Sangeetha Sringeri: 'ಭರತನಾಟ್ಯ' ಪೋಸ್ ಕೊಟ್ಟು ನೆಟ್ಟಿಗರ ಮನ ಸೆಳೆದ '777 ಚಾರ್ಲಿ'ಯ ಡಾಕ್ಟರ್

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಾಯಕಿ ಸತಿ ದೇವಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸಂಗೀತಾ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿ ಇರುವ ಬೆಡಗಿ. ಸದಾ ತಮ್ಮ ಫಿಟ್ನೆಸ್‌ನತ್ತ ವಿಶೇಷ ಗಮನ ಹರಿಸುತ್ತಿರುವ ಸಂಗೀತಾ ಶೃಂಗೇರಿ ಇನ್‌ಸ್ಟಾಗ್ರಾಂನಲ್ಲಿ ವರ್ಕ್ ಔಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಿಯಮಿತವಾಗಿ ದೇಹವನ್ನು ದಂಡಿಸಿ ಕೊಬ್ಬು ಕರಗಿಸಿಕೊಂಡು ಮತ್ತಷ್ಟು ಸುಂದರವಾಗಿ ಕಾಣಿಸುತ್ತಿರುವ ಸಂಗೀತಾ ಶೃಂಗೇರಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಗೀತಾ ಭರತನಾಟ್ಯ ಫೋಸ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

777 Charlie Heroine Sangeetha Sringeri Viral Bharatanatyam pose

ಕ್ಯಾಪ್ಶನ್ ನೀಡಿ ಎಂದ ಸಂಗೀತಾ

ಇದರ ಜೊತೆಗೆ ಸಂಗೀತಾ ಅವರು ನೆಟ್ಟಿಗರಿಗೆ ಒಂದು ಕಂಡೀಶನ್ ಕೂಡಾ ಹಾಕಿದ್ದಾರೆ. ತಾವು ಅಪ್ ಲೋಡ್ ಮಾಡಿರುವಂತಹ ಫೋಟೋಗೆ ಕ್ಯಾಪ್ಶನ್ ಕೊಡಿ ಎನ್ನುವ ಟಾಸ್ಕ್ ಅನ್ನು ನೆಟ್ಟಿಗರಿಗೆ ನೀಡಿದ್ದು ಅದು ಒಂದು ಲೈನ್ ಆಗಿರಬೇಕು ಇಲ್ಲವೆಂದರೆ ಅದು ಸಿನಿಮಾ ಹಾಡಿನ ಸಾಲು ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆ ಹರಿಸಿದ್ದಾರೆ.

ತುಂಬಿ ಹೋಗಿದೆ ಕಮೆಂಟ್ ಬಾಕ್ಸ್

ಸಂಗೀತಾ ಶೃಂಗೇರಿ ಅವರ ಇತ್ತೀಚಿನ ಫೋಟೋಶೂಟ್ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. "ಸಾಗರಿಯೇ ಸಾಗರಿಯೇ... ಸುಂದರಿಗೂ ಸುಂದರಿಯೇ", "ನಿನ್ನ ಅಂದ ಹೊಗಳಲು ಪದಪುಂಜ ಸಾಲದು", "ಕೃಷ್ಣ ನಿ ಬೇಗನೆ ಬಾರೋ", "ಯಾರೀ ಈ ಅಪ್ಸರೆ ಧರೆಗಿಳಿದು ಬಂದ ವಸುಂಧರೆ" ಹೀಗೆ ಕಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದೆ.

777 Charlie Heroine Sangeetha Sringeri Viral Bharatanatyam pose

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ

ಕಳೆದ ವರ್ಷದ ಬ್ಲಾಕ್ ಬಾಸ್ಟರ್ ಸಿನಿಮಾ '777 ಚಾರ್ಲಿ'ಯಲ್ಲಿ ನಾಯಕಿ ದೇವಿಕಾ ಆಗಿ ಕಾಣಿಸಿಕೊಂಡಿದ್ದ ಸಂಗೀತಾ ಸಿನಿಮಾ ಪಯಣ ಶುರುವಾಗಿದ್ದು 'A+' ಸಿನಿಮಾದಿಂದ. ಮುಂದೆ 'ಸಾಲಗಾರರ ಸಹಕಾರ ಸಂಘ', 'ಲಕ್ಕಿಮ್ಯಾನ್', 'ಪಂಪ' ಹಾಗೂ 'ಮ್ಯಾರಿಗೋಲ್ಡ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ ಸಂಗೀತಾ.

ನಟನೆಗೆ ಮುನ್ನುಡಿ ಬರೆದಿದ್ದು ಕಿರುತೆರೆ

'ಹರಹರ ಮಹಾದೇವ' ಧಾರಾವಾಹಿಯ ಸತಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಂಗೀತಾ ಶೃಂಗೇರಿ ಮತ್ತೆ ನಟಿಸಿದ್ದು ತೆಲುಗು ಕಿರುತೆರೆಯಲ್ಲಿ. ತೆಲುಗಿನ 'ತೆನೆ ಮನಸುಲು' ಧಾರಾವಾಹಿಯಲ್ಲಿ ನಾಯಕಿ ಮಾನಸ ಆಗಿ ನಟಿಸಿದ ಸಂಗೀತಾ ಇದೀಗ ಹಿರಿತೆರೆಯಲ್ಲಿ ಬ್ಯುಸಿ.

More from Filmibeat

English summary
777 Charlie actress Sangeetha Sringeri Bharatanatyam pose.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X