ಗರ್ಭಿಣಿ ಐಶ್ವರ್ಯರಿಂದಾಗಿ ಕೆಬಿಸಿ 5 ಅಕಾಲಿಕ ಅಂತ್ಯ

By Srinath

29-kbc-quiz-to-end-early-thanks-to-pregnant-aishwarya
ಬಿಹಾರದ ಸುಶೀಲ್ ಕುಮಾರ್ ಪ್ರಸಕ್ತ ಸಾಲಿನ 'ಕೌನ್ ಬನೇಗಾ ಕರೋಡ್ ಪತಿ' ಕ್ವಿಜ್ ಕಾರ್ಯಕ್ರಮದಲ್ಲಿ ಐದು ಕೋಟಿ ಬಹುಮಾನವನ್ನು ಗೆದ್ದುಕೊಳ್ಳುವ ಮೂಲಕ 'ಕೌನ್ ಬನೇಗಾ ಪಂಚ್ ಕೋಟಿ ಮಹಾ ಮನಿ' ಮುಂದಿನ ತಿಂಗಳು ಮುಕ್ತಾಯವಾಗಲಿದೆ.

ಕೌಟುಂಬಿಕ ವಿಷಯವಾಗಿ ನವೆಂಬರ್ ನಂತರವೂ 'ಕೌನ್ ಬನೇಗಾ ಕರೋಡ್ ಪತಿ' ನಡೆಸಿಕೊಡುವುದು ಕಷ್ಟವಾಗಲಿದೆ ಎಂದು ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಅವರು ಕಾರ್ಯಕ್ರಮ ಪ್ರಾಯೋಜಕರಾದ ಸೋನಿ ಟಿವಿಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಬಾರಿ ಕೆಬಿಸಿ ಬೇಗನೇ ಮುಕ್ತಾಯ ಕಾಣಲಿದೆ. ಸಾಮಾನ್ಯವಾಗಿ ಕೆಬಿಸಿ ಡಿಸೆಂಬರ್ ಕೊನೆಯವರೆಗೂ ನಡೆಯುತ್ತಿತ್ತು.

ತಮ್ಮ ಸೊಸೆ, ಕನ್ನಡತಿ ಐಶ್ವರ್ಯ ರೈ ನವೆಂಬರ್ ಮಧ್ಯ ಭಾಗದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಆ ಸಂತಸವನ್ನು ಹಂಚಿಕೊಳ್ಳುವ ಸಲುವಾಗಿ ತಾವು ಪರಿವಾರದೊಂದಿಗೆ ಇರಬಯಸುವುದಾಗಿ ಅಮಿತಾಬ್ ಹೇಳಿಕೊಂಡಿದ್ದಾರೆ. ಕೆಬಿಸಿ ಪೂರ್ವ ನಿಗದಿಗಿಂತ ಮುನ್ನವೇ ಮುಕ್ತಾಯವಾಗುತ್ತಿರುವುದಕ್ಕೆ ಇದು ಸಕಾರಣವಾಗಿದೆ ಎನ್ನಲಾಗಿದೆ.

ಅಂದಹಾಗೆ, ಸುಶೀಲ್ ಕುಮಾರ್ ವಿಜೇತ ಜಾಕ್ ಪಾಟ್ ಎಪಿಸೋಡ್ ಇದೇ ನವೆಂಬರ್ 2 ಬುಧವಾರದಂದು ಪ್ರಸಾರವಾಗಲಿದೆ. ಆದರೆ ಸೋನಿ ಟಿವಿ ಪ್ರಕಾರ ನವೆಂಬರ್ 1ರಂದೇ ಇದು ಪ್ರಸಾರವಾಗಲಿದೆ. ಯಾವುದಕ್ಕೇ ಆಗಲಿ ನವೆಂಬರ್ 1, 2 ರಂದು ಸೋನಿ ಟಿವಿ ಮುಂದೆ ಪಟ್ಟಂಗ ಹಾಕಿ ಕುಳಿತುಕೊಳ್ಳುವುದು ಒಳಿತು.

More from Filmibeat

English summary
The Amitabh Bachchan hosted Sony TV Quiz programme Kaun Banega Crorepati-5, will find premature end this season thanks to pregnant Aishwarya Rai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X