twitter
    For Quick Alerts
    ALLOW NOTIFICATIONS  
    For Daily Alerts

    ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ...

    By Rajendra
    |
    <ul id="pagination-digg"><li class="previous"><a href="/tv/31-udaya-marakini-popularise-chitra-prabha-aid0052.html">« Previous</a>

    Film Journalist Udaya Marakini
    ಉದಯ್ ಮತ್ತು ವೈಯನ್ಕೆ ಇಬ್ಬರಿಗೂ ಒಂದಷ್ಟು ಸಾಮ್ಯಗಳಿವೆ. ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಇವನು ಇಂಥವನೇ ಎಂದು ತೀರ್ಮಾನಮಾಡಬಲ್ಲ ಶಕ್ತಿ ವೈಯನ್ಕೆಗಿತ್ತು, ಉದಯ್‌ಗೂ ಇದೆ. ಇಬ್ಬರಿಗೂ ಅಸಾಧ್ಯವಾದ ಪನ್ ಪಾಂಡಿತ್ಯ. ಆಕರ್ಷಕ ಶೀರ್ಷಿಕೆಗಳನ್ನು ಕೊಡುವಲ್ಲಿ ಉದಯ್ ಸಿದ್ಧಹಸ್ತರು. ವೈಎನ್ಕೆಯ ಹಾಗೇ ಉದಯ್ ಕೂಡ ಜನವಿರೋಧಿ ಆಂದೋಲನದ ನೇತಾರ. ಮಾತಿನ ಶತ್ರು. ವೇದಿಕೆಯ ವಿರೋಧಿ. ಅವರನ್ನೊಮ್ಮೆ ಮೂಡಬಿದರೆಗೆ ಕರೆದೊಯ್ದು ವೇದಿಕೆ ಹತ್ತಿಸಬೇಕಿದ್ದರೆ ಗೆಳೆಯರಿಗೆ ಸಾಕುಬೇಕಾಗಿ ಹೋಗಿತ್ತು.

    ಮಿತವಾದ ಮಿತ್ರರು. ಸದ್ಯಕ್ಕಂತೂ ವೀರೇಶ್, ಲಿಂಗದೇವರು, ಹೆಚ್ ಎಂ ರಾಮಚಂದ್ರ, ನಾನು ಹೀಗೆ ನಾಲ್ಕೈದು ಮಂದಿ ಇದ್ದರೆ ಹೆಚ್ಚು. ಮಿತವಾದ ಮಾತು. ಹೆಣ್ಮಕ್ಕಳೆಂದರೆ ಭಯ, ಭಕ್ತಿ ಮತ್ತು ಅಲರ್ಜಿ. ಮದುವೆಯೇ ಆಗೋಲ್ಲ ಅನ್ನುತ್ತಿದ್ದ ಉದಯ್ ಪ್ರೇಮದಲ್ಲಿ ಬಿದ್ದು ಮದುವೆಯಾದರು. ಮಕ್ಕಳು ಬೇಡ ಅನ್ನುತ್ತಿರುವಾಗಲೇ ಅವಳಿ ಮಕ್ಕಳ ತಂದೆಯಾದರು. ನಿಮ್ಮ ಬರಹಗಳ ಒಂದು ಪುಸ್ತಕ ತರೋಣ ಅಂತ ಗೆಳೆಯರು ಒತ್ತಾಯ ಮಾಡುತ್ತಿದ್ದರೆ ನೋಡೋಣ ಅಂತ ಗಡ್ಡ ಸವರಿಕೊಂಡು ಮಾತು ಬದಲಾಯಿಸುತ್ತಾರೆ.

    ಈ ನಾಸ್ತಿಕ ಮಿತ್ರನಿಗೆ ಐವತ್ತಾದ ಸಂದರ್ಭದಲ್ಲಿ ನಾವೊಂದಷ್ಟು ಮಂದಿ ಸೇರಿದ್ದೆವು. ಹಳೆಯ ದಿನಗಳನ್ನು ನೆನಪಿಸಿಕೊಂಡೆವು. ಮಿಕ್ಕ ಆಯುಷ್ಯವನ್ನು ಹೇಗೆ ಕಳೆಯುವುದು ಎಂದು ಯೋಚಿಸಲು ಪುರುಸೊತ್ತಿಲ್ಲದಷ್ಟು ಕೆಲಸ ಕೈಯಲ್ಲಿದೆ. ಚಿತ್ರೋದ್ಯಮ ಮೊದಲಿನಷ್ಟು ಹುಮ್ಮಸ್ಸಿನಿಂದ ಕೂಡಿಲ್ಲ. ಟೀವಿಯ ಮುಂದೆ ಮಾತಾಡಬಲ್ಲ ನಟ, ನಿರ್ದೇಶಕರು ಓದುವುದು ಬಿಟ್ಟಿದ್ದಾರೆ. ನಡುರಾತ್ರಿವರೆಗೆ ಕಾದು ಕೂತು ಅವರ ಬಾಯಿಬಿಡಿಸಿ, ಅವರ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಈಗಿನ ತರುಣ ಪತ್ರಕರ್ತರಿಗೂ ಇದ್ದಂತಿಲ್ಲ.

    ಅಂಥ ಹೊತ್ತಲ್ಲಿ ಉದಯ್ ಫಸ್ಟ್ ಹಾಫ್ ಮುಗಿಸಿದ್ದಾರೆ. ನೆಕ್ಸ್ಟ್ ಹಾಫ್ ಮುಗಿಸಿದಾಗ ಮತ್ತೊಂದು ಸುದೀರ್ಘ ಪಾರ್ಟಿ ಮಾಡೋಣ ಅಂತ ಗೆಳೆಯ ರವಿ ಹೆಗಡೆ ಹೇಳಿದರು. ನಾವೆಲ್ಲ ಒಂದೇ ಏಟಿಗೆ ಖಂಡಿತಾ ಅಂದೆವು. ಇನ್ನೂ ಐವತ್ತು ವರ್ಷ ನಾವೆಲ್ಲ ಬದುಕಿರುತ್ತೇವೆ ಎಂಬ ಆಸೆಗಿಂತ ಮುಕ್ಕಾಗದೇ ಉಳಿಯಬಲ್ಲ ಸ್ನೇಹಕ್ಕೆ ಪಕ್ಕಾಗಬಲ್ಲವರು ಕೇವಲ ಬೆರಳೆಣಿಕೆಯ ಮಂದಿ ಅಷ್ಟೇ ಎಂಬ ಸತ್ಯ ನಮಗೆಲ್ಲ ಅರ್ಥವಾದಂತಿತ್ತು.

    <ul id="pagination-digg"><li class="previous"><a href="/tv/31-udaya-marakini-popularise-chitra-prabha-aid0052.html">« Previous</a>

    English summary
    Noted Kannada journalist, writer Jogi pays rich tributes to the most talented, unbiased Kannada movie reporter Udaya Marakini from Adyanadka, Dakshina District. Uday through his column on movie supplement Chitraprabha/Kannada Prabha has established himself as a role model for young and aspiring KANNADA Journalists.
    Monday, October 31, 2011, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X