ಗ್ಲಾಮರಸ್ ಲುಕ್ ನಲ್ಲಿ ಮಿಂಚಿದ 68 ವರ್ಷದ ಅಜ್ಜಿ; 'ಬಿಗ್ ಬಾಸ್' ಖ್ಯಾತಿಯ ರಜಿನಿ ಫೋಟೋ ವೈರಲ್
ಸೆಲೆಬ್ರಿಟಿಗಳು ತರಹೇವಾರಿ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಕೆಲವು ತಾರೆಯರಂತೂ ವಿಚಿತ್ರ ಕಾಸ್ಟ್ಯೂಮ್ ಗಳನ್ನು ಧರಿಸಿ ಕ್ಯಾಮರಾಗೆ ಪೋಸ್ ನೀಡುತ್ತಾರೆ. ಅನೇಕ ಬಾರಿ ಟ್ರೋಲ್ ಗಳಿಗೆ ಗುರಿಯಾಗಿದ್ದು ಇದೆ.
ಇದೀಗ 68 ವರ್ಷದ ಅಜ್ಜಿಯೊಬ್ಬರು ಗ್ಲಾಮರಸ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನಸೆಳೆದಿದ್ದಾರೆ. ಹೌದು, ನಟಿ ಮತ್ತ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರಜಿನಿ ಚಾಂಡೆ ಮೇಕ್ ಓವರ್ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೆಚ್ಚಾಗಿ ಸೀರೆ ಮತ್ತು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರಜಿನಿ ಚಾಂಡೆ ಈಗ ಗ್ಲಾಮರಸ್ ಆಗಿ ಕಾಣಿಸಿಕೊಂಡು ಬೆರಗಾಗುವಂತೆ ಮಾಡಿದ್ದಾರೆ.

ರಜಿನಿ ಚಾಂಡೆ ಮೇಕ್ ಓವರ್ ಗೆ ನೆಟ್ಟಿಗರು ಮತ್ತು ಬಿಗ್ ಬಾಸ್ ಸಹ ಸ್ಪರ್ಧಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್-2ರಲ್ಲಿ ರಜಿನಿ ಚಾಂಡೆ ಭಾಗಿಯಾಗಿದ್ದರು. ಇದೀಗ ರಜಿನಿ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂಬುವುದನ್ನು ಸಾಭೀತು ಪಡಿಸಿದ್ದಾರೆ.

ಕೆಲವು ಫೋಟೋದಲ್ಲಿ ಜೀನ್ಸ್ ಮತ್ತು ಡೆನಿಮ್ ಜಾಕೆಟ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ರೆ ಇನ್ನು ಕೆಲವು ಫೋಟೋದಲ್ಲಿ ಮಿನಿ ಡೆನಿಮ್ ಉಡುಗೆ ಧರಿಸಿ ಮಿಂಚಿದ್ದಾರೆ. ರಜಿನಿ ಅವರ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಜಿನಿ ಅವರನ್ನು ನೆಟ್ಟಿಗರು ಸಹ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.


Click it and Unblock the Notifications











