BBK 12 : ನಾಮಿನೇಷನ್ ಬೆಂಕಿಯಲ್ಲಿ 8 ಜನ- ವಾರಾಂತ್ಯದಲ್ಲಿ ರೋಚಕ ತಿರುವು ? ಯಾರ ಪಾಲಿಗೆ ಮುಗಿಯುತ್ತೆ ಮನೆ ಋಣ..?

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಆದರೆ .. ಈ ಸಂಘರ್ಷದಲ್ಲಿ ಕೆಲವರು ಕುತಂತ್ರದಿಂದ ಯುದ್ಧ ಗೆಲ್ಲಲು ಮುಂದಾಗುತ್ತಾರೆ. ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುತ್ತಾರೆ. ಮತ್ತೊಬ್ಬರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರರೂ ಕೂಡ ವಾರಾಂತ್ಯಕ್ಕೆ ಒಬ್ಬರಲ್ಲೊಬ್ಬರು ಮನೆಯಿಂದ ಹೊರಗಡೆ ಬರಲೇಬೇಕು.

ನಿಯಮಾನುಸಾರ ''ಅಗ್ನಿ ಪರೀಕ್ಷೆ''ಯನ್ನು ಎದುರಿಸಲೇಬೇಕು. ಈ ವಾರ ಕೂಡ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಈ ಅಗ್ನಿ ಪರೀಕ್ಷೆ ಇದೆ. ಮನೆಯ 8 ಜನರ ಮೇಲೆ ಎಲಿಮಿನೇಷನ್‌ನ ತೂಗುಕತ್ತಿ ನೇತಾಡುತ್ತಿದೆ. ಈ 8 ಜನರಲ್ಲಿ ಯಾರು ಮನೆ ಹೊರಗಡೆ ಬರುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

8 Nominated Bigg Boss Kannada 12 Week 5 Eviction Battle Begins Who Will Exit the BB College

ಹೌದು, ಅನೇಕರಿಗೆ ಗೊತ್ತಿರುವಂತೆಈ ವಾರ ''ಬಿಗ್ ಬಾಸ್'' ಮನೆಯಲ್ಲಿ ಕಾಲೇಜ್ ವಾತಾವರಣ ನಿರ್ಮಾಣವಾಗಿದೆ. ಈ ಬಿಬಿ ಕಾಲೇಜ್‌ನಲ್ಲಿ ಎರಡು ಬಣಗಳನ್ನು ಮಾಡಲಾಗಿದೆ. ಒಂದು ''ರೆಡ್ ಹೌಸ್'' ಮತ್ತೊಂದು ''ಬ್ಲೂ ಹೌಸ್''. ಈ ಎರಡು ಹೌಸ್‌ನಲ್ಲಿರುವ ಸ್ಫರ್ಧಿಗಳ ನಡುವೆ ಇತ್ತೀಚೆಗೆ ಚರ್ಚಾ ಸ್ಫರ್ಧೆ ಇಡಲಾಗಿತ್ತು. ಇದೇ ವೇಳೆ ಮನೆಯಲ್ಲಿ ಉಳಿದುಕೊಳ್ಳಲು ಎದುರಾಳಿ ಸ್ಫರ್ಧಿಗೆ ಇರುವ ಅರ್ಹತೆ ಮತ್ತು ಯೋಗ್ಯತೆಯ ಕುರಿತು ವಾದ ಕೂಡ ಮಾಡಬೇಕಿತ್ತು.

ಈ ವಾದ -ಪ್ರತಿವಾದ ಆಲಿಸಿ ಮನೆಯಲ್ಲಿ ಯಾರು ಉಳಿಯಬೇಕು.. ಯಾರನ್ನು ಹೊರಗಡೆ ಕಳುಹಿಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ ಬಿಬಿ ಕಾಲೇಜ್‌ನ ಪ್ರಿನ್ಸಿಪಾಲ್ ರಘು ಅವರಿಗೆ ನೀಡಲಾಗಿತ್ತು. ಅದ್ರಂತೆ ರಘು ತೆಗೆದುಕೊಂಡ ನಿರ್ಧಾರದಲ್ಲಿ ಚರ್ಚಾ ಸ್ಫರ್ಧೆಯಲ್ಲಿ ಗೆದ್ದವರು ಈ ವಾರಾಂತ್ಯದ ನಾಮಿನೇಷನ್‌ ಬೆಂಕಿಯಿಂದ ಪಾರಾಗಿದ್ದಾರೆ. ಸೋತವರು ಡೇಂಜರ್ ಝೋನ್‌ನಲ್ಲಿ ಬಂದು ನಿಂತಿದ್ದಾರೆ.

