For Quick Alerts
  ALLOW NOTIFICATIONS  
  For Daily Alerts

  ಭಾನುವಾರ ಉದಯ ಟಿವಿಯಲ್ಲಿ 6 ಸೂಪರ್ ಸಿನಿಮಾಗಳು

  |

  ಕೋವಿಡ್ ಮೂರನೇ ಅಲೆಯ ಭೀತಿ. ಸದ್ಯದ ಪರಿಸ್ಥಿತಿಯಲ್ಲಿ ವಾರಾಂತ್ಯಕ್ಕೆ ಪಾರ್ಟಿ-ಪಬ್ ಯಾವುದಕ್ಕೂ ಹೋಗುವ ಮನಸ್ಸಿಲ್ಲ. ವಾರಪೂರ್ತಿ ಕೆಲಸ, ದಿಗುವ ಒಂದು ದಿನ ಮನರಂಜನೆಗಾಗಿ ಟಿವಿಯೇ ದಿಕ್ಕು ಎನ್ನುವ ಜನರಿಗೆ ಉದಯ ಟವಿಯಲ್ಲಿ ಭಾನುವಾರ ನಾನ್‌ಸ್ಟಾಪ್ ಸಿನಿಮಾಗಳು ಪ್ರಸಾರವಾಗುತ್ತಿದೆ.

  ಬೆಳಗ್ಗೆ ಆರು ಗಂಟೆಯಿಂದ ಸಿನಿಮಾ ಜಾತ್ರೆ ಶುರುವಾದರೆ ರಾತ್ರಿ 12ರವರೆಗೂ ನಿರಂತರವಾಗಿ ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಅನಂತ್ ನಾಗ್,ಧನಂಜಯ್ ನಟನೆಯ ಹಿಟ್ ಚಿತ್ರಗಳು ಪ್ರಸಾರವಾಗುತ್ತಿದೆ.

  ಉದಯ ಟಿವಿಯಲ್ಲಿ ಡಬಲ್ ಧಮಾಕಾ: ಆಗಸ್ಟ್ 23 ರಿಂದ ಎರಡು ಹೊಸ ಧಾರಾವಾಹಿಉದಯ ಟಿವಿಯಲ್ಲಿ ಡಬಲ್ ಧಮಾಕಾ: ಆಗಸ್ಟ್ 23 ರಿಂದ ಎರಡು ಹೊಸ ಧಾರಾವಾಹಿ

  ಭಾನುವಾರ ಬೆಳಗ್ಗೆ ಆರು ಗಂಟೆಗೆ ಉದಯ ಟಿವಿಯಲ್ಲಿ ಡಾಲಿ ಧನಂಜಯ್ ಅಭಿನಯದ ಬಾಕ್ಸರ್ ಸಿನಿಮಾ ಪ್ರಸಾರವಾಗುತ್ತಿದೆ. 2015ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಧನಂಜಯ್, ಕೃತಿಕಾ ಜಯಕುಮಾರ್, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶಿಸಿದ್ದ ಈ ಚಿತ್ರವನ್ನು ಜಯಣ್ಣ-ಭೊಗೇಂದ್ರ ನಿರ್ಮಾಣ ಮಾಡಿದ್ದರು. ಮುಂದೆ ಓದಿ....

  ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ, ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್‌ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ, ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್‌

  8.30ಕ್ಕೆ ಸ.ಹಿ.ಪ್ರಾ ಶಾಲೆ ಕಾಸರಗೋಡು

  8.30ಕ್ಕೆ ಸ.ಹಿ.ಪ್ರಾ ಶಾಲೆ ಕಾಸರಗೋಡು

  ಬೆಳಗ್ಗೆ 8.30ಕ್ಕೆ 2018ರ ಸೂಪರ್ ಹಿಟ್ ಸಿನಿಮಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಪ್ರಸಾರವಾಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅನಂತ್ ನಾಗ್ ಸೇರಿದಂತೆ ಹಲವು ಮಕ್ಕಳು ಅಭಿನಯಿಸಿದ್ದರು. ಅತ್ಯುತ್ತಮ ಮಕ್ಕಳ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ. ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಹೋರಾಟ ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ.

