ನನ್ನ ಜೊತೆ ಮುದ್ದಾದ ಹುಡುಗಿ ಇದ್ದಿದ್ರೆ ಬಿಗ್‌ ಬಾಸ್‌ ಮನೆಯಿಂದ ನಾನು ಹೊರ ಬರುತ್ತಿರಲಿಲ್ಲ-ಬಾಡಿ ಬಿಲ್ಡರ್ ಕರಿಬಸಪ್ಪ

ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜ್ವರ ಹರಡಿದೆ. ಮಲಯಾಳಂನಲ್ಲಿ ''ಬಿಗ್ ಬಾಸ್‌''ನ ಪ್ರಯಾಣ ಬಹುತೇಕ ಅರ್ಧ ಮುಕ್ತಾಯವಾಗಿದ್ದು, ತೆಲುಗಿನಲ್ಲಿ ಕೂಡ ''ಬಿಗ್ ಬಾಸ್‌'' ಶುರುವಾಗಿ ಒಂದು ತಿಂಗಳಾಗಿದೆ.

ಹಿಂದಿಯಲ್ಲಿ ಕೂಡ ''ಬಿಗ್ ಬಾಸ್‌'' ಶುರುವಾಗಿದ್ದು ಕನ್ನಡದಲ್ಲಿಯೂ '' ಬಿಗ್ ಬಾಸ್'' ಒಂದು ವಾರ ಯಶಸ್ವಿಯಾಗಿ ಪೂರೈಸಿದೆ. ಇನ್ನು ''ಬಿಗ್ ಬಾಸ್'' ಹಲವರ ಕನಸು. ಈ ಹಿನ್ನೆಲೆ ಅವಕಾಶ ಸಿಕ್ಕ ತಕ್ಷಣವೇ ಎಲ್ಲಾ ಭಾಷೆಯಲ್ಲಿ ಕೂಡ ಅನೇಕರು ''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಅತ್ಯುತ್ಸಾಹದಿಂದ ಹೋಗುತ್ತಾರೆ.

a-cute-girl-couldve-saved-me-bodybuilder-karibasappa-blames-lack-of-love-interest-for-biggboss-exit

ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.

ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಹೀಗೆ ಕನ್ನಡದ ''ಬಿಗ್ ಬಾಸ್'' ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರನ್ನು ಹೊರಗಡೆ ಕಳುಹಿಸಲಾಗಿದೆ. ಈ ಮೂಲಕ ಮನೆಯಲ್ಲಿದ್ದ ಸದಸ್ಯರಿಗೆ ಮತ್ತು ಪ್ರೇಕ್ಷಕರಿಗೆ ಡಬಲ್ ಶಾಕ್‌ನ್ನು ''ಬಿಗ್ ಬಾಸ್'' ನೀಡಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ವಾರ ಕನ್ನಡ ''ಬಿಗ್ ಬಾಸ್'' ಮನೆಯಿಂದ ಬಾಡಿ ಬಿಲ್ಡರ್ ಕರಿಬಸಪ್ಪ ಮತ್ತು ಆರ್‌ಜೆ ಅಮಿತ್ ಹೊರಗಡೆ ಬಂದಿದ್ದಾರೆ. ಮನೆಯಿಂದ ಹೊರ ಬಂದಿರುವ ಇಬ್ಬರು ಸದ್ಯ ತಮ್ಮ ಮನದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ''TV 9 ಕನ್ನಡ'' ಜೊತೆ ಕರಿಬಸಪ್ಪ ಮಾತನಾಡಿದ್ದು ನನ್ನ ಪಕ್ಕ ಹುಡುಗಿ ಇದ್ದಿದ್ದರೆ ನಾನು ಮನೆಯಿಂದ ಹೊರ ಬೀಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಕರಿಬಸಪ್ಪ ''ನಾವು ಮಾತನಾಡಬೇಕು, ಸಮಯ-ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಬೇಕು. ಅಮಿತ್ ಅವರು ಪರವಾಗಿಲ್ಲ. ಕರಿಬಸಪ್ಪ ಅವರು ಏನೂ ಮಾತನಾಡುವುದೇ ಇಲ್ಲ. ಅವರು ಸುಮ್ಮನೆ ಇರ್ತಾರೆ ಅಂತ ಹೇಳ್ತಾರೆ. ಆದರೆ ಅದೇ ಮಾತನಾಡಿದರೆ. ಅಯ್ಯೋ ಏನ್ರೀ ಎಷ್ಟು ಮಾತನಾಡ್ತಾರೆ ಅಂತಾರೆ. ನನಗೆ ಅಲ್ಲಿನ ಜನರ ಜೊತೆ ಹೊಂದಿಕೊಳ್ಳೋದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಿತ್ತು'' ಎಂದು ಹೇಳಿದ್ದಾರೆ.

