ರಾಹುಲ್' ರಿಯಲ್ 'ಮದುವೆ ಮುರಿದು ಬಿತ್ತು!
ರಿಯಾಲಿಟಿ ಷೋ ಮದುವೆ ರಿಯಲಲ್ಲ, ರಾಹುಲ್ ಮಹಾಜನ್ ಗೆ ಇನ್ನೂ ಬುದ್ಧಿ ಸ್ಥಿಮಿತಕ್ಕೆ ಬಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ರಿಯಾಲಿಟಿ ಷೋ ಮೂಲಕ ಸ್ವಯಂವರ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಆನಂತರ ಅದು ರಿಯಲ್ ಅಲ್ಲ ಎಂದ ರಾಖಿ ಸಾವಂತ್ ಜೀವಂತ ಉದಾಹರಣೆಯಾಗಿ ಕಣ್ಣ ಮುಂದಿದ್ದರೂ ರಾಹುಲ್ ಮಹಾಜನ್ ಬುದ್ಧಿ ಕಲಿಯದೇ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿ ಪತ್ನಿ ಡಿಂಪಿ ಮೇಲೆ ದೈಹಿಕ ಹಲ್ಲೆಗೂ ಮುಂದಾಗಿದ್ದಾನೆ.
ರಾಹುಲ್ ಮಹಾಜನ್ ಎಂಬ ಮಾಜಿ ಮಾದಕ ವ್ಯಸನಿಯನ್ನು 'Rahul Dulhaniya Le Jayega' ಎಂಬ ರಿಯಾಲಿಟಿ ಷೋ ಮೂಲಕ ಕೈ ಹಿಡಿದಿದ್ದ ಕೋಲ್ಕತ್ತಾ ಮೂಲದ ರೂಪದರ್ಶಿ ನಾಲ್ಕು ತಿಂಗಳು ಸಂಸಾರ ನಡೆಸಿ, ಳಿಗೆ ವಿಚ್ಛೇದನ ನೀಡಿದ್ದಾರೆ. ಗುರುವಾರ ರಾಹುಲ್ ನನ್ನನ್ನು ಚೆನ್ನಾಗಿ ಥಳಿಸಿದ್ದಾನೆ ಎಂದು ಕಣ್ಣು, ಸೊಂಟ ಮೈಕೈ ಮೇಲೆ ಇದ್ದ ಕಲೆಗಳನ್ನು ಮಾಧ್ಯಮದವರ ಮುಂದೆ ತೋರಿಸಿ ದುಃಖ ತೋಡಿಕೊಂಡಿದ್ದಾಳೆ ಡಿಂಪಿ ಗಂಗೂಲಿ.
ನನ್ನ ಮೊಬೈಲ್ ಫೋಲ್ಡರ್ ಗಳು ಹೈಡ್ ಆಗಿದ್ದಕ್ಕೆ ಸಿಟ್ಟಿಗೆದ್ದ ರಾಹುಲ್ ಮೆಸೇಜ್ ಗಳನ್ನು ತೋರಿಸು ಎಂದು ಪೀಡಿಸತೊಡಗಿದ. ನಾನು ಅದಕ್ಕೆ ಪ್ರತಿಕ್ರಿಯಿಸದಿದ್ದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಒದ್ದು, ಕೂದಲು ಎಳೆದು ಪಶುವಿನಂತೆ ವರ್ತಿಸಿದಎಂದು 22 ವರ್ಷದ ರೂಪದರ್ಶಿ ಡಿಂಪಿ ಅಳುತ್ತಾ ಹೇಳುತ್ತಾರೆ.
ಎಂದಿನಂತೆ ರಾಹುಲ್ ಮೊಬೈಲ್ ನಾಟ್ ರೀಚಬಲ್ ಆಗಿದೆ. ಈಗಾಗಲೇ ಡ್ರಗ್ ಮಾಫಿಯಾ ಕೇಸ್ ಎದುರಿಸಿದ್ದ ರಾಹುಲ್ ಈಗ ಕೌಟುಂಬಿಕ ಕಲಹದ ಕೇಸ್ ಅನ್ನು ಎದುರಿಸಬೇಕಾಗಿದೆ. ಜೊತೆಗೆ ಪತ್ನಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮೊದಲ ಪತ್ನಿ ಶ್ವೇತಾ ಸಿಂಗ್ ಕೂಡಾ ಇದೇ ಕಾರಣದ ಮೇಲೆ ರಾಹುಲ್ ನಿಂದ ವಿಚ್ಛೇದನ ಪಡೆದಿದ್ದರು.
ಚಟ್ಟಕ್ಕೇರಿದರೂ ಚಟ ಬಿಡುವುದಿಲ್ಲ ಎಂಬಂತೆ ರಾಹುಲ್ ಹೆಂಗಳೆಯರ ಸುತ್ತಾ ಸುತ್ತುವುದನ್ನು ಮದುವೆ ಯಾದ ನಂತರವೂ ಮುಂದುವರೆಸಿದ್ದ. ಗೆಳತಿ ಪಾಯಲ್ ಗೆ ಪದೇ ಪದೇ ಫೋನ್ ಮಾಡಿ ನನಗೆ ಇನ್ನೊಂದು ಅವಕಾಶ ಕೊಡು ಎಂದು ಪೀಡಿಸತೊಡಗಿದ್ದ.ಬಿಗ್ ಬಾಸ್ ನಲ್ಲೂ ಕೂಡಾ ಮೋನಿಕಾ ಬೇಡಿ, ಪಾಯಲ್ ಹಿಂದೆ ಸದಾ ಸುತ್ತುತ್ತಾ ನಂ.1ಲಂಪಟ ಎನಿಸಿದ್ದ.


Click it and Unblock the Notifications











