For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನವರಸ ನಾಯಕ ಜಗ್ಗೇಶ್ ಅಭಿನಯದ 8MM

  |

  ಕಾದವನು ಮೇಧಾವಿ ನುಗ್ಗಿದವನು ಮೂರ್ಖ...! ಕಾಯಣ ಅಂತ ಖಡಕ್ ಡೈಲಾಗ್ ಹೊಡೆದು ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾ '8MM'. ಹೆಚ್ಚಾಗಿ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಜಗ್ಗೇಶ್ ಹಿಂದೆಂದೂ ಕಾಣದಂತಹ ವಿಭಿನ್ನ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

  ಅಧಿಕಾರಶಾಹಿ ವ್ಯವಸ್ಥೆ, ವಯಸ್ಸಾದವರ ಅಸಹಾಯಕತೆ ಕುರಿತ ಚಿತ್ರಣ ಹೊಂದಿರುವ '8MM' ಚಿತ್ರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಹಿಡಿಸಿತ್ತು. ಸರಣಿ ಕೊಲೆಗಳ ಸುತ್ತ ಸಾಗುವ '8MM' ಸಿನಿಮಾಗೆ ಪ್ರೇಕ್ಷಕರು ಜೈಕಾರ ಹಾಕಿದ್ದರು.ಗನ್ನು ಕದ್ದವನು, ಸರಣಿ ಕೊಲೆಗಾರ, ಪೊಲೀಸ್ ಅಧಿಕಾರಿ, ಒಬ್ಬ ಪತ್ರಕರ್ತೆ ಇವರ ಸುತ್ತ ಕಥೆ ಸಾಗುತ್ತ ಸಾಕಷ್ಟು ಕುತೂಹಲವನ್ನು ಸಿನಿಮಾ ಸೃಷ್ಟಿ ಮಾಡಿತ್ತು.

  '8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ

  ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ '8MM' ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಇದ್ದವು. ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ್ರೆ, ತನ್ನ ಕಂಠದ ಮೂಲಕವೇ ಮನೆಮಾತಾಗಿರುವ ವಸಿಷ್ಠ ಸಿಂಹ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಮಯೂರಿ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರವನ್ನು ನಿಭಾಯಿಸಿದ್ದು ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ವಿಶೇಷತೆಯನ್ನು ಹೆಚ್ಚಿಸಿತ್ತು.

  ಇನ್ನು ಇಷ್ಟೆಲ್ಲಾ ವಿಶೇಷತೆಗಳನ್ನು ಹೊತ್ತು ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದ 8 MM ಸಿನಿಮಾ ಇದೇ ಭಾನುವಾರದಂದು ಅಂದ್ರೆ ಮಾರ್ಚ್ 24 ಮಧ್ಯಾಹ್ನ 3:00 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Kannada Actor Jaggesh starrer new kannada movie '8MM' will be telecasting in Zee Kannada on March 24. The movie directed by Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X