ಸದ್ಯದಲ್ಲೇ ಜೀ ಕನ್ನಡದಲ್ಲಿ 'ಸೊಸೆ' ಬರಲಿದ್ದಾರೆ

Sose Serial Image
ಕುಟುಂಬವೆಂದರೆ ಗಂಡ-ಹೆಂಡತಿ-ಮಗು ಎಂದೇ ಭಾವಿಸಲಾಗುವ ಇಂದಿನ ಕಾಲದಲ್ಲಿ ಕುಟುಂಬವೆಂದರೆ ಬರೀ ಅಷ್ಟೇ ಅಲ್ಲ, ಅಲ್ಲಿ ಆಲದಮರದಂತಹ ಅಜ್ಜ ಇರ್ತಾರೆ, ಮಕ್ಕಳು-ಮೊಮ್ಮಕ್ಕಳು, ಹಿರಿಸೊಸೆ-ಕಿರಿಸೊಸೆ-ಹೆಣ್ಮಕ್ಕಳು ಪ್ರೀತಿಯಲ್ಲಿ ಜೊತೆಗಿರ್ತಾರೆ, ಕಷ್ಟಕ್ಕೆ ಜೊತೆಯಾಗ್ತಾರೆ ಎನ್ನುವ ಹೊಸ ಪರಿಭಾಷೆಯೊಂದಿಗೆ ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿಯೊಂದನ್ನು ತೆರೆಗೆ ತರುತ್ತಿದೆ. ಅದು 'ಸೊಸೆ'- ಕೂಡು ಕುಟುಂಬದ ಹೊಸ ಕತೆ.

ಹಳೆ ಬೇರುಗಳೊಂದಿಗೆ ಹೊಸ ಚಿಗುರುಗಳು ಬೆಸೆದುಕೊಂಡಿರುವ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿರುವ ಇಂದಿನ ಕಾಲದಲ್ಲಿ ಅಂಥ ಕುಟುಂಬಗಳ ಶಕ್ತಿ, ಮಹತ್ವವನ್ನು ಸಾರುವ ಅಪರೂಪದ ಕತೆಯನ್ನು ಧಾರಾವಾಹಿಗೆ ಅಳವಡಿಸಿ ನಿರ್ದೇಶಿಸುತ್ತಿರುವವರು ರಾಮ್ಜಿ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದರೂ ಅವರದೇ ಕತೆ-ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲು.

ಇವರ ಉತ್ಸಾಹಕ್ಕೆ ಬೆನ್ನೆಲುಬಾಗಿ ನಿಂತು ನಿರ್ಮಾಣ ಸಾಹಸಕ್ಕೆ ಕೈ ಜೋಡಿಸಿದವರು ನಟಿ ದಿವಂಗತ ಸೌಂದರ್ಯ ಅವರ ಪತಿ ಜಿ.ಎಸ್.ರಘು. ಸೊಸೆ, ಸೌಂದರ್ಯ ಕ್ರಿಯೇಷನ್ಸ್ ಮತ್ತು ರಾಮ್ ಜಿ ಅವರ ಚೊಚ್ಚಲ ಪಯತ್ನ. ಸೊಸೆ ಯಂಥಹ ಕೂಡುಕುಟುಂಬದ ಕತೆಯ ಮೂಲಕ ಈ ಬಾರಿಯೂ ಸದಾ ಹೊಸ ತರಹದ ಕತೆಗಳನ್ನು ಕೊಡುವ ಪ್ರಯತ್ನವನ್ನು ಜೀ ಕನ್ನಡ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬುದು ವಾಹಿನಿಯ ಮನರಂಜನಾ ವಿಭಾಗದ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಅವರ ಅಭಿಪ್ರಾಯ.

ಖ್ಯಾತ ಹಿರಿಯ ನಟ ಸಿ.ಆರ್.ಸಿಂಹ, ಮರೀನಾ ತಾರ, ಸುಷ್ಮಾ ರಾವ್, ನಿಖಿಲಾ, ಸಂತೋಷ್ ರಾಜ್, ವಿದ್ಯಾ ವೆಂಕಟರಾಂ, ಶಿಶಿರ ಹೀಗೆ ಹಳಬರು-ಹೊಸಬರು ಸೇರಿದಂತೆ ಮೂರು ತಲೆಮಾರಿನ ನಟನಟಿಯರು ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದು ವಿಶೇಷ. ಸೊಸೆ, ಮಾರ್ಚ್ 5 ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ಕ್ಕೆ ಪ್ರಸಾರವಾಗಲಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Serial Sose Starts from March 5, 2012 in Zee Kannada Channel. It will telecasts at M0nday to Friday, 8-30 pm.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X