ್ತದೆ ಎನ್ನುವುದು ಒಂದು ಪ್ರಬಲವಾದ ನಂಬಿಕೆ. ಕೆಲವರು ಅಲ್ಲಿ ಬದುಕಿನ ಉನ್ನತಿಯನ್ನು ಅರಸಿ ಹೋದರೆ ಇನ್ನು ಕೆಲವರು ಸಾಯಲು ಹೋಗುತ್ತಾರೆ!

  ಈ ಹಿಂದೆ ಇಂಚರ, ಕಾಮನಬಿಲ್ಲು, ಕಥೆಗಾರ, ನಿಕ್ಷೇಪ, ಕಣ್ಣಾಮುಚ್ಚಾಲೆ, ಉಯ್ಯಾಲೆ, ಸುಬ್ಬಣ್ಣ, ಮೌನರಾಗ, ಸುಬ್ರಭಾತ ಧಾರಾವಾಹಿಗಳನ್ನು ಪಿ ಶೇಷಾದ್ರಿ ನಿರ್ದೇಶಿಸಿದ್ದರು. 'ಚಕ್ರತೀರ್ಥ' ಧಾರಾವಾಹಿಯಲ್ಲಿ ರಶ್ಮಿ, ಜ್ಯೋತಿ, ಅಕ್ಷತಾ, ಮಾಲಾ, ಶಶಿರಾವ್, ಸಿದ್ದು, ಸದಾನಂದ, ಅಶ್ವಿಲ್ ಸರಾವ್ ಮುಂತಾದವರು ನಟಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Kannada films renowned filmmaker and director P Sheshadri's new daily serial Chakrateertha starts on Etv Kannada. The story revolves around two sisters Neethi and Pranathi. They never get along due to their sibling rivalry. Will they be able to put an end to their disputes?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X