ಜೀ ಕನ್ನಡಡಾನ್ಸ್ ಕರ್ನಾಟಕ ಡಾನ್ಸ್ ಆಡಿಷನ್
ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ವಿಭಿನ್ನತೆ ಹಾಗೂ ಹೊಸತನ ಮೂಡಿಸಿದ ಜೀ ಕನ್ನಡ ಈಗ ನೂತನ ಡಾನ್ಸ್ ಶೋ ಒಂದನ್ನು ಕರ್ನಾಟಕದ ಯುವಜನತೆಗಾಗಿ ಅರ್ಪಿಸುತ್ತಿದೆ. ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ಪ್ರತಿಭೆಗಳಿರುತ್ತವೆ ಎಂಬುದನ್ನು ಮನಗಂಡಿರುವ ಜೀ ಕನ್ನಡ ಕರ್ನಾಟಕದ ಯುವ ಜನತೆಯಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಹುಡುಕುವ ನಿಟ್ಟಿನಲ್ಲಿ 'ಡಾನ್ಸ್ ಕರ್ನಾಟಕ ಡಾನ್ಸ್' ಎಂಬ ನೂತನ ರಿಯಾಲಿಟಿ ಶೋ ಆರಂಭಿಸುತ್ತಿದ್ದು ಇದಕ್ಕಾಗಿ ಉದಯೋನ್ಮುಖ ನೃತ್ಯ ಪಟುಗಳಿಗಾಗಿ ಶೋಧನೆ ಆರಂಭಿಸಿದೆ.
ಜೀ ಕನ್ನಡ ಸದ್ಯದಲ್ಲಿಯೇ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ವೈವಿಧ್ಯಮಯ ಹಾಗೂ ಅದ್ಧೂರಿ ರಿಯಾಲಿಟಿ ಶೋಗೆ ಚಾಲನೆ ನೀಡಲಿದ್ದು 16 ರಿಂದ 25 ವರ್ಷ ವಯೋಮಾನದ ನೃತ್ಯಪಟುಗಳ ಜೋಡಿ (ಯುವಕ ಯುವತಿ) ಕಾಂಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಈ ಸಲುವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಆಡಿಷನ್ ನಡೆಸಲಾಗುತ್ತಿದ್ದು ಮೇ 1ರ ಶನಿವಾರ ಜೀ ಕನ್ನಡ ತಂಡ ಹುಬ್ಬಳ್ಳಿಗೆ ಆಗಮಿಸುತ್ತಿದ್ದು ಆಡಿಷನ್ ನಡೆಸಲಿದೆ. ಆಸಕ್ತರು ತಮ್ಮ ಸ್ವವಿವರ, ಎರಡು ಇತ್ತೀಚಿನ ಭಾವಚಿತ್ರ ಹಾಗೂ ತಮ್ಮ ಪ್ರದರ್ಶನ ಸಿಡಿ ಯೊಂದಿಗೆ ಹೆಚ್‌ಡಿಎಂಸಿ ನೌಕರರ ಸಂಘ, ಟೌನ್‌ಹಾಲ್ ಹಿಂಬಾಗ, ಜೆಸಿ ನಗರ, ಹುಬ್ಬಳ್ಳಿ-20. ಇಲ್ಲಿಗೆ ಆಗಮಿಸಿ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದು.
ಜೊತೆಗೆ ಮೇ 2ರ ಭಾನುವಾರ ಮಂಗಳೂರಿನಲ್ಲಿ ಆಡಿಷನ್ ನಡೆಸಲಿದೆ. ಆಸಕ್ತರು ಜುಗಲ್‌ಹಾಲ್, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನದ ದ್ವಾರ, ಮಲ್ಲಿಕಟ್ಟೆ ಕದ್ರಿ, ಮಂಗಳೂರು. ಇಲ್ಲಿಗೆ ಆಗಮಿಸಿ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದು. ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಆಡಿಷನ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಚಾರಿವಾಣಿಯ ಸಂಖ್ಯೆ 95388 29111 ಸಂಪರ್ಕಿಸಲು ಕೋರಲಾಗಿದೆ.


Click it and Unblock the Notifications











