ವೇಶ್ಯಾವಾಟಿಕೆ ಜಾಲದಲ್ಲಿದ್ದ ಕಿರುತೆರೆ ನಟಿಯರ ಸೆರೆ

ಎಚ್ಎಸ್ಆರ್ ಲೇಔಟ್ 7ನೇ ಸೆಕ್ಟರ್ ನ ನಿವಾಸಿ ಸರೋಜ ಅಲಿಯಾಸ್ ಸುಷ್ಮಾ(50), ಬನ್ನೇರುಘಟ್ಟ ಬಿಳೇಕಳ್ಳಿ ನಿವಾಸಿ ಅನಿತಾ(35), ತುಮಕೂರು ನೊಣವಿಕೆರೆ ಮೂಲದ ದೀಕ್ಷಿತಾ(24) ಹಾಗೂ ಕೃಷ್ಣಮೂರ್ತಿ ಎಂಬುವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಾವು ಕಿರುತೆರೆ ನಟಿಯರು ಎಂದು ಹೇಳಿ ಹೆಚ್ಚು ಹಣ ಸಂಪಾದಿಸುತ್ತಿದ್ದರು. ಬಂಧಿತರಲ್ಲಿ ಕೃಷ್ಣಮೂರ್ತಿ ಅವರ ಪತ್ನಿ ಸರೋಜ ಅವರು ಮಾತ್ರ ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರು ಎಂದು ತಿಳಿದು ಬಂದಿದೆ. ಉಳಿದವರು ಕಿರುತೆರೆಯಲ್ಲಿ ನಟಿಸಿದ್ದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ವೃತ್ತಿಯಿಂದ ಚಾಲಕನಾಗಿರುವ ಕೃಷ್ಣಮೂರ್ತಿ, ಎಚ್ ಎಸ್ ಆರ್ ಲೇಔಟ್ 7ನೇ ಸೆಕ್ಟರ್ 9ನೇ ಮುಖ್ಯರಸ್ತೆ, 20ನೇ ಅಡ್ಡರಸ್ತೆಯಲ್ಲಿರುವ ತನ್ನ ಮನೆಯನ್ನೇ ವೇಶ್ಯಾವಾಟಿಕೆ ಅಡ್ಡಾ ಮಾಡಿಬಿಟ್ಟಿದ್ದ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ, ಗೂಂಡಾಗಳನ್ನು ಕರೆದುಕೊಂಡು ಬಂದು ಹೆದರಿಸುತ್ತಿದ್ದ.
ವೇಶ್ಯಾವಾಟಿಕೆ ದಂಧೆಯಲ್ಲಿ ಪಿಂಪ್ ರೀತಿ ಕೆಲಸಮಾಡುತ್ತಿದ್ದ. ಅನಿತಾ ಹಾಗೂ ದೀಕ್ಷಿತಾ ಅವರನ್ನು ಟಿವಿ ನಟಿಯರು ಎಂದು ಪರಿಚಯಿಸಿ ಜಾಸ್ತಿ ಹಣ ಗಿಟ್ಟಿಸುತ್ತಿದ್ದ ಎಂದು ಎಚ್ಎಸ್ ಆರ್ ಲೇಔಟ್ ಠಾಣಾಧಿಕಾರಿ ಹೇಳಿದ್ದಾರೆ.


Click it and Unblock the Notifications