ಕನ್ನಡದ ಕೋಟ್ಯಾಧಿಪತಿಯಲ್ಲಿ ಎಳಸು ಪ್ರಶ್ನೆಗಳೇಕೆ?

By * ಉದಯರವಿ

Kannadada Kotyadhipati
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಗೇಮ್ ಶೋ 'ಕನ್ನಡದ ಕೋಟ್ಯಾಧಿಪತಿ' ಚೆನ್ನಾಗಿ ಮೂಡಿಬರುತ್ತಿದೆ. ಸುವರ್ಣ ವಾಹಿನಿಯ ಟಿಆರ್‌ಪಿಯ ಗಮನಾರ್ಹ ಬೆಳವಣಿಗೆಗೂ ಈ ಗೇಮ್ ಶೋ ಕಾರಣವಾಗಿದೆ. ಆದರೆ ಈ ಗೇಮ್ ಶೋನಲ್ಲಿ ಕೇಳುವ ಪ್ರಶ್ನೆಗಳು ತೀರಾ ಎಳಸು ಅನ್ನಿಸುತ್ತವೆ.

ಶೋನ ಮೊದಲ ಐದು ಪ್ರಶ್ನೆಗಳು ಪ್ರಾಥಮಿಕ ಶಾಲೆಯ ಮಕ್ಕಳು ಉತ್ತರಿಸುವಂತಿವೆ. ಗಾದೆ ಮಾತುಗಳಂತೂ ತುಂಬಾ ಸರಳವಾಗಿವೆ. ಸ್ಪರ್ಧಾರ್ಥಿಗಳ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚುವಂತಿಲ್ಲ. ಈ ಕಾರ್ಯಕ್ರಮವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರು ವೀಕ್ಷಿಸುತ್ತಿರುತ್ತಾರೆ ಎಂಬ ಅರಿವು ನಿರೂಪಕರಿಗೆ ಇದ್ದರೆ ಒಳಿತು.

ಉಳಿದಂತೆ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತಿದೆ. ಪುನೀತ್ ಅವರು ಸ್ಪರ್ಧಿಗಳನ್ನು ಹುರಿದುಂಭಿಸುವ ರೀತಿ ಮೆಚ್ಚುವಂತಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 'ಕರೋಡ್‌ಪತಿ' ಕಾರ್ಯಕ್ರಮವನ್ನು ನೆನಪಿಸುವಂತಿದ್ದರೂ ಕೋಟ್ಯಾಧಿಪತಿ ತನ್ನ ತನವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ

More from Filmibeat

English summary
The first five questions asked on Asiannet Suvarna TV's path breaking game show Kannadada Kotyadhipati are seems to be childish. However contestents get lot of encouragement from Puneeth Rajkumar are much appreciated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X