3ವರ್ಷ 3ಬ್ರೇಕಪ್ ; 3ನೇ ಬಾಯ್‌ಫ್ರೆಂಡ್‌ಗೂ ಗುಡ್‌ಬೈ ಹೇಳಿದ ಚೆಲುವೆ-ಕನ್ನಡ ಬಿಗ್ ಬಾಸ್ ಸ್ಪರ್ಧಿ ಜೊತೆಯೂ ಇತ್ತು ಸಂಬಂಧ
ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಇವರಿಗೆ ಪದೇ ಪದೇ ಪ್ರೀತಿಯಲ್ಲಿ ಬೀಳುವುದೇ ಖಯಾಲಿ. ಸಂಬಂಧಗಳನ್ನು ತುಂಡರಿಸಿಕೊಳ್ಳುವುದು ಇವರಿಗೆ ಬಟ್ಟೆ ಬದಲಿಸಿದಷ್ಟೇ ಸುಲಭ. ಇವರ ವಿಷಯದಲ್ಲಿ ಅನುಕೂಲಕ್ಕೆ ತಕ್ಕಂತೆ ಪ್ರೀತಿಯ ಅರ್ಥ ಬದಲಾಗುತ್ತೆ. ಸುದ್ದಿಯಲ್ಲಿರಲು ಪ್ರೀತಿ ಇವರಿಗೆ ಅಸ್ತ್ರವಾಗುತ್ತೆ.
ಈ ಸಾಲಿನಲ್ಲಿ ಹಲವರು ಇದ್ದಾರೆ. ಆ ಪೈಕಿ ಆಕೃತಿ ನೇಗಿ ಕೂಡ ಒಬ್ಬರು. ಹೌದು, ಆಕೃತಿ ನೇಗಿ.. ಹಿಂದಿ ಕಿರುತೆರೆಯ ರಿಯಾಲಿಟಿ ಶೋನ ಸ್ಟಾರ್. ಪ್ರಖ್ಯಾತ ರಿಯಾಲಿಟಿ ಶೋಗಳಾದ ''ರೋಡೀಸ್'' .. ''ಸ್ಪ್ಲಿಟ್ಸ್‌ವಿಲ್ಲಾ''.. ''ರೈಸ್ & ಫಾಲ್''.. ಮೂಲಕ ಬೆಳಕಿಗೆ ಬಂದ ಪ್ರತಿಭೆ.

ಇಂಥಾ ಆಕೃತಿ ನೇಗಿ 2023ರಲ್ಲಿ ''ರೋಡೀಸ್'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಇವರಿಗೆ ಕಾರ್ಯಕ್ರಮದ ಮತ್ತೊಬ್ಬ ಸ್ಫರ್ಧಿ ಸಚಿನ್ ಶರ್ಮಾ ಮೇಲೆ ಲವ್ವಾಗಿತ್ತು. ಒಂದು ವರ್ಷ ಈ ಲವ್ ಸ್ಟೋರಿ ಮುಂದುವರೆಯಿತು. ಆದರೆ.. ಆ ನಂತರ ಅಂತ್ಯವಾಯ್ತು. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಇಬ್ಬರು ದೂರವಾದರು.
ಸಚಿನ್ ಶರ್ಮಾ ಅವರಿಂದ ದೂರವಾದ ನಂತರ ಆಕೃತಿ ಬಿದ್ದಿದ್ದು ಕನ್ನಡಿಗ ಮತ್ತು ''ಬಿಗ್ ಬಾಸ್'' ಕನ್ನಡ ಓಟಿಟಿ ಸ್ಫರ್ಧಿ ಜ್ವಶಂತ್ ಬೋಪಣ್ಣ ಅವರ ತೆಕ್ಕೆಗೆ. 2024ರಲ್ಲಿ ಜಶ್ವಂತ್ ಬೋಪಣ್ಣ ''ಸ್ಪಿಟ್ಸ್ ವಿಲ್ಲಾ X5''ನಲ್ಲಿ ಭಾಗವಹಿಸಿದ್ದಾಗ ಇದೇ ಆಕೃತಿ ಕೂಡ ಭಾಗವಹಿಸಿದ್ದರು. ಈ ರಿಯಾಲಿಟಿ ಶೋನಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಜಂಟಿಯಾಗಿ ಕಾರ್ಯಕ್ರಮವನ್ನು ಇಬ್ಬರು ಗೆದ್ದರೂ ಕೂಡ.
