ತಪ್ಪದೆ ನೋಡಿ ಡಿಡಿ ಚಂದನದಲ್ಲಿ ಭಗವದ್ಗೀತ ಸಂವಾದ

ಪ್ರತಿ ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆ 8ರಿಂದ 8.30ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮ ಆಸ್ತಿಕರ ಜ್ಞಾನದಾಹದನ್ನು ತಣಿಸುತ್ತಿದೆ. ತಮ್ಮ ವಾಕ್ ಚಾತುರ್ಯದಿಂದ ಪಾವಗಡ ಪ್ರಕಾಶ್ ರಾವ್ ಅವರು ಸರಳವಾಗಿ ಎಲ್ಲರಿಗೂ ಮನದಟ್ಟಾಗುವಂತೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಎಲ್ಲರ ಮನ ಗೆದ್ದಿದ್ದಾರೆ.
ಭಗವದ್ಗೀತೆಯ ಬಗ್ಗೆ ಅನೇಕರಿಗೆ ಇರುವ ಗೊಂದಲ, ಸಂದೇಹಗಳನ್ನು ಸಮಂಜಸ ಉತ್ತರಗಳ ಮೂಲಕ ನೀಡಿದ್ದಾರೆ. ಅವರು ಕೊಟ್ಟ ಉತ್ತರಗಳ ಸಂಗ್ರಹ ಭಾಗ ಈಗ 'ಭಗವದ್ಗೀತ ಸಂವಾದ' ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದ ನಿರ್ದೇಶಕರು ಕೆ.ಪುರುಷನಾಥ್. ಸಂಗೀತವನ್ನು ಎಂ.ಎಸ್.ಮಾರುತಿ ಒದಗಿಸಿದ್ದಾರೆ. ಸಾಹಿತ್ಯವನ್ನು, ಚಿಂದೋಡಿ ಬಂಗಾರೇಷ್. ಶೀರ್ಷಿಕೆಯ ಜನಪ್ರಿಯ ಶ್ಲೋಕ ವನ್ನು,ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮ್ಹಣ್ಯಂ ರಸವತ್ತಾಗಿ ಹಾಡಿದ್ದಾರೆ. ಸಂಕಲನ, ಹರೀಶ್ ಕೊದ್ವಾಡಿಯವರದು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Bhagvadgeetha Samvada, a devotional program by Vidwan Pavagada Prakash Rao, an eminent speaker, orator and a cultural torchbearer is playing Sunday, April 1 at 8:00 PM on DD Chandana.


Click it and Unblock the Notifications











