Bigg Boss Kannada 12: 'ಚಿನ್ನಾರಿ ಮುತ್ತ' To 'ಹಳ್ಳಿ ಹೈದ'- ಇಲ್ಲಿಯವರೆಗೆ 'ಬಿಗ್ ಬಾಸ್' ಗೆದ್ದವರು ಯಾರ್ಯಾರು?

''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.

ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ.

50 LAKH CLUB Every Bigg Boss Kannada Winner Season 1-11 You MUST Know Before Season 12

ಇಂಥಾ '' ಬಿಗ್ ಬಾಸ್'' ಕಾರ್ಯಕ್ರಮವನ್ನು ಹನ್ನೆರಡನೇ ಬಾರಿ ನೋಡುವ ಸೌಭಾಗ್ಯ ಸದ್ಯ ಕನ್ನಡಿಗರಿಗೆ ಸಿಕ್ಕಿದೆ. ಕಾರ್ಯಕ್ರಮ ಇಂದು ( ಸೆಪ್ಟೆಂಬರ್ 28) ಸಂಜೆಯಿಂದ ಶುರುವಾಗಲಿದೆ. ಈ ಹಿನ್ನೆಲೆ ಕಳೆದ ಹನ್ನೊಂದು ವರ್ಷ ಈ ಕಾರ್ಯಕ್ರಮದ ಮೂಲಕ ಜನ ಮನ ಗೆದ್ದು ಟ್ರೋಫಿಯನ್ನು ಮುಡಿಗೇರಿಸಿಕೊಂಡವರ ಲಿಸ್ಟ್‌ನ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಬಿಗ್ ಬಾಸ್ ಸೀಸನ್ -1 (2013)

''ಬಿಗ್ ಬಾಸ್'' ಜ್ವರ ಮೊದಲ ಬಾರಿ ಕರುನಾಡಿನಲ್ಲಿ ಕಂಡು ಬಂದಿದ್ದು 2013ರಲ್ಲಿ. ಕನ್ನಡದ ಕಂಠ ಅಪರ್ಣಾ.. ಸಂಜನಾ ಗಲ್ರಾನಿ .. ಅರುಣ್ ಸಾಗರ್.. ನಿಖಿತಾ ತುಕ್ರಾಲ್.. ತಿಲಕ್.. ಅನುಶ್ರೀ.. ವಿಜಯ್ ರಾಘವೇಂದ್ರ ಹೀಗೆ 15 ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುದೀಪ್ ಅವರ ಸಾರಥ್ಯದಲ್ಲಿ 99 ದಿನಗಳವರೆಗೆ ಮೂಡಿ ಬಂದ ಈ ಮೊದಲ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ ಪ್ರಶಸ್ತಿಯನ್ನು ಗೆದ್ದಿದ್ದರು. ₹50 ಲಕ್ಷ ಹಣವನ್ನು ತಮ್ಮದಾಗಿಸಿಕೊಂಡಿದ್ದರು. ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ ನಿಖಿತಾ ತುಕ್ರಾಲ್ ಎರಡನೇ ರನ್ನರ್ ಅಪ್ ಆಗಿದ್ದರು.

ಬಿಗ್ ಬಾಸ್ ಸೀಸನ್ -2 (2014)

29 ಜೂನ್ 2014ರಂದು ''ಬಿಗ್ ಬಾಸ್‌''ನ ಎರಡನೇ ಸೀಸನ್ ಶುರುವಾಗಿತ್ತು. ಶ್ವೇತಾ ಚೆಂಗಪ್ಪ.. ಗುರು ಪ್ರಸಾದ್.. ಹರ್ಷಿಕಾ ಪೊಣಚ್ಚ.. ನೀತು.. ಅಕುಲ್ ಬಾಲಾಜಿ.. ಸೃಜನ್ ಲೋಕೇಶ್ .. ಸೇರಿ 15 ಜನ ಈ ಮನೆ ಪ್ರವೇಶ ಮಾಡಿದ್ದರು. ಆ ಪೈಕಿ ಅಕುಲ್ ಬಾಲಾಜಿ ಕಪ್ ಮತ್ತು ಹಣದ ಜೊತೆ ಮನೆಯಾಚೆ ಬಂದರೆ ಸೃಜನ್ ಲೋಕೇಶ್ ಎರಡನೇ ಸ್ಥಾನ ಪಡೆದಿದ್ದರು. ದೀಪಿಕಾ ದಾಸ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

