ವಾರಕ್ಕೆ ₹3,00,000, 'ಬಿಗ್ ಬಾಸ್' ಮನೆಯಲ್ಲಿ ಕುಳಿತು ಒಂದು ವಾರಕ್ಕೆ ಲಕ್ಷ ಎಣಿಸುತ್ತಿದ್ದಾರೆ ಈ ಚೆಲುವೆ ?
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.
ಇಂಥಾ ''ಬಿಗ್ ಬಾಸ್ ಕಾರ್ಯಕ್ರಮ ಈಗ ಇನ್ನೊಮ್ಮೆ ಶುರುವಾಗಿದೆ. ಹಿಂದಿ, ತೆಲುಗು, ಮಲಯಾಳಂ ಮಾತ್ರ ಅಲ್ಲ ಕನ್ನಡದಲ್ಲಿ ಕೂಡ ಇಂದಿನಿಂದ ( ಸೆಪ್ಟೆಂಬರ್ 28 ) ''ಬಿಗ್ ಬಾಸ್'' ಕಲರವ ಶುರುವಾಗಿದೆ. ನಿರೀಕ್ಷೆಯಂತೆ ಕೆಲವರು ಮನೆ ಒಳಗೆ ಹೋಗಿದ್ದಾರೆ. ಇನ್ನೂ ಕೆಲವರು ನಿರೀಕ್ಷೆಯನ್ನು ಹುಸಿಗೊಳಿಸಿ ಮನೆಯಾಚೆಯೇ ಇರುವ ತೀರ್ಮಾನವನ್ನು ಮಾಡಿದ್ದಾರೆ. ಹೀಗಿರುವಾಗ ಇದೀಗ ತೆಲುಗು ಬಿಗ್ ಬಾಸ್ ಸ್ಫರ್ಧಿ ಫ್ಲೋರಾ ಸೈನಿ ಅವರ ಸಂಭಾವನೆ ಕುರಿತು ಚರ್ಚೆ ಶುರುವಾಗಿದೆ.

ಹೌದು. ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ. ಚಂಡೀಗಡನ ಚೆಲುವೆ. 1999ರಲ್ಲಿ ತೆಲುಗಿನ ''ಪ್ರೇಮಕೋಸಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಫ್ಲೋರಾ ಆ ನಂತರ ನಾಯಕಿಯಾಗಿ ಹೆಚ್ಚು ಕಡಿಮೆ 50 ಚಿತ್ರಗಳನ್ನು ಮಾಡಿದರು. ತೆಲುಗಿನಿಂದ ಆ ನಂತರ ಕನ್ನಡ ಚಿತ್ರರಂಗಕ್ಕೂ ಕೂಡ ವಲಸೆ ಬಂದಿದ್ದ ಫ್ಲೋರಾ ಸೈನಿ, ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅಭಿನಯದ ''ಕೋದಂಡರಾಮ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ''ಸಂಗೀತಾ'' ಪಾತ್ರವನ್ನು ನಿರ್ವಹಿಸಿದ್ದರು.
ಆ ನಂತರ ''ಗಿರಿ''.. ''ನಮ್ಮಣ್ಣ''.. ''ವ್ಹಾರೇ ವ್ಹಾ''.. ''ಸಿಐಡಿ ಈಶಾ''.. ಚಿತ್ರಗಳಲ್ಲಿ ಕೂಡ ಫ್ಲೋರಾ ಆಕ್ಟ್ ಮಾಡಿದ್ದರು. ಇಂಥಾ ಫ್ಲೋರಾ ಸೈನಿ ಈ ಬಾರಿ ಕೂಡ ನಾಗಾರ್ಜುನ ಸಾರಥ್ಯದಲ್ಲಿ ಸೆಪ್ಟೆಂಬರ್ 7ರಿಂದ ಶುರುವಾಗಲಿರುವ ತೆಲುಗು ''ಬಿಗ್ ಬಾಸ್''ನಲ್ಲಿ ಭಾಗವಹಿಸಿದ್ದಾರೆ. ಮನೆಯಲ್ಲಿ ಈಗಾಗಲೇ ಮೂರು ವಾರ ಕಾಲವನ್ನು ಕೂಡ ಕಳೆದಿದ್ದಾರೆ. ಮನೆಯಿಂದ ಹೊರ ಹೋಗಲು ತಾನು ಬಂದಿಲ್ಲ ಬದಲಿಗೆ ಕಪ್ ಗೆಲ್ಲಲುಬಂದಿರುವ ಸುಳಿವನ್ನು ಕೂಡ ನೀಡಿದ್ದಾರೆ.

