ಒಂದು ರಾತ್ರಿ ಮಲಗಲು ಬಿಗ್ ಬಾಸ್ ಸ್ಫರ್ಧಿಗೆ ಉದ್ಯಮಿಯಿಂದ 50 ಲಕ್ಷ ಆಫರ್ ; ಹೊಂದಾಣಿಕೆ ಮಾಡಿಕೊಂಡರೆ ಚಿತ್ರರಂಗದಲ್ಲಿ ಅವಕಾಶ

ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ.

ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆಯಾದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ. ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ
ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಇದಕ್ಕೆ ಚಂದ್ರಿಕಾ ದೀಕ್ಷಿತ್ ಅವರ ಜೀವನಾನುಭವ ಇನ್ನೊಂದು ಉದಾಹರಣೆ.

50 Lakhs for One Night Vada Pav Girl Chandrika Dixit s Explosive Claim Rocks the Internet

ಹೌದು, ಚಂದ್ರಿಕಾ ದೀಕ್ಷಿತ್ ..ದೆಹಲಿಯ ವಡಾ ಪಾವ್ ಗರ್ಲ್ ಎಂದೇ ಜನಜನಿತರಾದವರು. ಹೆಚ್ಚೇನು ಇಲ್ಲ. ಎರಡು-ಮೂರು ವರ್ಷದ ಹಿಂದೆ ಬದುಕಿನ ಬಂಡಿಯನ್ನ ಎಳೆಯಲು ಇವರು ಹರಸಾಹಸ ಮಾಡುತ್ತಿದ್ದರು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ಹಲವು ವರ್ಷಗಳಿಂದ ವಡಾ-ಪಾವ್ ಮಾರುತ್ತಿದ್ದರು.

ಹೀಗೆ ಅದೊಂದು ದಿನ ಚಂದ್ರಿಕಾ ವಡಾ-ಪಾವ ಮಾರುತ್ತಿದ್ದಾಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಂದ ಚಂದ್ರಿಕಾ ದೀಕ್ಷಿತ್ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯ್ತು.ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು.

ಇದೆಲ್ಲದರ ಫಲವಾಗಿ ಚಂದ್ರಿಕಾ ದೀಕ್ಷಿತ್ ಇಂದು ಕೇವಲ ವಡಾ ಪಾವ್ ಚೆಲುವೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಸೆಲೆಬ್ರೇಟಿ ಸ್ಟೇಟಸ್ ಇವರಿಗೆ ಸಿಕ್ಕಿದೆ. ''ಬಿಗ್ ಬಾಸ್'' ಕೃಪೆಯಿಂದ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ.

ಆದರೆ ಇದೇ ಸಮಯದಲ್ಲಿ ಬದುಕು ಹಳಿ ತಪ್ಪಿದೆ. ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಒಂದು ಕಡೆ ಗಂಡ ಯುಗಮ್ ಗೇರಾ ಇವರಿಂದ ದೂರವಾಗಿದ್ದಾರೆ. ತಮ್ಮ ಈ ಸಂಬಂಧ ಮುರಿದು ಬೀಳಲು ಗಂಡನ ಅಕ್ರಮ ಸಂಬಂಧ ಕಾರಣವೆಂದು ಚಂದ್ರಿಕಾ ಹೇಳಿದ್ಧಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಇಷ್ಟೇ ಅಲ್ಲ ನನ್ನ ಮಗನ ಭವಿಷ್ಯಕ್ಕಾಗಿ ನಾನು ಯಾರ ಜೊತೆಯಾದರೂ ಮಲಗಲು ಸಿದ್ದ ಎಂದು ಕೂಡ ಹೇಳಿ ಹಲವರ ಆಕ್ರೋಶಕ್ಕೆ ಚಂದ್ರಿಕಾ ದೀಕ್ಷಿತ್ ಗುರಿಯಾಗಿದ್ದಾರೆ.

50 Lakhs for One Night Vada Pav Girl Chandrika Dixit s Explosive Claim Rocks the Internet

ಇಂಥಾ ಚಂದ್ರಿಕಾ ದೀಕ್ಷಿತ್ ಸದ್ಯ ಉದ್ಯಮಿಯೊಬ್ಬರು ನನ್ನನ್ನೂ ಅವರ ಜೊತೆ ಮಲಗಲು ಕರೆದಿದ್ದರು ಎಂದು ಹೇಳಿದ್ದಾರೆ. ಒಂದು ರಾತ್ರಿಗೆ 50 ಲಕ್ಷ ಹಣ ನೀಡುವುದಾಗಿ ಹೇಳಿದ್ದರು ಎಂದಿದ್ದಾರೆ.

