ಹಾರ್ಲಿಕ್ಸ್ ಗೋಲ್ಡ್ 'ಜೀ ಕುಟುಂಬ ಅವಾರ್ಡ್ 2011'

ಜೀ ಕನ್ನಡ ಧಾರಾವಾಹಿಗಳು, ರಿಯಾಲಿಟಿ ಶೋ ಹಾಗೂ ಮಿಕ್ಕ ಕಾರ್ಯಕ್ರಮಗಳ ಕಲಾವಿದರಲ್ಲಿ ದಿ ಬೆಸ್ಟ್ ಅಪ್ಪ-ಮಗ, ಅತ್ತೆ-ಸೊಸೆ, ಕೇಡಿ ಜೋಡಿ ಹೀಗೆ ಸಾಕಷ್ಟು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿ ವೀಕ್ಷಕರು, ಆಡಳಿತ ಮಂಡಳಿ ಹಾಗೂ ಹಿರಿಯ ಕಲಾವಿದರು ನೀಡಿದ ನಿರ್ಣಯದ ಆಧಾರದ ಮೇಲೆ ದಿ ಬೆಸ್ಟ್ ಜೋಡಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ಪಾರ್ವತಿ ಪರಮೇಶ್ವರ, ಪಾಂಡರಂಗ ವಿಠಲ, ಚಿ ಸೌ ಸಾವಿತ್ರಿ, ರಾಧಾ ಕಲ್ಯಾಣ, ಬೆಂಕಿಯಲ್ಲಿ ಅರಳಿದ ಹೂವು ಹೀಗೆ ಬಹಳಷ್ಟು ಧಾರಾವಾಹಿಗಳ ಜೋಡಿಗಳು ಬಹುಮಾನ ಪಡೆದಿದ್ದಲ್ಲದೇ ವೇದಿಕೆಯಲ್ಲಿ ಡಾನ್ಸ್ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪಾರ್ವತಿ ಪರಮೇಶ್ವರ ಧಾರಾವಾಹಿಯ ತಂತ್ರಜ್ಞರು ಹಾಗೂ ಕಲಾವಿದರೆಲ್ಲರೂ ಒಗ್ಗೂಡಿ ಮಾಡಿದ ನೃತ್ಯ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಉಳಿದ ನೃತ್ಯಗಳೂ ಸಖತ್ ಆಗಿದ್ದವು. ಮುಂದಿನ ಪುಟ ನೋಡಿ...
More from Filmibeat
English summary
Zee Kannada channel organized a programme called 'Horlicks Gold Zee Kutumba Awards 2011' at Bangalore National College Ground, on March 3, 2012.


Click it and Unblock the Notifications