  11.30ಕ್ಕೆ ಹಿಟ್ ಸಿನಿಮಾ ಚೌಕ

  11.30ಕ್ಕೆ ಹಿಟ್ ಸಿನಿಮಾ ಚೌಕ

  ತರುಣ್ ಸುಧೀರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಚೌಕ ಸಿನಿಮಾ ಭಾನುವಾರ ಬೆಳಗ್ಗೆ 11.30ಕ್ಕೆ ಉದಯಟಿವಿಯಲ್ಲಿ ಪ್ರದರ್ಶನವಾಗಲಿದೆ. ದ್ವಾರಕೀಶ್ ನಿರ್ಮಾಣದ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ವಿಜಯ್ ರಾಘವೇಂದ್ರ, ದಿಗಂತ್, ಭಾವನಾ, ಐಂದ್ರಿತಾ ರೇ, ದೀಪಾ ಸನ್ನಿದಿ, ಪ್ರಿಯಾಮಣಿ ಹಾಗೂ ಚಿಕ್ಕಣ್ಣ ನಟಿಸಿದ್ದರು. ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಾಶಿನಾಥ್ ಅಭಿನಯಿಸಿದ್ದರು.

  ಮಧ್ಯಾಹ್ನ 3 ಗಂಟೆಗೆ 'ಖಾಕಿ'?

  ಮಧ್ಯಾಹ್ನ 3 ಗಂಟೆಗೆ 'ಖಾಕಿ'?

  ಮಧ್ಯಾಹ್ನ 3 ಗಂಟೆಗೆ ಯಾವ ಸಿನಿಮಾ ಎಂದು ಸುಳಿವು ಕೊಡಲಾಗಿದೆ. ಆರಕ್ಷಕರ ಸಮವಸ್ತ್ರ ಎಂದು ಸುಳಿವು ಸಿಕ್ಕಿದೆ. ಇದು ಚಿರಂಜೀವಿ ಸರ್ಜಾ ನಟನೆಯ 'ಖಾಕಿ' ಸಿನಿಮಾ ಎಂದು ಹೇಳಲಾಗಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಚಿರು ಸರ್ಜಾ, ತಾನ್ಯ ಹೋಪ್, ಛಾಯಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

  ಸಂಜೆ 6.30ಕ್ಕೆ ಒಡೆಯ

  ಸಂಜೆ 6.30ಕ್ಕೆ ಒಡೆಯ

  ಇನ್ನು ಭಾನುವಾರ ಸಂಜೆ 6.30ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಸಿನಿಮಾ ಪ್ರಸಾರವಾಗಲಿದೆ. 2019ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಮಿಳಿನ ವೀರಂ ರಿಮೇಕ್. ಎಂಡಿ ಶ್ರೀಧರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ದರ್ಶನ್ ಸನಾ ತಿಮ್ಮಯ್ಯ, ದೇವರಾಜ್, ಪಿ ರವಿಶಂಖರ್, ಚಿಕ್ಕಣ್ಣ, ಶರತ್ ಲೋಹಿತಾಶ್ವ, ಸಾಧು ಕೋಕಿಲಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದರು.

  ರಾತ್ರಿ 10ಕ್ಕೆ ಶೈಲೂ

  ರಾತ್ರಿ 10ಕ್ಕೆ ಶೈಲೂ

  ಭಾನುವಾರ ರಾತ್ರಿ ನೈಟ್ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶೈಲೂ ಸಿನಿಮಾ ಪ್ರಸಾರವಾಗಲಿದೆ. 2011ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಗಣೇಶ್‌ಗೆ ಜೋಡಿಯಾಗಿ ಮಲಯಾಳಂ ಚೆಲುವೆ ಭಾಮಾ ಕಾಣಿಸಿಕೊಂಡಿದ್ದರು. ಎಸ್ ನಾರಾಯಣ್ ಈ ಚಿತ್ರ ನಿರ್ದೇಶಿಸಿದ್ದರು.

  ಈ ಆರು ಚಿತ್ರಗಳ ಪೈಕಿ ನೀವು ನೋಡಲು ಬಯಸುವ ಸಿನಿಮಾ ಯಾವುದು. ಯಾವ ಚಿತ್ರ ನಿಮಗೆ ಇಷ್ಟ. ಹಾಗೂ ಏಕೆ ಇಷ್ಟ ಎಂದು ಕಾಮೆಂಟ್ ಮೂಲಕ ಕಾರಣ ತಿಳಿಸಬಹುದು.

  English summary
  Odeya, Boxer, Shyloo, Chowka and Other two movies to Premiere in Udaya Tv on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X