ಈ ಕುರಿತು ''ಸಿದ್ಧಾರ್ಥ್ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದ್ರಿಕಾ, ದೊಡ್ಡ ಉದ್ಯಮಿಯೊಬ್ಬರು ನನ್ನನ್ನೂ ಇಮೇಲ್ ಮೂಲಕ ಮಂಚಕ್ಕೆ ಕರೆದಿದ್ದರು ಎಂದು ಹೇಳಿದ್ಧಾರೆ. ನಾನು ಬೇಕಿದ್ದರೆ ಇದಕ್ಕೆ ಸಂಬಂಧಿಸಿದಂತೆ ಸ್ಕ್ರೀನ್ ಶಾಟ್ ಕೂಡ ತೋರಿಸುತ್ತೇನೆ ಎಂದು ಹೇಳಿ ತಮ್ಮ ಬಳಿ ಇರುವ ಪುರಾವೆಯನ್ನು ತೋರಿಸಿರುವ ಚಂದ್ರಿಕಾ ದೀಕ್ಷಿತ್ ಯಾವತ್ತು ಬರಬೇಕೆನ್ನುವ ನಿರ್ಧಾರ ನಿಮ್ಮದು, ಆದರೆ ಸ್ಥಳ ಮಾತ್ರ ನನ್ನದು ಎಂದು ಹೇಳಿ ರೆಸಾರ್ಟ್‌ಗೆ ಬರುವಂತೆ ನನಗೆ ಅವರು ಹೇಳಿದ್ದರು ಎಂದು ಹೇಳಿದ್ದಾರೆ. ನಾನು ನಿಮಗೆ 50 ಲಕ್ಷ ಆಫರ್ ಮಾಡುತ್ತಿದ್ದೇನೆ, ಉಳಿದದ್ದೆಲ್ಲ ನೀವು ಹೇಳಿ ಎಂದು ನನಗೆ ಅವರು ಹೇಳಿದ್ದರು ಎಂದು ತಮ್ಮ ಅನುಭವವನ್ನು ವಿವರಿಸಿದ್ದಾರೆ.

ಇದೇ ಸಮಯದಲ್ಲಿ ಚಂದ್ರಿಕಾ ಪಕ್ಕದಲ್ಲಿ ಕುಂತಿದ್ದ ಅವರ ಆಪ್ತ ಸೈಫಿ ಕೂಡ ಚಂದ್ರಿಕಾ ಅವರ ಹಿಂದೆ ಹಲವರು ದುಂಬಾಲು ಬಿದ್ದಿದ್ಧಾರೆ ಎಂದು ಹೇಳಿದ್ದಾರೆ. ಚಿತ್ರರಂಗದ ಕೆಲ ನಿರ್ದೇಶಕರು ಮತ್ತು ನಿರ್ಮಾಪಕರಿಂದಲೂ ಚಂದ್ರಿಕಾಗೆ ಇಂತಹ ಕರೆಗಳು ಬಂದಿವೆ ಎಂದು ಹೇಳಿರುವ ಸೈಫಿ, ದುಬೈಗೆ ಬರುವಂತೆ ಕೂಡ ಕೆಲವರು ಆಹ್ವಾನಿಸಿದ್ಧಾರೆ ಎಂದಿದ್ದಾರೆ.

ಇನ್ನು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನೀವು ಈ ಉದ್ಯಮದಲ್ಲಿ ಬೆಳೆಯುವುದು ಅಸಾಧ್ಯ ಎಂದು ನನಗೆ ಕೆಲವರು ಸಲಹೆಯನ್ನು ಕೂಡ ನೀಡಿದ್ದಾರೆ ಎಂದು ಹೇಳಿರುವ ಚಂದ್ರಿಕಾ ದೀಕ್ಷಿತ್ ಮಲಗೇಳು ಉದ್ದಾರ ಆಗ್ತೀಯಾ ಎಂದು ನನ್ನ ಮೇಲೆ ಒತ್ತಡವನ್ನೂ ಕೂಡ ಹಾಕಿದ್ಧಾರೆ ಎಂದಿದ್ದಾರೆ.

ಬ್ರ್ಯಾಂಡ್ ಶೂಟ್‌ಗಳಲ್ಲೂ ಕೂಡ ಹೊಂದಾಣಿಕೆ ಮಾಡಿಕೊಳ್ಳುವುದು ಈಗ ಅನಿವಾರ್ಯ, ಹೀಗೆ ಮುಂದೆ ಹೋಗಲು ಸಾಧ್ಯ ಇಲ್ಲ, ಎಷ್ಟು ಹಣ ಬೇಕೆಂದು ನೀವೇ ಹೇಳಿ ಎಂದೂ ಕೂಡ ನನ್ನನ್ನೂ ಕೇಳುತ್ತಾರೆ ಎಂದು ತಮ್ಮ ಆಕ್ರೋಶವನ್ನು ಚಂದ್ರಿಕಾ ದೀಕ್ಷಿತ್ ಹೊರ ಹಾಕಿದ್ಧಾರೆ. ಸದ್ಯ ಚಂದ್ರಿಕಾ ದೀಕ್ಷಿತ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
From street food stardom to shocking indecent proposals—Chandrika Dixit reveals why she was offered ₹50 Lakhs and how she responded. Click to see the full story behind the Vada Pav girl’s viral "compromise" claim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X