For Quick Alerts
  ALLOW NOTIFICATIONS  
  For Daily Alerts

  ಚಿತ್ರಪಟ: ಸುವರ್ಣ ಪರಿವಾರ ಅವಾರ್ಡ್ಸ್ ನಲ್ಲಿ ತಾರೆಗಳ ದರ್ಬಾರ್

  By Suneetha
  |

  ಕನ್ನಡಿಗರಿಗೆ ಸದಾ ಮನರಂಜನೆಯನ್ನು ನೀಡುತ್ತಾ ಬಂದ ಜನಮನ ಗೆದ್ದ ಸುವರ್ಣ ವಾಹಿನಿಯ ಕಾರ್ಯಕ್ರಮಗಳಿಗೆ ಹಾಗು ವೀಕ್ಷಕರನ್ನು ರಂಜಿಸಿದ ಸುವರ್ಣ ಪರಿವಾರದ ಸದಸ್ಯರನ್ನು ಗುರುತಿಸಿ ಗೌರವಿಸಿದ ಸಂಭ್ರಮದ ಸಮಾರಂಭ ಈಗಾಗಲೇ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ.

  '4ನೇ ಸುವರ್ಣ ಪರಿವಾರ ಅವಾರ್ಡ್ಸ್ 2016' ಪ್ರಶಸ್ತಿ ಪ್ರದಾನ ಸಮಾರಂಭ ಅಭೂತಪೂರ್ವ ಯಶಸ್ಸು ಕಂಡಿದ್ದು, ಈ ಅದ್ಭುತ ಕಾರ್ಯಕ್ರಮ ಜೂನ್ 25 ಮತ್ತು 26 ರಂದು ಸಂಜೆ 6 ಘಂಟೆಗೆ ನಿಮ್ಮ ಮೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.[ಸುವರ್ಣ ಪರಿವಾರ ಪ್ರಶಸ್ತಿ: ನೆಚ್ಚಿನ ನಟ-ನಟಿಯರಿಗೆ ವೋಟ್ ಮಾಡಿ]

  ಅಂದಹಾಗೆ ಈ ಅದ್ದೂರಿ ಸಮಾರಂಭದ ಭವ್ಯ ವೇದಿಕೆಗೆ ಮತ್ತಷ್ಟು ಮೆರುಗು ತಂದಿತ್ತವರು ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು. ಒಬ್ಬರಾದ ಮೇಲೆ ಒಬ್ಬರಂತೆ ವೇದಿಕೆಗೆ ಆಗಮಿಸಿದ ಕನ್ನಡ ಚಿತ್ರರಂಗದ ನಟ-ನಟಿಯರಿಂದ ಸುವರ್ಣ ವೇದಿಕೆ ಮತ್ತಷ್ಟು ಕಲರ್ ಫುಲ್ ಆಗಿ ಕಾಣಿಸಿದ್ದು, ಸುವರ್ಣ ಪರಿವಾರದ ಈ ಹಬ್ಬ ಸ್ಟಾರ್ ಗಳಿಂದ ಶೋಭಿಸಿದೆ.

  ಮಾತಿನ ಮಲ್ಲ ನವರಸ ನಾಯಕ ಜಗ್ಗೇಶ್ ಅವರು ತಮ್ಮ ವಾಕ್ ಚಾತುರ್ಯದಿಂದ ನಗೆಹಬ್ಬ ನೀಡಿ ಎಲ್ಲರನ್ನೂ ರಂಜಿಸಿದರೆ, ಹಾಟ್ ಬೆಡಗಿ ರಾಗಿಣಿ ದ್ವಿವೇದಿ ಅವರು ಸಖತ್ ಪರ್ಫಾಮೆನ್ಸ್ ನೀಡುವ ಮೂಲಕ ನೆರೆದಿದ್ದ ಪಡ್ಡೆ ಹೈಕಳ ಹಾರ್ಟ್ ಬೀಟ್ ಇನ್ನೂ ಹೆಚ್ಚಾಗುವಂತೆ ಮಾಡಿದ್ದಾರೆ.[ಚಿತ್ರಪುಟ; ತಾಜ್ ಮಹಲ್ ಮುಂದೆ ಹೆಜ್ಜೆ ಹಾಕಿದ 'ಸುವರ್ಣ' ಸ್ಪರ್ಧಿಗಳು]

