For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡದಲ್ಲಿ ಹೊಸ ಬಾಳಿಗೆ ನೀ ಜೊತೆಯಾದೆ

  By Rajendra
  |

  ಈಟಿವಿ ಕನ್ನಡ ವಾಹಿನಿಯಲ್ಲಿ ಹೊಸ ದೈನಿಕ ಧಾರಾವಾಹಿ ಹೊಸ ಬಾಳಿಗೆ ನೀ ಜೊತೆಯಾದೆ ಆರಂಭವಾಗಿದೆ. ನವಿರಾದ ಕಥಾಹಂದರವುಳ್ಳ ಈ ಧಾರಾವಾಹಿ ನಿರ್ದೇಶಕರು ಶ್ರೀನಗರ ಚಂದ್ರು. ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

  ಬಹುತೇಕ ಹೊಸಬರೇ ಇರುವ ಈ ಧಾರಾವಾಹಿಯಲ್ಲಿ ಹಲವು ವಿಶೇಷಗಳಿಂದ ಕೂಡಿದೆ. ಸ್ವಾತಿ ಮತ್ತು ಪ್ರಮೋದ್ ಧಾರಾವಾಹಿಯ ಪ್ರಮುಖ ಆಕರ್ಷಣೆ. ವಿಜಯಕಾಶಿ, ಕಾಮಿನಿಧರನ್, ವಾಣಿಶ್ರೀ, ಪ್ರಕಾಶ್ ಕುಮಾರ್ ಮತ್ತು ಲಕ್ಷ್ಮಿ ಮುಂತಾದ ಕಲಾವಿದರು ಬಳಗ ಧಾರಾವಾಹಿಯಲ್ಲಿದೆ.

  ಈ ಹಿಂದೆ ಗುಪ್ತಗಾಮಿನಿ ಯಂಥಹ ಮನೋಜ್ಞ ಧಾರಾವಾಹಿ ನಿರ್ಮಿಸಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ನಿರ್ಮಿಸಿರುವ ಸದಭಿರುಚಿಯ ಧಾರಾವಾಹಿ ಇದು. ಹೊಸ ಧಾರಾವಾಹಿಗಳಿಗಾಗಿ ಚಡಪಡಿಸುತ್ತಿರುವ ವೀಕ್ಷಕರಿಗೆ ಈ ಹೊಸ ಧಾರಾವಾಹಿ ಇಷ್ಟವಾಗಬಹುದು. (ಒನ್‌ಇಂಡಿಯಾ ಕನ್ನಡ)

  English summary
  Etv Kannada starts new daily serial Hosa Baalige Ni Joteyaade. The serial is playing from Monday to Saturday at 19:30 Hrs. The serial is being producing by Manipal Media Network.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X