50 LAKH CLUB Every Bigg Boss Kannada Winner Season 1-11 You MUST Know Before Season 12

ಬಿಗ್ ಬಾಸ್ ಸೀಸನ್ -3 (2015)

ಅಕ್ಟೋಬರ್ 25-2015ರಲ್ಲಿ ಮೂರನೇ ಬಾರಿ ''ಬಿಗ್ ಬಾಸ್'' ಕಲರವ ಕರ್ನಾಟಕದಲ್ಲಿ ಕೇಳಿ ಬಂದಿತ್ತು. ಮಾಸ್ಟರ್ ಆನಂದ್.. ನಿರೂಪಕ ರೆಹಮಾನ್.. ಭಾವನಾ ಬೆಳಗೆರೆ.. ಕೃತಿಕಾ ರವೀಂದ್ರ.. ಆರ್‌ ಜೆ ನೇತ್ರಾ.. ಶ್ರುತಿ.. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನೂ ಹಿಂದಿನ ಎರಡು ಸೀಸನ್‌ಗಳಿಗಿಂತ ಈ ಬಾರಿ ಸ್ಫರ್ಧಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. 15ರಿಂದ ಸಂಖ್ಯೆ 18ಕ್ಕೆ ಏರಿತ್ತು. ಹುಚ್ಚ ವೆಂಕಟ್ ಅವರನ್ನು ಇಡೀ ನಾಡಿಗೆ ಪರಿಚಯ ಮಾಡಿಸಿದ್ದು ಈ ಸೀಸನ್‌ನ ಹೆಗ್ಗಳಿಕೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಶ್ರುತಿ ವಿಜೇತರಾಗಿ ಹೊರ ಹೊಮ್ಮಿದ್ದರು. ಈ ಮೂಲಕ ಕನ್ನಡ ಬಿಗ್ ಬಾಸ್ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಚಂದನ್ ಕುಮಾರ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

50 LAKH CLUB Every Bigg Boss Kannada Winner Season 1-11 You MUST Know Before Season 12

ಬಿಗ್ ಬಾಸ್ ಸೀಸನ್ 4 - (2016)

ಭಾರೀ ಮನರಂಜನೆಯಿಂದ ಕೂಡಿದ್ದ ಈ ಸೀಸನ್‌ನಲ್ಲಿ ಕಿರಿಕ್ ಕೀರ್ತಿ.. ಸ್ಪರ್ಶ ರೇಖಾ.. ಭುವನ್ ಪೊನಣ್ಣ.. ಪ್ರಥಮ್.. ಹಿರಿಯ ನಟಿ ಮಾಳವಿಕಾ.. ಕಾರುಣ್ಯ ರಾಮ್.. ಸೇರಿ 18 ಜನ ಇದ್ದರು. ಆದರೆ ಈ ಬಾರಿ ಈ ಕಾರ್ಯಕ್ರಮ 99 ದಿನ ಇರಲಿಲ್ಲ. ಬದಲಿಗೆ 112 ದಿನಗಳವರೆಗೆ ಈ ಸೀಸನ್‌ನ ಮುಂದುವರೆಸಲಾಗಿತ್ತು. ಪ್ರಥಮ ಸ್ಥಾನ ಪ್ರಥಮ್ ಪಾಲಾದರೆ ಕಿರಿಕ್ ಕೀರ್ತಿ ಮೊದಲ ರನ್ನರ್ ಅಪ್ ಮತ್ತು ಸ್ಪರ್ಶ ರೇಖಾ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

