twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅತಿರೇಕಗಳೇ ಜಾಸ್ತಿ

    By *ರಾಜೀವ್ ಯಲ್ಲಾಪುರ
    |

    Pyate Mandi Kaadig Bandru
    ಸುವರ್ಣ ವಾಹಿನಿಯ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋನಲ್ಲಿ ನೈಜತೆಗಿಂತ ಅತಿರೇಕಗಳೇ ಜಾಸ್ತಿ. ಇದೊಂದು ರೀತಿ ನಿಜಕ್ಕೂ ಕೆಟ್ಟ ಶೋ. ಅಮಾನವೀಯ ವರ್ತನೆ, ಹಿಂಸಾಚಾರ ಈ ಶೋನಲ್ಲಿ ವಿಜೃಂಭಿಸುತ್ತಿದೆ. ಮೈನವಿರೇಳಿಸುವ ರಿಯಾಲಿಟಿ ಶೋಗಳ ಹೆಸರಿನಲ್ಲಿ ವೀಕ್ಷಕರನ್ನು ಬಲಿಪಶು ಮಾಡಲಾಗುತ್ತಿದೆ.

    ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುವ ಇಂತಹ ಶೋಗಳನ್ನು ನೋಡದಿರುವುದೇ ಲೇಸು. ಈ ರಿಯಾಲಿಟಿ ಶೋ ಮೂಲಕ ಸಾಧಿಸುವುದಾದರೂ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ಕಾರ್ಯಕ್ರಮದ ಉದ್ದೇಶ ಏನು ಎಂಬುದೇ ಗೊತ್ತಾಗುತ್ತಿಲ್ಲ. ಒಂದಕ್ಕೊಂದು ತಾಳಮೇಳವಿಲ್ಲ ಸಾಗುತ್ತಿದೆ ರಿಯಾಲಿಟಿ ಶೋ.

    ಈ ರಿಯಾಲಿಟಿ ಶೋನಲ್ಲಿ ನಡೆಸುವ ಟಾಸ್ಕ್ ಗಳು ಯಾವುದೋ ಬೇರೆ ಪ್ರದೇಶದ ಜನಾಂಗದ ಕ್ರಿಯೆಗಳನ್ನು ಎತ್ತು ತೋರಿಸುತ್ತವೆ. ಅಲ್ಲದೆ, ನಿರೂಪಕ ಅಕುಲ್ ಬಾಲಾಜಿಯಾಗಿ ಎಲ್ಲಾ ಅಭ್ಯರ್ಥಿಗಳು ಸಹನೆಯ ಕಟ್ಟೆ ಒಡೆದು ನಿಜವಾದ ಅರ್ಥದಲ್ಲಿ ಕಾಡು ಮನುಷ್ಯರಂತೆ ವರ್ತಿಸಿರುವುದು ಈಗಾಗಲೇ ಪ್ರಸಾರವಾಗಿದೆ. ಸ್ಪರ್ಧಿಗಳಿಗೆ ಕರ್ನಾಟಕ ಕಾಡಿನ ಜ್ಞಾನವಿಲ್ಲ.

    English summary
    Suvarna TV's Pyate Mandi Kaadig Bandru reality show goes overboard. The show is about the city folks, who are used to leading luxurious and easy-going lifestyles, face the harsh and uncertain situations of forest milieu. ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅತಿರೇಕಗಳೇ ಜಾಸ್ತಿ
    Saturday, December 31, 2011, 17:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X