Emmy Awards 2023: ಎಮ್ಮಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಿರ್ಮಾಪಕಿ ಏಕ್ತಾ ಕಪೂರ್
ಸೋಮವಾರ (ನವೆಂಬರ್ 20) ಭಾರತೀಯ ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ 51 ನೇ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಡೈರೆಕ್ಟೊರೇಟ್ ಪ್ರಶಸ್ತಿ' ನೀಡಲಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ 'ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ಮಹಿಳಾ ಚಲನಚಿತ್ರ ನಿರ್ಮಾಪಕಿಯಾಗಿದ್ದಾರೆ.
ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ 51ನೇ ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ಏಕ್ತಾ ಕಪೂರ್ ಅವರಿಗೆ ದೀಪಕ್ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕಮಿಡಿಯನ್ ವೀರ್ ದಾಸ್ ಅವರಿಗೂ ತಮ್ಮ ನೆಟ್‌ಫ್ಲಿಕ್ಸ್ ಶೋ ವೀರ್ ದಾಸ್: ಲ್ಯಾಂಡಿಂಗ್‌ಗಾಗಿ ಪ್ರಶಸ್ತಿ ದೊರೆತಿದೆ.

ಅಂತಾರಾಷ್ಟ್ರೀಯ ಎಮ್ಮಿ ಡೈರೆಕ್ಟರೇಟ್ ಪ್ರಶಸ್ತಿ ಪಡೆದ ಏಕ್ತಾ ಕಪೂರ್
ಏಕ್ತಾ ಕಪೂರ್ ಅವರ ಗೆಲುವು ಟೆಲಿವಿಷನ್ ಉದ್ಯಮಕ್ಕೆ ಅವರು ನೀಡಿರುವ ಕೊಡುಗೆಗಳು ಮತ್ತು ಈ ಕ್ಷೇತ್ರದಲ್ಲಿ ಅವರ ಹೊಸ ಹೊಸ ಐಡಿಯಾಗಳು, ಸಾಂಪ್ರದಾಯಿಕ ಮನಸ್ಥಿತಿಯನ್ನು ಮುರಿಯುವ ಹಲವು ವಿಚಾರಗಳಿಗೆ ಸಿಕ್ಕ ಗೆಲುವಾಗಿದೆ. ಇದು ವೈಯಕ್ತಿಕ ವಿಜಯವಲ್ಲ ಮಹಿಳೆಯರಿಗೆ ಸಿಕ್ಕ ಮನ್ನಣೆ ಎಂದರೆ ತಪ್ಪಾಗಲಾರದು.
ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಅವರು ತಮ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಭಾರತ ನಾನು ನಿಮ್ಮ ಎಮ್ಮಿ ಪ್ರಶಸ್ತಿಯನ್ನು ಮನೆಗೆ ತರುತ್ತಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಕಿತ್ತಳೆ ಬಣ್ಣದ ಹೆವಿ ವರ್ಕ್ ಇರುವ ಡ್ರೆಸ್ ಧರಿಸಿದ್ದರು.
ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಸಂಭ್ರಮ
ಪ್ರಶಸ್ತಿ ಪಡೆದ ಬಳಿಕ ಮಾತನಾಡಿರುವ ಏಕ್ತಾ ಕಪೂರ್, "ಪ್ರತಿಷ್ಠಿತ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ.ನ ಜಾಗತಿಕ ಮಟ್ಟದಲ್ಲಿ ಈ ರೀತಿಯ ಗೌರವವನ್ನು ಪಡೆದಿರುವುದು ನನಗೆ ಅಪಾರ ಸಂತೋಷ ತಂದಿದೆ. ನಾನು ಯಾವಾಗಲೂ ಕಥೆಗಳನ್ನು ಹೇಳಲು ಬಯಸುತ್ತೇನೆ. ಏಕೆಂದರೆ ಕತೆಗಳು ನನಗೆ ಕೇಳಲು, ನೋಡಲು ಮತ್ತು ಪ್ರತಿನಿಧಿಸಲು ಅವಕಾಶ ನೀಡುತ್ತದೆ. ಟಿವಿ ಪರದೆಯಿಂದ ಚಲನಚಿತ್ರಗಳು ಮತ್ತು ಒಟಿಟಿ ಜಗತ್ತಿಗೆ ಬರಲು ನನಗೆ ಅವಕಾಶ ಮಾಡಿಕೊಟ್ಟ ಪ್ರೇಕ್ಷಕರ ಪ್ರೀತಿಗೆ ನಾನು ಕೃತಜ್ಞಳಾಗಿದ್ದೇನೆ" ಎಂದು ಹೇಳಿದ್ದಾರೆ.
"ನಾನು ಹೇಳಿದ ಪ್ರತಿಯೊಂದು ಕಥೆಯೇ ಅನೇಕ ಹಂತಗಳಲ್ಲಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸೇತುವೆಯಾಯಿತು. ಈ ಪ್ರಯಾಣವು ತೆಗೆದುಕೊಂಡ ಅನಿರೀಕ್ಷಿತ ತಿರುವುಗಳು ಭಾರತ ಮತ್ತು ಅದರಾಚೆಗಿನ ಜನರು ನೀಡಿದ ಪ್ರೀತಿಯ ಶಕ್ತಿಗೆ ಸಾಕ್ಷಿಯಾಗಿದೆ. ಕೃತಜ್ಞತೆಯಿಂದ ನನ್ನ ಮನಸ್ಸು ತುಂಬಿದೆ" ಎಂದು ಧನ್ಯವಾದ ಹೇಳಿದ್ದಾರೆ.

ನಿರ್ಮಾಪಕಿ ಏಕ್ತಾ ಕಪೂರ್
ನಟ ಜೀತೇಂದ್ರ ಕಪೂರ್ ಮತ್ತು ಶೋಭಾ ಕಪೂರ್ ಅವರ ಪುತ್ರಿ ಏಕ್ತಾ ಕಪೂರ್. 1994 ರಲ್ಲಿ ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲ್ಮಂ ಪ್ರಾರಂಭಿಸಿದರು. ಅಲ್ಲಿಂದ ಭಾರತದ ಟಿವಿ ಇತಿಹಾಸದಲ್ಲಿ ಹೊದ ಬದಲಾವಣೆಗಳು ಶುರುವಾದವು. ಬಾಲಾಜಿ ಬ್ಯಾನರ್ ಅಡಿಯಲ್ಲಿ 17,000 ಗಂಟೆಗಳ ಟಿವಿ ಸೀರಿಯಲ್ಸ್ ಮತ್ತು 45 ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.
ತನ್ನ ಬ್ಯಾನರ್ ಮೂಲಕ, ಏಕ್ತಾ ಕಪೂರ್ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ', 'ಕಹಾನಿ ಘರ್ ಘರ್ ಕಿ', 'ಕಸೌಟಿ ಜಿಂದಗಿ ಕೇ' ಮತ್ತು 'ಬಡೆ ಅಚ್ಚೆ ಲಗ್ತೆ ಹೈ' ನಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಈಗ ಒಟಿಟಿಗೂ ಕಾಲಿಟ್ಟಿದ್ದಾರೆ.


Click it and Unblock the Notifications











