Anupama Gowda daily routine: ಫ್ರೀ ಇದ್ದಾಗ ಅನುಪಮಾ ಗೌಡ ದಿನವಿಡಿ ಏನು ಮಾಡ್ತಾರೆ ಗೊತ್ತಾ?

By ಎಸ್.ಸುಮಂತ್

ಎಲ್ಲರಿಗೂ ನಟ-ನಟಿಯರು ಏನು ಮಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಇದ್ದೆ ಇರುತ್ತದೆ. ತೆರೆ ಮೇಲೆ ಅಷ್ಟು ಚಂದ ಕಾಣುವ ಅವರ ಜೀವನ ಶೈಲಿ ಹೇಗೆಲ್ಲಾ ಇರುತ್ತೆ ಅನ್ನೋದು ಉತ್ತರವೇ ಸಿಗದ ಪ್ರಶ್ನೆ.

ಆದರೆ, ಆ ಪ್ರಶ್ನೆಗೆ ನಮ್ಮಿಂದ ಉತ್ತರ ಸಿಗಬಹುದು. ಆ ದಿನವನ್ನು ನಾವೂ ಬರವಣಿಗೆ ಮೂಲಕ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಇವತ್ತು ಅನುಪಮಾ ಗೌಡ ಅವರ ಬಗ್ಗೆ ಹೇಳುತ್ತೇವೆ.

ಯಾವಾಗಲೂ ರಿಯಾಲಿಟಿ ಶೋ, ಸೀರಿಯಲ್ ಶೂಟಿಂಗ್ ಅಂತ ಇರುವ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಬಿಡುವು ಸಿಕ್ಕಾಗ ಏನು ಮಾಡುತ್ತಾರೆ ಅನ್ನೋದನ್ನು ನಾವೂ ನಿಮಗೆ ಹೇಳುತ್ತಾ ಹೋಗುತ್ತೇವೆ.

ಅನುಪಮಾ ಗೌಡ ಲೈಫ್ ಜರ್ನಿ ನಿಮಗೆಷ್ಟು ಗೊತ್ತು?

ಅನುಪಮಾ ಗೌಡ ಲೈಫ್ ಜರ್ನಿ ನಿಮಗೆಷ್ಟು ಗೊತ್ತು?

ಈಗ ಕಾಲ ತೀರಾ ಬದಲಾಗಿದೆ. ಅಂಗೈನಲ್ಲಿ ಇರುವ ಮೊಬೈಲ್ ನಲ್ಲಿಯೇ ಎಲ್ಲರ ಅಪ್ಡೇಟ್ ಸಿಕ್ಕಿ ಬಿಡುತ್ತೆ. ಅದರಂತೆ ನಮಗೆ ಯಾವ ನಟ-ನಟಿಯರು ಬೇಕೋ ಅವರೆಲ್ಲರ ಸೋಶಿಯಲ್ ಮೀಡಿಯಾ ಫಾಲೋ ಮಾಡಿದ್ರೆ ಸಾಕು. ಇನ್ನು ಅದಕ್ಕೂ ಮಿಗಿಲಾಗಿ ಇತ್ತೀಚೆಗೆ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಸಾಕಷ್ಟು ನಟಿಮಣಿಯರು ತಮ್ಮದೇ ಆದ ಯೂಟ್ಯೂಬ್ ಕ್ರಿಯೇಟ್ ಮಾಡಿಕೊಂಡು, ತಮ್ಮ ದಿನಚರಿಯನ್ನು ಹೇಳುತ್ತಾ ಹೋಗುತ್ತಿದ್ದಾರೆ. ಅದರಲ್ಲೇ ಅಭಿಮಾನಿಗಳಿಗೆ, ಫಾಲೋವರ್ಸ್‌ಗೆ ಬೇಕಾದ ಎಲ್ಲಾ ಮಾಹಿತಿ ಸಿಕ್ಕುತ್ತೆ.