8 Nominated Bigg Boss Kannada 12 Week 5 Eviction Battle Begins Who Will Exit the BB College


ಈ ವಾರ ಯಾರೆಲ್ಲ ಬಚಾವ್..?

ಚರ್ಚಾ ಸ್ಫರ್ಧೆಯಲ್ಲಿ ಗಿಲ್ಲಿ ನಟ ಅವರನ್ನು ಸೋಲಿಸಿದ ಚಂದ್ರಪ್ರಭ, ರಾಶಿಕಾ ಶೆಟ್ಟಿಗೆ ಸೆಡ್ಡು ಹೊಡೆದ ಕಾವ್ಯ ಶೈವ, ರಿಷಾ ಗೌಡಗೆ ಮಣ್ಣು ಮುಕ್ಕಿಸಿದ ರಕ್ಷಿತಾ ಶೆಟ್ಟಿ, ಸ್ನೇಹ-ದ್ವೇಷದ ಸಮರದಲ್ಲಿ ಅಶ್ವಿನಿ ಗೌಡ ಎದುರು ಗೆದ್ದ ಜಾಹ್ನವಿ, ಈ ವಾರ ಬಚಾವ್ ಆಗಿದ್ದಾರೆ. ಇವರ ಜೊತೆ ಕಾಕ್ರೋಚ್ ಸುಧಿ, ಸೂರಜ್ ಸಿಂಗ್, ಕೂಡ ಈ ವಾರ ಸೇಫ್ ಝೋನ್‌ನಲ್ಲಿದ್ಧಾರೆ.


ನಾಮಿನೇಷನ್ ಬೆಂಕಿಯಲ್ಲಿ 8 ಜನ..!

ಚರ್ಚಾ ಸ್ಫರ್ಧೆಯಲ್ಲಿ ಸೋತ ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮತ್ತು ಮಲ್ಲಮ್ಮ ಅವರ ಮೇಲೆ ಸದ್ಯ ನಾಮಿನೇಷನ್‌ನ ತೂಗುಕತ್ತಿ ನೇತಾಡುತ್ತಿದೆ. ಈ 8 ಜನರ ಪೈಕಿ ಈ ವಾರ ಒಬ್ಬರನ್ನಾದರೂ ಮನೆಯ ಹೊರಗಡೆ ಕಳುಹಿಸುವುದು ಖಚಿತ. ಯಾಕೆಂದರೆ..ಕಳೆದ ವಾರ ಎಲ್ಲರನ್ನು ಮನೆಯ ಒಳಗಡೆ ಉಳಿಸಿಕೊಳ್ಳಲಾಗಿತ್ತು. ರಾಶಿಕಾ ಮತ್ತು ಸ್ಪಂದನಾಗೆ ಚಮಕ್ ಕೊಡಲಾಗಿತ್ತು.

ಹೀಗಾಗಿ ಈ ಬಾರಿ ಮನೆಯ ಹೊರಗಡೆ ಬರುವುದು ಯಾರು ಎನ್ನುವ ಪ್ರಶ್ನೆ ಸದ್ಯ ಎದ್ದಿದೆ. ಅವರು ಮಾಳು ನಿಪನಾಳ ಆಗಿರಬಹುದು ಅಥವಾ ಮಲ್ಲಮ್ಮ ಆಗಿರಬಹುದು ಎನ್ನುವ ಊಹೆಯನ್ನು ಸದ್ಯ ಹಲವರು ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಮಲ್ಲಮ್ಮ ವ್ಯೆಯಕ್ತಿಕ ಕಾರಣಗಳಿಂದ ಮನೆಯ ಹೊರಗಡೆ ಬಂದಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ಹೊರಗಡೆ ಬರಬೇಕಿದೆ.

ಒಟ್ನಲ್ಲಿ ಸದ್ಯ 08 ಜನ ಈ ವಾರ ಮನೆಯ ಹೊಸ್ತಿಲಿನವರೆಗೆ ಬಂದು ನಿಂತಿದ್ದಾರೆ. ಈ 8ಜನರಲ್ಲಿ ಮನೆಯ ಮುಖ್ಯದ್ವಾರದಿಂದ ಹೊರಗಡೆ ಬರುವುದು ಯಾರು..? ಎನ್ನುವುದನ್ನು ಕಾದು ನೋಡಬೇಕಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಏನಾಗಲಿದೆ..? ಕಾರ್ಯಕ್ರಮದಲ್ಲಿ ಮುಂದೆ ಇರುವ ತಿರುವುಗಳೇನು..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Massive nomination twist in BBK 12 Week 5! See the official list of 8 nominated contestants and how you can vote to save your favourite housemate.
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X