ಸತ್ಯಮೇವ ಜಯತೆಗೆ ಅಮೀರ್ ಖಾನ್ ಪಡೆದದ್ದೆಷ್ಟು?

ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಲಗ್ಗೆ ಇಟ್ಟಿರುವ ಅಮೀರ್ ಖಾನ್ ಈ ಶೋ ನಡೆಸಿಕೊಡಲು ಭಾರಿ ಸಂಭಾವನೆಯನ್ನೇ ಪಡೆದಿದ್ದಾರೆ. 'ಕೌನ್ ಬನೇಗಾ ಕರೋಡ್‌ಪತಿ 5'ರಲ್ಲಿ ಅಮೀತ್ ಬಚ್ಚನ್ ಪಡೆದ ಮೊತ್ತಕ್ಕಿಂತಲೂ ಅಮೀರ್ ಹೆಚ್ಚಿಗೆ ಎಣಿಸಿದ್ದಾರೆ.
ಬಾಲಿವುಡ್ ಮೂಲಗಳ ಪ್ರಕಾರ ಅಮೀರ್ ಈ ಶೋಗಾಗಿ ರು.3 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಕರೋಡ್‌ಪತಿಗಾಗಿ ಅಮಿತಾಬ್ ಕೇವಲ ರು.2 ಕೋಟಿ ಸಂಭಾವನೆ ಪಡೆದಿದ್ದರು. ರಿಯಾಲಿಟಿ ಶೋ 'ಬಿಗ್ ಬಾಸ್ 5'ರಲ್ಲಿ ಭಾಗವಹಿಸಲು ಸಲ್ಮಾನ್ ಖಾನ್ ಪಡೆದದ್ದು ಕೇವಲ ರು.1.5 ಕೋಟಿ. ಇನ್ನು ಡ್ಯಾನ್ಸ್ ರಿಯಾಲಿಟಿ ಶೋ 'ಜಸ್ಟ್ ಡ್ಯಾನ್ಸ್'ಗಾಗಿ ಹೃತಿಕ್ ರೋಷನ್ ಎಣಿಸಿದ್ದು ರು.1.5 ಕೋಟಿ ಅಷ್ಟೆಯಾ. (ಒನ್‌ಇಂಡಿಯಾ ಕನ್ನಡ)
More from Filmibeat
English summary
The recent entry of actor Aamir Khan on television has apparently led to a reshuffle as buzz has it that he’s getting paid Rs. 3 crore to anchor Satyamev Jayate (Truth Alone Prevails)is an upcoming Indian Hindi TV show to be aired on Star Network and Doordarshan.


Click it and Unblock the Notifications











