ಪುನೀತ್ 'ಕಂಪ್ಯೂಟರ್ ಜೀ' ಹೆಸರು ಬಹಿರಂಗ

By Mahesh

Puneeth Computer jee
ಕನ್ನಡ ಕೋಟ್ಯಾಧಿಪತಿ ಸ್ಪರ್ಧೆಯ ಬಿಸಿ ದಿನೇದಿನೇ ಏರುತ್ತಿದೆ. ಪವರ್ ಸ್ಟಾರ್ 'ಕಂಪ್ಯೂಟರ್ ಜೀ' ಯನ್ನು ಏನೆಂದು ಕರೆಯುತ್ತಾರೆ ಎಂಬುದು ಲೀಕ್ ಆಗಿದೆ. ಲಭ್ಯ ಮಾಹಿತಿ ಪ್ರಕಾರ ತಮಿಳಿನ ಸೂಪರ್ ಸ್ಟಾರ್ ಸೂರ್ಯ ಅವರ ಶೈಲಿಯನ್ನೇ ಪುನೀತ್ ಅನುಕರಿಸಲಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಸರಿಯುತ್ತರ ಪಡೆಯಲು 'ಕಂಪ್ಯೂಟರ್ ಜೀ' ಎಂದು ಸಂಬೋಧಿಸುವಂತೆ, ಪುನೀತ್ ರಾಜ್ ಕುಮಾರ್ ಅವರು ಯಾವ ಹೆಸರಿನಿಂದ ಕಂಪ್ಯೂಟರ್ ಅನ್ನು ಕರೆಯಬೇಕು ಎಂದು ಚರ್ಚೆಗೆ ಸಾವಿರಾರು ಕಾಮೆಂಟುಗಳು, ಉತ್ತರಗಳು, ಸಲಹೆಗಳು ಬಂದಿತ್ತು.

ಸೂರ್ಯ ತನ್ನ ಕಂಪ್ಯೂಟರ್ ಅನ್ನು ಕರೆಯುವಂತೆ ಪುನೀತ್ ಕೂಡಾ 'ಮಿಸ್ಟರ್ ಜೀನಿಯಸ್' ಅಥವಾ 'ಜಿನಿಯಸ್' ಎಂದು ಕರೆಯುತ್ತಾರೆ. ಹಾಗೂ ಉತ್ತರಗಳನ್ನು 'ಲಾಕ್' ಮಾಡುವ ಬದಲು 'ಫಿಕ್ಸ್' ಮಾಡುತ್ತಾರೆ ಎಂಬ ವಿಷಯ ಬಹಿರಂಗವಾಗಿದೆ.

ಆದರೆ, ಸೂರ್ಯ ಅಪ್ಪಟ ತಮಿಳಿನಲ್ಲಿ ಮಾತನಾಡುವಂತೆ, ಪುನೀತ್ ಕೂಡಾ ಅಪ್ಪಟ ಕನ್ನಡ ಬಳಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಪರಮಾತ್ಮನಿಗೆ ಮಾತ್ರ ಗೊತ್ತು. ತಮಿಳಿನಲ್ಲಿ ಈಗಾಗಲೇ ಆರಂಭವಾಗಿರುವ ಕೋಟ್ಯಾಧಿಪತಿ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸುತ್ತಿದೆ.

ಮಾರ್ಚ್ 12, 2012ರಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ ಕನ್ನಡ ಕೋಟ್ಯಾಧಿಪತಿ ಪ್ರಾರಂಭವಾಗಲಿದೆ. ಸೋಮವಾರದಿಂದ ಗುರುವಾರದವರೆಗೆ ಸಾಯಂಕಾಲ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಪುನೀತ್ ತಮ್ಮ ಪವರ್ ಫುಲ್ ಡೈಲಾಗ್ ಮೂಲಕ ಯಾವ ರೀತಿ ಕಾರ್ಯಕ್ರಮ ಮುನ್ನೆಡೆಸುತ್ತಾರೆ ಕಾದು ನೋಡಬೇಕಿದೆ.

More from Filmibeat

English summary
Kannada Kotyadipathi: Much awaited answer for the question What should Puneeth Rajkumar call the computer just like Amitabh Bachchan used to call it 'computer jee'? is leaked Puneeth is likely to call it as 'Mr. Genius' similar to his Tamil counterpart Actor Suriya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X