50 LAKH CLUB Every Bigg Boss Kannada Winner Season 1-11 You MUST Know Before Season 12

ಬಿಗ್ ಬಾಸ್ ಸೀಸನ್ 5 - (2017)

106 ದಿನಗಳವರೆಗೆ ನಡೆದ ''ಬಿಗ್ ಬಾಸ್'' ಸೀಸನ್ 6ರಲ್ಲಿ ಚಂದನ್ ಶೆಟ್ಟಿ.. ನಿವೇದಿತಾ ಗೌಡ.. ಜೆಕೆ.. ಶ್ರುತಿ ಪ್ರಕಾಶ್.. ಸಿಹಿ ಕಹಿ ಚಂದ್ರು ಸೇರಿ 20 ಜನ ಭಾಗವಹಿಸಿದ್ದರು. ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರಕ್ಕೆ ಸಾಕ್ಷಿಯಾಗಿದ್ದ ಈ ಸೀಸನ್‌ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತು ಸಮೀರ್ ಆಚಾರ್ಯ ನಡುವೆ ಯುದ್ಧವೇ ನಡೆದಿತ್ತು. ಚಂದನ್ ಶೆಟ್ಟಿ ಈ ಸೀಸನ್‌ನ ವಿನ್ನರ್ ಆದರೆ ದಿವಾಕರ್ ರನ್ನರ್ ಅಪ್ ಆದರು.

50 LAKH CLUB Every Bigg Boss Kannada Winner Season 1-11 You MUST Know Before Season 12

ಬಿಗ್ ಬಾಸ್ ಸೀಸನ್ 6 TO ಬಿಗ್ ಬಾಸ್ ಸೀಸನ್ 11

''ಬಿಗ್ ಬಾಸ್‌‌'' ಸೀಸನ್ 6ರಲ್ಲಿ ಆಧುನಿಕ ರೈತ ಎಂದೇ ಕರೆಸಿಕೊಳ್ಳುವ ಶಶಿಕುಮಾರ್ ವಿಜಯಶಾಲಿಯಾಗಿದ್ದರು. 2018-19ರಲ್ಲಿ ಕಾರ್ಯಕ್ರಮ ನಡೆದಿತ್ತು. ನವೀನ್ ಸಜ್ಜು ಸೀಸನ್ 6ನ ರನ್ನರ್ ಅಪ್ ಆಗಿದ್ದರು. ''ಬಿಗ್ ಬಾಸ್‌‌'' ಸೀಸನ್ 7ರಲ್ಲಿ ಶೈನ್ ಶೆಟ್ಟಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. 2022ರಲ್ಲಿ ಜರುಗಿದ್ದ ''ಬಿಗ್ ಬಾಸ್'' ಸೀಸನ್ 8ರಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದರು. ಬೈಕರ್ ಅರವಿಂದ್ ರನ್ನರ್ ಅಪ್ ಆಗಿದ್ದರು. ''ಬಿಗ್ ಬಾಸ್'' ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದು, ರಾಕೇಶ್ ಅಡಿಗ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟರು. ಇನ್ನೂ ಕಳೆದ ವರ್ಷ ನಡೆದ ''ಬಿಗ್ ಬಾಸ್'' ಸೀಸನ್ ಹನ್ನೊಂದರಲ್ಲಿ ಹನುಮಂತ ಲಮಾಣಿ ವಿಜೇತರಾಗಿ ಹೊರ ಹೊಮ್ಮಿದರು. ತ್ರಿವಿಕ್ರಮ್ ರನ್ನರ್ ಆಪ್ ಸ್ಥಾನ ಪಡೆದರು.

More from Filmibeat

English summary
Discover who won the ₹50 Lakh prize in every Bigg Boss Kannada season! We reveal the full list of champions, their prizes, and what they're doing now.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X