ಯೂಟ್ಯೂಬ್‌ನಲ್ಲಿ ಕಮಾಲ್ ಮಾಡುತ್ತಿರುವ ಅನುಪಮಾ

ಯೂಟ್ಯೂಬ್‌ನಲ್ಲಿ ಕಮಾಲ್ ಮಾಡುತ್ತಿರುವ ಅನುಪಮಾ

ಮೊದಲೇ ಹೇಳಿದಂತೆ ಇದು ಅಂಗೈನಲ್ಲೇ ಮೊಬೈಲ್ ಇಟ್ಟುಕೊಂಡು ಎಲ್ಲವನ್ನು ನೋಡುವ ಕಾಲ. ಹೀಗಾಗಿ ತಮ್ಮ ಮೊಬೈಲ್ ನಲ್ಲಿ ಅನುಪಮಾ ಗೌಡ ಅವರ ಯೂಟ್ಯೂಬ್ ಫಾಲೋ ಮಾಡುವವರ ಸಂಖ್ಯೆ ಕೂಡ ಕಡಿಮೆ ಏನು ಇಲ್ಲ. ಸುಮಾರು 125 ಸಾವಿರ ಜನ ಈಗಾಗಲೇ ಅನುಪಮಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅನುಪಮಾ ಕೂಡ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ವೆರೈಟಿ ವೆರೈಟಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಫೋಟೋಶೂಟ್ ಮಾಡಿಸಿದ್ದು, ಗ್ರ್ಯಾಂಡ್ ಆಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ ಅವರ ಮನೆಯನ್ನೆಲ್ಲಾ ಒಂದು ರೌಂಡ್ ಹಾಕಿಸೋದು ಹೀಗೆ ನಾನಾ ರೀತಿಯಲ್ಲಿ ವಿಡಿಯೋ ಮಾಡಿ ಫಾಲೋವರ್ಸ್‌ಗೆ ಜೊತೆ ಸಂಪರ್ಕದಲ್ಲಿರುತ್ತಾರೆ.

ಬಿಡುವಿದ್ದಾಗ ಇದನ್ನೆಲ್ಲಾ ಮಾಡ್ತಾರಾ ಅನುಪಮಾ?

ಬಿಡುವಿದ್ದಾಗ ಇದನ್ನೆಲ್ಲಾ ಮಾಡ್ತಾರಾ ಅನುಪಮಾ?

ಅನುಪಮಾ ಗೌಡ ಸದ್ಯ ರಿಯಾಲಿಟಿ ಶೋನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ. ಅದರ ನಡುವೆ ಶೂಟ್ ಇಲ್ಲದೆ ಇದ್ದಾಗ ಅವರು ಏನು ಮಾಡ್ತಾರೆ ಅನ್ನೋದು ಫಾಲೋವರ್ಸ್ ಗಳ ಪ್ರಶ್ನೆ ಇದ್ದಕ್ಕಾಗಿ ಅನುಪಮಾ ಗೌಡ ಅವರೇ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಫ್ರೀ ಇದ್ದಾಗ ಏನೆಲ್ಲಾ ಮಾಡುತ್ತಾರೆ ಅನ್ನೋದನ್ನ ತೋರಿಸಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಜಿಮ್‌ಗೆ ಹೋಗಿ ದೇಹ ದಂಡಿಸುವ ಅನುಪಮಾ ಚೆನ್ನಾಗಿಯೇ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಜಿಮ್‌ನಿಂದ ಮನೆಗೆ ಬರುವ ಅನುಪಮಾ ದೇವರಿಗೆ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ.

 ಅವರೆ ಅಡುಗೆ ಮಾಡ್ತಾರಾ

ಅವರೆ ಅಡುಗೆ ಮಾಡ್ತಾರಾ

ಅವರಿಗೆ ಅವರೇ ಅಡುಗೆಯನ್ನು ಮಾಡಿಕೊಳ್ಳುತ್ತಾರೆ. ಶೂಟಿಂಗ್ ಅಂತ ಬ್ಯುಸಿ ಇರುವ ಅನುಪಮಾ ಅಡುಗೆಯನ್ನು ಮಾಡುತ್ತಾರಾ ಎಂಬ ಪ್ರಶ್ನೆ ಹಲವರದ್ದು. ಆದರೆ ಅದನ್ನು ಅನುಪಮಾ ತಮ್ಮ ವಿಡಿಯೋದಲ್ಲಿ ಪ್ರೂವ್ ಮಾಡಿ ತೋರಿಸಿದ್ದಾರೆ. ಚಿಕನ್ ಅಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಅನುಪಮಾ ಚಿಕನ್ ಸ್ಪೆಷಲ್ ಸಾಂಬಾರ್ ಮಾಡಿದ್ದಾರೆ. ಊಟ ಮಾಡಿ, ಸಿರೀಸ್ ನ ನೋಡಿ ಒಂದು ಸಿನಿಮಾಗೆ ಹೋಗಿ ಬರೋದೆ ಅನುಪಮಾ ಫ್ರೀ ಇದ್ದಾಗ ಕಳೆಯುವ ದಿನದ ಸ್ಪೆಷಲ್.

More from Filmibeat

English summary
A day in Actress and Anchor Anupama Gowda life. Here is more details about it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X