ಗೌರಿ ಗಣೇಶ ಹಬ್ಬಕ್ಕೆ ಉದಯ ಟಿವಿಯಲ್ಲಿ ಪಂಚರಂಗಿ
ದಟ್ಸ್ ಕನ್ನಡ ಓದುಗರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಹಬ್ಬದ ಸಂಭ್ರಮದ ಜೊತೆಗೆ ಇದೇ ಗುರುವಾರ (ಸೆ.1) ಕನ್ನಡ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಲಿರುವ ಚಿತ್ರಗಳ ಮೇಲೊಂದು ಇಣುಕು ನೋಟ ಇಲ್ಲಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಡದಿದ್ದರೆ ಕಡುಬಿನ ಜೊತೆಗೆ ನಿಮ್ಮ ನೆಚ್ಚಿನ ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗಲಿರುವ ಚಿತ್ರಗಳನ್ನು ಸವಿಯಬಹುದು.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಈಟಿವಿ ಕನ್ನಡ ವಾಹಿನಿಯಲ್ಲಿ ಸೆ.1ರಂದು ಯಾವುದೇ ಚಲನಚಿತ್ರ ಪ್ರಸಾರವಾಗುತ್ತಿಲ್ಲ. ಹಾಗಂತ ಈಟಿವಿ ಕನ್ನಡ ನೋಡಲು ಮರೆಯಬೇಡಿ. ಸಂಜೆ 5ಕ್ಕೆ 'ಜೋಗಯ್ಯ ಜೋರು' ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಜೊತೆಗೆ ಇದ್ದೇ ಇವೆ ಅನಾವರಣ, ಶುಭಮಂಗಳ, ಮುಕ್ತ ಮುಕ್ತ, ಬೆಳಕು, ಮನೆಯೊಂದು ಮೂರು ಬಾಗಿಲು ಮೆಗಾ ಧಾರಾವಾಹಿಗಳು.
ಉದಯ ಮೂವೀಸ್: ಬೆಳಗ್ಗೆ 7ಕ್ಕೆ ಶಿವಲೀಲೆ ಚಿತ್ರ ಪ್ರಸಾರವಾಗಲಿದೆ. ಬೆಳಗ್ಗೆ 10ಕ್ಕೆ ನಾನು ನಾನೆ. ಮಧ್ಯಾಹ್ನ 1ಕ್ಕೆ ಕಲ್ಲರಳಿ ಹೂವಾಗಿ. ಸಂಜೆ 4ಕ್ಕೆ ಚಿಕ್ಕಪೇಟೆ ಸಾಚಾಗಳು. ರಾತ್ರಿ 8ಕ್ಕೆ ಡಾನ್. ರಾತ್ರಿ 11ಕ್ಕೆ ಧೈರ್ಯ ಚಿತ್ರಗಳು ಪ್ರಸಾರವಾಗಲಿವೆ. ಬಿ ಎಲ್ ವೇಣು ಅವರ ಕಾದಂಬರಿ ಆಧಾರಿತ ಚಿತ್ರ ಕಲ್ಲರಳಿ ಹೂವಾಗಿ. ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ವಿಜಯ ರಾಘವೇಂದ್ರ, ಉಮಾಶಂಕರಿ, ಅನಂತನಾಗ್, ಭಾರತಿ, ಅಂಬರೀಷ್ ಮುಂತಾದವರಿದ್ದಾರೆ.
ಜೀ ಕನ್ನಡ: ಮಧ್ಯಾಹ್ನ 2ಕ್ಕೆ ಸಿದ್ಧಿ ವಿನಾಯಕ ಅನಿಮೇಷನ್ ಚಿತ್ರ ಪ್ರಸಾರವಾಗಲಿದೆ. ಮಧ್ಯಾಹ್ನ 3 ಗಂಟೆಗೆ ರಜನಿ ಚಿತ್ರ. ಉಪೇಂದ್ರ, ಆರತಿ ಛಾಬ್ರಿಯಾ, ರಂಗಾಯಣ ರಘು, ದೊಡ್ಡಣ್ಣ, ಮಂಡ್ಯ ರಮೇಶ್ ಮುಖ್ಯ ಪಾತ್ರದಲ್ಲಿರುವ ಚಿತ್ರ ರಜನಿ. ಹಂಸಲೇಖ ಅವರ ಸಂಗೀತ ಚಿತ್ರಕ್ಕಿದ್ದು ಉತ್ತಮ ವಿಮರ್ಶೆಗೆ ಪಾತ್ರವಾಗಿತ್ತು. ಚಿತ್ರ ನಿರ್ದೇಶನ ಥ್ರಿಲ್ಲರ್ ಮಂಜು.
ಕಸ್ತೂರಿ: ಸಂಜೆ 3ಕ್ಕೆ ಕಾಮಣ್ಣನ ಮಕ್ಕಳು ಚಿತ್ರ ಪ್ರಸಾರವಾಗಲಿದೆ. ನಲ್ಲ ಸುದೀಪ್ ಅಭಿನಯದ ಚಿತ್ರ ಇದು. ಪಕ್ಕಾ ಹಾಸ್ಯ ಪ್ರಧಾನವಾದ ಸೆಂಟಿಮೆಂಟ್ ಚಿತ್ರ.ಚಿತ್ರದಲ್ಲಿ ಯಾವುದೇ ಅಶ್ಲೀಲ ಸಂಭಾಷಣೆಯಾಗಲಿ, ದೃಶ್ಯವಾಗಲಿ ಇಲ್ಲ. ಚಿ ಗುರುದತ್ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ.
ಉದಯ ಟಿವಿ: ಬೆಳಗ್ಗೆ 10ಕ್ಕೆ ವಾರೆವ್ಹಾ ಚಿತ್ರ ಪ್ರಸಾರವಾಗಲಿದೆ. ಮಧ್ಯಾಹ್ನ 2ಕ್ಕೆ ಯಜಮಾನ. ಸಂಜೆ 6ಕ್ಕೆ ಪಂಚರಂಗಿ ಚಿತ್ರಗಳು ಪ್ರಸಾರವಾಗಲಿದೆ. ಉದಯ ವಾಹಿನಿಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ವಿಭಿನ್ನ ಚಿತ್ರಗಳು ಜೊತೆಗೆ ಹೊಸ ಚಿತ್ರ ಪಂಚರಂಗಿ ಪ್ರಸಾರವಾಗುತ್ತಿರುವುದು ವಿಶೇಷ.ಥಿಯೇಟರ್‌ನಲ್ಲಿ ಪಂಚರಂಗಿ ಮಿಸ್ ಮಾಡಿಕೊಂಡವರು ಉದಯ ಟಿವಿಯಲ್ಲಿ ನೋಡಬಹುದು.
ಸುವರ್ಣ ವಾಹಿನಿ: ಬೆಳಗ್ಗೆ 11ಕ್ಕೆ ಶೌರ್ಯ ಚಿತ್ರ ಪ್ರಸಾರವಾಗಲಿದೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ಶೌರ್ಯ. ಸಾಧು ಕೋಕಿಲ ನಿರ್ದೇಶನದ ಈ ಹೊಡಿ, ಬಡಿ ಚಿತ್ರ ಪಡ್ಡೆ ಹುಡುಗರನ್ನು ಅಪಾರವಾಗಿ ಸೆಳೆದಿತ್ತು. ಪೊಲೀಸ್ ಅಧಿಕಾರಿಯಾಗಿ ದರ್ಶನ್ ಖಾಕಿ ಖದರ್ ಮೆರೆದಿದ್ದಾರೆ. ನೋಡಿ ಆನಂದಿಸಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











