ಸುವರ್ಣ ವಾಹಿನಿಯ ಸೂಪರ್ ಧಾರಾವಾಹಿ ಕೃಷ್ಣ ರುಕ್ಮಿಣಿ

Serial Image
ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ, ಸಾಯಂಕಾಲ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಕೃಷ್ಣ ರುಕ್ಮಿಣಿ. ಜಿ. ಕುಮಾರಸ್ವಾಮಿ ಹಾಗೂ ರವಿ ಆರ್ ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿ ಕಿರುತೆರೆಯ ಪ್ರಸಿದ್ಧ ಕಲಾವಿದರನ್ನು ಒಳಗೊಂಡಿದೆ. ಮಹಿಳೆಯರು ಒಗ್ಗರಣೆ ಹಾಕುವುದನ್ನು ಮರೆತು ಟಿವಿಗೆ ಅಂಟಿಕೊಂಡಿರುವಷ್ಟು ಜನಪ್ರಿಯವಾಗಿದೆ ಈ ಕೃಷ್ಣ ರುಕ್ಮಿಣಿ.

ರವಿ ಆರ್ ಗರಣಿ ನಿರ್ದೇಶನದ ಈ ಧಾರಾವಾಹಿ ವೀಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಮನೆಮನೆ ಮಾತಾಗುವ ಎಲ್ಲಾ ಲಕ್ಷಣಗಳನ್ನು ತೋರುತ್ತಿರುವ ಇದೆ, ಕಿರಿತೆರೆಯ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದರೂ ಅಚ್ಚರಿಯಿಲ್ಲ. ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿ ನೀಡಿರುವ ನಿರ್ದೇಶಕ ರವಿ ಆರ್ ಗರಣಿ ಕೈಚಳಕ ಇದರಲ್ಲಿ ಇನ್ನು ಹೆಚ್ಚಿನ ಮ್ಯಾಜಿಕ್ ಮಾಡಲಿದೆ. ಮಂಡ್ಯ ಆಡುಭಾಷೆಯನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ.

ಸೀತಾರಾಮ್ ಜಿ ಭಟ್ ಹಾಗೂ ಆನಂದ್ ರೆಡ್ಡಿ ಬಿ. ಎನ್ ಸಹನಿರ್ದೇಶನ ಹೊಂದಿರುವ ಇದು, ವಿ. ಶ್ರೀಧರ್ ಸಂಗೀತ, ಶಶಿಧರ್ ಕೆ ಹಾಗೂ ಶಶಿಧರ್ ಶೆಟ್ಟರ್ ಛಾಯಾಗ್ರಹಣ ಹೊಂದಿದೆ. ಹರ್ಷಪ್ರಿಯ ಸಂಭಾಷಣೆ, ಅಜಿತ್ ಡ್ರಾಕುಲ ಸಂಕಲನ, ರವಿಕುಮಾರ್ ಕಲೆ ಹೊಂದಿದೆ ಈ ಕೃಷ್ಣ ರುಕ್ಮಿಣಿ. ಇದು, ಒರಟ ಹುಡುಗ, ಹೂ ಮನಸ್ಸಿನ ಹುಡುಗಿಯ ಕಥೆಯನ್ನು ಹೊಂದಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಜನಪ್ರಿಯತೆ ಖಂಡಿತ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Krishna Rukmini mega soap is playing 7:00 PM from Monday to Friday on Asianet Suvarna Channel. A love story of two people who are together for all the wrong reasons. A boy who doesn't understand the meaning of love and a girl who can save herself and her family by giving into his demands.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X