  ಇನ್ನು ಈ ಸಂಭ್ರಮದ ಸಮಾರಂಭಕ್ಕೆ ಆಗಮಿಸಿದ್ದ ನೂತನ ದಂಪತಿಗಳಾದ ನಟ ರಘು ಮುಖರ್ಜಿ ಮತ್ತು ನಟಿ ಅನು ಪ್ರಭಾಕರ್ [ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ] ಅವರು ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾದರೆ, ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸುವರ್ಣ ಪರಿವಾರದ ಬಗ್ಗೆ ಕೊಂಡಾಡಿದ್ದಾರೆ.

  'ಅಗ್ನಿಸಾಕ್ಷಿ' ಖ್ಯಾತಿಯ ಡಿಂಪಲ್ ಹುಡುಗ ವಿಜಯ್ ಸೂರ್ಯ ಮತ್ತು ಶ್ರದ್ಧಾ ಅವರು ವೇದಿಕೆಯಲ್ಲಿ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನು ರಂಜಿಸಿದರು.

  ಒಟ್ನಲ್ಲಿ ಸ್ಟಾರ್ ನಟ-ನಟಿಯರ ಘನ ಉಪಸ್ಥಿತಿಯಿಂದ '4ನೇ ಸುವರ್ಣ ಪರಿವಾರ ಆವಾರ್ಡ್ಸ್' ಅತ್ಯಂತ ಕಲರ್ ಫುಲ್ ಆಗಿ ಮುಡಿಬಂದಿದ್ದು, ಆ ಸಂಭ್ರಮವನ್ನು ನೋಡಲು ನೀವು ಜೂನ್ 25ರ ವರೆಗೆ ಕಾಯಲೇಬೇಕು.

  ಪರಿವಾರ ಆವಾರ್ಡ್ಸ್ ನಲ್ಲಿ ಸ್ಯಾಂಡಲ್ ವುಡ್ ತಾರೆಯರ ಸಂಭ್ರಮದ ಝಲಕ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸುತ್ತಾ ಹೋಗಿ....

  -ರಾಗಿಣಿ ಜೊತೆ ಹೆಜ್ಜೆ ಹಾಕಿದ ಅಕುಲ್ ಬಾಲಾಜಿ

  ರಾಗಿಣಿ ಜೊತೆ ಅಕುಲ್ ಬಾಲಾಜಿ ಮಸ್ತಿ

  -ಹೇಮ ಚೌಧರಿ (ಅಮೃತವರ್ಷಿಣಿ ಶಕುಂತಲಾ) ಸಂಭ್ರಮ ಪಟ್ಟ ಪರಿ

  -ಜಗ್ಗೇಶ್ ಜೊತೆ ಅಕುಲ್ ಬಾಲಾಜಿ ಮೋಜು-ಮಸ್ತಿ

  -ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್

  -ನವ ದಂಪತಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ್

  -ನಟಿ ರಾಗಿಣಿ ಸಖತ್ ಸ್ಟೆಪ್

  -ನಿರ್ದೇಶಕ ಸಿಂಪಲ್ ಸುನಿ, ನಟಿ ಶ್ರದ್ಧಾ ಶ್ರೀನಾಥ್

  -ಶ್ರಾವಣಿ ಮತ್ತು ವರ್ಷ ಜೊತೆ ವಿಜಯ್ ಸೂರ್ಯ ನೃತ್ಯ

  English summary
  4th Suvarna Parivaar Awards 2016: Celebrity Special. This programme will telecast on June 25th and 26th, at 6 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X