ಮುಂದುವರೆದು "ಬಿಗ್ ಬಾಸ್ ವ್ಯಕ್ತಿತ್ವಗಳ ಆಟ, ಇಲ್ಲಿ ಮಾತು ಮುಖ್ಯವಲ್ಲ. ನಮ್ಮ ಮಾತು ಪರಿಸ್ಥಿತಿಗೆ ಅನುಗುಣವಾಗಿ ಇರಬೇಕು. ಅಲ್ಲಿ ಏನಾಗಿದೆ ಅಂದರೆ ಅಧಿಕ ಪ್ರಸಂಗಗಳೇ ಹೆಚ್ಚಾಗಿವೆ. ನಮ್ಮ ಮಾತುಗಳು ಸಮಾಜಕ್ಕೆ ಸ್ಪೂರ್ತಿಯಾಗಿರಬೇಕು. ಏನು ಮಾತನಾಡುತ್ತಿದ್ದೇವೆ ಎನ್ನುವ ಪರಿಜ್ಞಾನ ಇರಬೇಕು. ಅನವಶ್ಯಕವಾಗಿ ಇನ್ನೊಬ್ಬರ ಕಾಲೆಳೆದು ಮಾತನಾಡಬಾರದು. ಕಂಟೆಂಟ್‌ಗೋಸ್ಕರ ಡಬಲ್ ಮೀನಿಂಗ್‌ ಮಾತುಗಳನ್ನು ಮಾತನಾಡಿಕೊಂಡು ಕೂರಬಾರದು, ನನಗೆ ಆ ರೀತಿ ಇರೋಕೆ ಬರಲ್ಲ. ಜನರಿಗೆ ಒಂದೊಳ್ಳೆಯ ಸಂದೇಶ ಕೊಡುವುದೇ ನನ್ನ ಉದ್ದೇಶ. ಮಾತನಾಡದೆ ಮೌನವಾಗಿದ್ರೂ ಗೆಲ್ಲಬಹುದು, ಮಾತನಾಡಿಯೇ ಗೆಲ್ಲಬಹುದು ಅಂತೇನೂ ಇಲ್ಲ '' ಎಂದು ಬಾಡಿ ಬಿಲ್ಡರ್ ಕರಿಬಸಪ್ಪ ''TV 9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ಧಾರೆ.

''ನಮಗೆ ಒಂಟಿ - ಜಂಟಿಯಿಂದ ಸ್ವಲ್ಪ ಹಿನ್ನೆಡೆ ಆಯಿತು. ಬೇರೆ ಅವರನ್ನು ಹೋಲಿಕೆ ಮಾಡಿದ್ರೆ ನಾವು ತುಂಬಾ ಸ್ಟ್ರಾಂಗ್ ಆಗಿದ್ದೇವು. ಆದರೂ ಕೂಡ ಬೇರೆಯವರೆಲ್ಲ ಮನೆಯಲ್ಲಿ ಉಳಿದರು. ಯಾಕೆಂದರೆ ಅವರು ಒಂದು ಹುಡುಗ ಒಂದು ಹುಡುಗಿಯಾಗಿ ಇದ್ದರು. ನನ್ನ ಜೊತೆ ಕೂಡ ಹುಡುಗಿ ಇದಿದ್ದರೆ ನಾನೂ ಸೇಫ್ ಆಗ್ತಿದ್ದೆ. ನಾವು ಇಬ್ಬರು ಹುಡುಗ ಆಗಿದ್ದರಿಂದ ನಮ್ಮನ್ನು ಯಾರೂ ತಿರುಗಿ ನೋಡಲಿಲ್ಲ'' ಎಂದು ಕರಿಬಸಪ್ಪ ಹೇಳಿದ್ಧಾರೆ.

''ನನ್ನ ಜೊತೆ ಕೂಡ ಮುದ್ದಾದ ಹುಡುಗಿ ಇದಿದ್ದರೆ ಅವಳು ಆಡದೇ ಇದ್ದರೂ ಪರವಾಗಿರಲಿಲ್ಲ, ಅವಳ ಸ್ಟೈಲ್ ನೋಡಿಯೇ ನಮ್ಮನ್ನು ಸೇಫ್ ಮಾಡ್ತಾ ಇದ್ದರು. ಬಿಗ್ ಬಾಸ್ ಮನೆಯಲ್ಲಿ ಸದ್ಯ ಇದೇ ರೀತಿ ನಡೆಯುತ್ತಿದೆ, ಅಲ್ಯಾರು ಪರ್ಫಾಮರ್ ಇಲ್ಲ ಸುಮ್ಮನೆ ಅವರ ಜೊತೆ ಮುದ್ದಾದ ಹುಡುಗಿ ಇದ್ಧಾರೆ ಅವರ ಜೊತೆ ನಮ್ಮ ಹುಡುಗರು ಯಾರು ಕೂಡ ನಮ್ಮಷ್ಟು ಮನರಂಜನೆ ನೀಡುವರು ಇಲ್ಲ'' ಎಂದು ಕೂಡ ಹೇಳಿದ್ಧಾರೆ.

More from Filmibeat

English summary
Why did Karibasappa leave Bigg Boss? The evicted contestant claims his strategic mistake was not having a 'love interest' in the house. Read his full, shocking reaction.
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X