twitter
    For Quick Alerts
    ALLOW NOTIFICATIONS  
    For Daily Alerts

    ಮಹಾಲಕ್ಷ್ಮಿ ಹೆಸರು ಇಟ್ಟುಕೊಂಡರೆ ಕಷ್ಟ ಅಷ್ಟಿಷ್ಟಲ್ಲ

    By * ಶಾಮಿ
    |
    <ul id="pagination-digg"><li class="previous"><a href="/tv/29-samaya-tv-astrlogy-goddess-lakshmi-nameology-part1-aid0037.html">« Previous</a>

    Reddy arrest, Goddess Lakshmi curse?
    ಎಲ್ಲರೂ ಪೂಜಿಸುವ ದೇವತೆಯ ಹೆಸರನ್ನು ಇಟ್ಟುಕೊಂಡ ವಿಜಯಲಕ್ಷ್ಮಿ, ಜಯಲಕ್ಷ್ಮಿ, ರಾಜಲಕ್ಷ್ಮಿ, ಕನಕಲಕ್ಷ್ಮಿ, ಶ್ರೀ ಲಕ್ಷ್ಮಿ, ವಸಂತ ಲಕ್ಷ್ಮಿ, ಮಹಾಲಕ್ಷ್ಮಿ, ಸೀತಾಲಕ್ಷ್ಮಿ, ಮುತ್ತುಲಕ್ಷ್ಮಿಯರನ್ನು " ಬಾರೆ ಹೋಗೆ ; ಕೂತ್ಕೊಳೆ ನಿಂತ್ಕೊಳೆ" ಎಂದು ನಿತ್ಯ ಸಂಭೋದಿಸುತ್ತಿದ್ದರೆ ದೈವನಿಂದನೆಯ ಪಾಪ ಸುತ್ತಿಕೊಳ್ಳುವುದು ಗ್ಯಾರಂಟಿ. ಹಾಗೆನ್ನುತ್ತಾರೆ ಸಮಯ ಟಿವಿ 24/7 numerologist.

    ಲಕ್ಷ್ಮಿ ಹೆಸರು ಹೆಂಗಸರಿಗೆ ಮಾತ್ರ ನಿಷಿದ್ಧವಲ್ಲ. ಗಂಡಸರೂ ಇಟ್ಟುಕೊಳ್ಳಬಾರದು. ಲಕ್ಷ್ಮೀಪತಿ ಕೋಲಾರ, ಲಕ್ಷ್ಮೀನಾರಾಯಣ ಗಣಪತಿ, ಸಿಬಿಐ ನಿರ್ದೇಶಕ ವಿವಿ ಲಕ್ಷ್ಮೀನಾರಾಯಣ, ಲಕ್ಷ್ಮೀಶ ತೋಳ್ಪಾಡಿ. ಗುಡಿಬಂಡೆ ಲಕ್ಷ್ಮೀನರಸಿಂಹಯ್ಯ..ಈ ಬಗೆಯ ಹೆಸರುಗಳು ವರ್ಜ್ಯ. ಇಟ್ಕೊಂಡರೆ ಅಂಥ ತಪ್ಪೇನೂ ಆಗಲ್ಲ. ಆದರೆ, ಇಂಥವರಿಗೆ ಎರಡು ಮದುವೆ, ಎರಡು ಪ್ರೇಮ, ಎರಡು ಸಂಬಂಧ ಕಟ್ಟಿಟ್ಟ ಬುತ್ತಿ.

    ಪರಿಸ್ಥಿತಿ ಹೀಗಿರುವಾಗ, ಈಗಾಗಲೇ ಲಕ್ಷ್ಮೀ ಹೆಸರನ್ನು ಇಟ್ಟುಕೊಂಡವರ ಪಾಡೇನು? ಇದು ಫೋನ್ ಇನ್ ಕಾರ್ಯಕ್ರಮದಲ್ಲಿ ಅನೇಕರನ್ನು ಕಳವಳಕ್ಕೇ ಈಡುಮಾಡಿದ ಪ್ರಶ್ನೆಯಾಗಿತ್ತು. ದಾಖಲೆಗಳಲ್ಲಿ ಹೆಸರುಗಳು ಹೇಗಿವೆಯೋ ಹಾಗಿರಲಿ, ಆದರೆ ನೀವು ಅವಳನ್ನು ಕರೆಯುವಾಗ ಮಾತ್ರ ಬೇರೆ ಹೆಸರು ಬಳಸಿ ಎಂದು ಜ್ಯೋತಿಷಿಗಳು ಪರಿಹಾರ ಸೂಚಿಸಿದರು.

    ಏನೇ ಆಗಲಿ, ಜ್ಯೋತಿಷಿಗಳು ಹೇಳಿದ ಮಾತ್ರಕ್ಕೆ ನೀವು ಭಯಪಡುವ ಪ್ರಮೇಯವಿಲ್ಲ. ಉದಾಹರಣೆಗೆ, ನಿಮ್ಮ ಹೆಂಡತಿಯ ಹೆಸರು ಗಜಲಕ್ಷ್ಮೀ ಎಂದಿದ್ದರೆ ಇವತ್ತಿನಿಂದಲೇ ಆಕೆಯ ಹೆಸರು ಹಿಡಿದು ಕರೆಯುವುದನ್ನು ನಿಲ್ಲಿಸಿ. ನಿಮ್ಮ ನಾಲಗೆಗೆ ಇಷ್ಟವಾಗುವ ಅನ್ಯ ಹೆಸರಿನಿಂದ ಕರೆಯಲು ಶುರುಮಾಡಿ...

    ಪಂಕಜ ಎನ್ನಿ, ಶಾಲ್ಮಲಿ ಎನ್ನಿ, ವಿಶಾಲಾಕ್ಷಿ ಎನ್ನಿ, ಸರೋಜ ಎನ್ನಿ. ಇವ್ಯಾವುವೂ ನಿಮಗೆ ಒಪ್ಪಿಗೆ ಆಗದಿದ್ದ ಪಕ್ಷದಲ್ಲಿ ಅವಳನ್ನು ಪ್ರೀತಿಯಿಂದ ಲಕ್ಕೀ ಲಕ್ಕೀ ಎಂದು ಕರೆದುಬಿಡಿ.

    <ul id="pagination-digg"><li class="previous"><a href="/tv/29-samaya-tv-astrlogy-goddess-lakshmi-nameology-part1-aid0037.html">« Previous</a>

    English summary
    Ordinary mortals should not keep 'Lakshmi' as their name. She is the most revered Hindu goddess. All husbands who have married women with Lakshmi as their name is bound to suffer in life. Astrologers, numerologists on Samaya TV 24/7, Kannada.
    Thursday, September 29, 2011, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X