''ಪವರ್ ಕಪಲ್'' ಎಂದು ಈ ಜೋಡಿಯನ್ನು ಕೊಂಡಾಡಿದ್ದ ಅಭಿಮಾನಿಗಳು ''ಜಶ್‌ಕೃತಿ'' ಎಂದು ನಾಮಕರಣವನ್ನು ಕೂಡ ಮಾಡಿದ್ದರು. ಇಬ್ಬರು ಮದುವೆಯಾಗುತ್ತಾರೆ ಎಂದುಕೊಂಡಿದ್ದರು. ಆದರೆ 2025ರ ಫೆಬ್ರವರಿಯಲ್ಲಿ ಈ ಸಂಬಂಧ ಕೂಡ ಮುರಿದು ಬಿತ್ತು.
ಜಶ್ವಂತ್ ಬೋಪಣ್ಣ ಅವರಿಂದ ದೂರವಾಗಿ ಕೆಲ ದಿನಗಳಾಗಿತ್ತು ಅಷ್ಟೇ. ಆಕೃತಿ ''ರೈಸ್ ಆಂಡ್ ಫಾಲ್'' ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರದಲ್ಲಿ ಅನ್ಶುಮತ್ ಶ್ರೀವಾಸ್ತವ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ತಲುಪುವಷ್ಟರಲ್ಲಿ ಅನ್ಶುಮತ್ ಜೊತೆ ಆಕೃತಿ ಪ್ರೀತಿಯಲ್ಲಿ ಬಿದ್ದರು. ಆದರೆ ಈ ಸಂಬಂಧ ಈಗ ವರ್ಷದ ಆರಂಭದಲ್ಲಿ ಮುಕ್ತಾಯವಾಗಿದೆ. ಖುದ್ದು ಆಕೃತಿ ಮತ್ತು ಅನ್ಶುಮತ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮೂರು ವರ್ಷಗಳಲ್ಲಿ ಮೂರು ಬಾರಿ ಪ್ರೀತಿಯಲ್ಲಿ ಸೋತಿದ್ದಾರೆ ಆಕೃತಿ ನೇಗಿ.
ಸದ್ಯ ಆಕೃತಿ ನೇಗಿ ಅವರ ಈ ಲವ್ & ಬ್ರೇಕಪ್ ವಿಚಾರ ಚರ್ಚೆಯಲ್ಲಿದೆ. ರಿಯಾಲಿಟಿ ಶೋಗಳಲ್ಲಿ ಹತ್ತಾರು ಸವಾಲುಗಳನ್ನು ಗೆಲ್ಲುವ ಆಕೃತಿಗೆ, ನಿಜಜೀವನದ ಪ್ರೇಮ ಸವಾಲುಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲವಲ್ಲ ಯಾಕೆ..? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇನ್ನು ಕೆಲವರು ಇವರ ಲವ್ ಮತ್ತು ಬ್ರೇಕಪ್ ಕಥೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಪ್ರೀತಿಸುವುದು ಆ ನಂತರ ಬ್ರೇಕಪ್ ಮಾಡಿಕೊಳ್ಳುವುದು ನಿಮಗೆ ಶೋಕಿಯಾಗಿದೆ ಎಂದು ಕಿಡಿ ಕಾರುತ್ತಿದ್ದಾರೆ.
ಅಂದ್ಹಾಗೇ ಈ ಮೂವರನ್ನು ಹೊರತು ಪಡಿಸಿ ''ಸ್ಪಿಟ್ಸ್‌ವಿಲ್ಲಾ''ದ ಮತ್ತೊಬ್ಬ ಸ್ಫರ್ಧಿ ದಿಗ್ವಿಜಯ್ ರಾಠಿ.. ''ರೋಡೀಸ್ 19''ರ ಸ್ಫರ್ಧಿ ಸಿವೆಟ್ ತೋಮರ್..ದೆಹಲಿಯ ಡಿಜಿಟಲ್ ಕ್ರಿಯೇಟರ್ ಜಶ್ವಂತ್.. ವಾಶು ಸಿಂಗ್ ಅವರ ಜೊತೆ ಕೂಡ ಆಕೃತಿ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ.. ಅಧಿಕೃತವಾಗಿ ಆಕೃತಿ ತಮ್ಮ ಲವ್ & ಬ್ರೇಕಪ್ ಸ್ಟೋರಿಯನ್ನು ಮೂರು ಬಾರಿ ಮಾತ್ರ ಹೇಳಿದ್ದಾರೆ.


Click it and Unblock the Notifications