ಇಂಥಾ ಫ್ಲೋರಾ ಸೈನಿ ಸದ್ಯ ''ಬಿಗ್ ಬಾಸ್'' ಮನೆಯಲ್ಲಿರುವುದಕ್ಕೆ ಪ್ರತಿ ವಾರ ಮೂರು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎಂದು ''123 ತೆಲುಗು'' ಮಾಧ್ಯಮ ವರದಿ ಮಾಡಿದೆ. ಈ ವರದಿಯ ಸತ್ಯಾಸತ್ಯತೆಯನ್ನು ''ಫಿಲ್ಮಿಬೀಟ್ ಕನ್ನಡ'' ದೃಢೀಕರಿಸುವುದಿಲ್ಲವಾದರೂ ಕೂಡ ಹರಿಡಿರುವ ಈ ಸುದ್ದಿ ಸದ್ಯ ಹಲವರ ನಿದ್ದೆಯನ್ನು ಕೆಡಿಸಿದೆ. ''ಬಿಗ್ ಬಾಸ್''ನ ಈ ಜನಪ್ರಿಯತೆ ಮತ್ತು ಹಣದ ಆಮಿಷ.. ದೊಡ್ಡ, ದೊಡ್ಡವರನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡುತ್ತೆ ಎನ್ನುವ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ.
ಇನ್ನುಳಿದಂತೆ ತೆಲುಗಿನ ಈ ''ಬಿಗ್ ಬಾಸ್'' ಕಾರ್ಯಕ್ರಮ ನಾಲ್ಕನೇ ವಾರಕ್ಕೆ ಬಂದು ತಲುಪಿದೆ. ಈ ನಾಲ್ಕು ವಾರದಲ್ಲಿ ಮೂರು ಜನ ಅಂದರೆ ಶ್ರಷ್ಟಿ ವರ್ಮಾ.. ಮರ್ಯಾದಾ ಮನೀಶ್ ಮತ್ತು ಪ್ರಿಯಾ ಶೆಟ್ಟಿ ಅವರನ್ನು ಮನೆ ಹೊರಗಡೆ ಕಳುಹಿಸಲಾಗಿದೆ. ಸಂಜನಾ ಗಲ್ರಾನಿ ಕೂಡ ಮನೆಯಿಂದ ಹೊರ ಬಂದಿದ್ದು ಇವರನ್ನು ಸಿಕ್ರೇಟ್ ರೂಮ್‌ನಲ್ಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಸಹ ಸ್ಫರ್ಧಿಗಳ ಮೋಸಕ್ಕೆ ಬಲಿಯಾಗಿ ಸಂಜನಾ ಮನೆಯಾಚೆ ಬರುವಾಗ ಇದೆ ಫ್ಲೋರಾ ಸೈನಿ ಭಾವುಕರಾಗಿದ್ದರು.
ಒಟ್ನಲ್ಲಿ ಸದ್ಯ ಫ್ಲೋರಾ ಸೈನಿ ಪ್ರತಿ ವಾರ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಿಸಲು 3 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ನಿಜಕ್ಕೂ ಫ್ಲೋರಾ 3 ಲಕ್ಷ ಪಡೆಯುತ್ತಿದ್ದಾರಾ..? ಹಾಗೊಂದು ವೇಳೆ ಇವರಿಗೆ 3 ಲಕ್ಷ ಹಣವನ್ನು ಆಯೋಜಕರು ನೀಡುತ್ತಿದ್ದರೆ ಇನ್ನೆಷ್ಟು ದಿನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











