ಮದುವೆಯಾದ ಹತ್ತು ವರ್ಷದ ನಂತರ ಸಿಹಿ ಸುದ್ದಿ ನೀಡಿದ ಖ್ಯಾತ ಜೋಡಿ ; 41ನೇ ವಯ್ಸಸಿನಲ್ಲಿ ಗರ್ಭಿಣಿಯಾದ ನಟಿ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ. ಇನ್ನೂ ವಯಸ್ಸಾಗಿದ್ದರಂತೂ ಮುಗಿದೇ ಹೋಯ್ತು. ಗೆದ್ದಲು ಹುಳಗಳಂತೆ ಕೊರೆಯಲು ಶುರು ಮಾಡುತ್ತಾರೆ. ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ.

A Decade of Love Divyanka Tripathi and Vivek Dahiya Ready to Embrace Parenthood

ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಈಗ ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಉತ್ತರ ನೀಡಿದ್ದಾರೆ. ಮದುವೆಯಾದ ಹತ್ತು ವರ್ಷಗಳ ನಂತರ ತಂದೆ-ತಾಯಿಯಾಗಿ ಇಬ್ಬರು ಬಡ್ತಿ ಪಡೆಯುತ್ತಿದ್ದಾರೆ. ಹೌದು ದಿವ್ಯಾಂಕಾ ತ್ರಿಪಾಠಿ - ವಿವೇಕ್ ದಹಿಯಾ.. ಹಿಂದಿ ಕಿರುತೆರೆಯ ಪ್ರಖ್ಯಾತ ಜೋಡಿ.

''ಬನೂ ಮೇ ತೇರಿ ದುಲ್ಹನ್'' ಧಾರಾವಾಹಿ ಮೂಲಕ ದಿವ್ಯಾಂಕ ಕಿರುತೆರೆಯನ್ನು ಪ್ರವೇಶ ಮಾಡಿದರೆ ವಿವೇಕ್ ''ಯೇ ಹೈ ಆಶಿಕಿ'' ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದರು. ''ಯೇ ಹೈ ಮೊಹಬ್ಬತೇ'' ಇವರು ಇಬ್ಬರು ಜೊತೆಯಾಗಿ ಅಭಿನಯಿಸಿದ ಸೀರಿಯಲ್. ಇವರ ಸಂಬಂಧಕ್ಕೆ ಭದ್ರ ಬುನಾದಿ ಹಾಕಿದ ಧಾರಾವಾಹಿ ಇದು.

''ಯೇ ಹೈ ಮೊಹಬ್ಬತೇ'' ಯಲ್ಲಿ ಜೊತೆಯಲ್ಲಿ ಅಭಿನಯಿಸುತ್ತಲೇ ಪ್ರೇಮದ ಬಲೆಯಲ್ಲಿ ಸಿಲುಕಿಕೊಂಡ ಇಬ್ಬರು ಆ ನಂತರ ಜುಲೈ 8 2016ರಂದು ಮದುವೆಯಾದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು.

ಹೀಗೆ ಮದುವೆಯ ಬಂಧನಕ್ಕೊಳಗಾದ ಇಬ್ಬರು ಈಗ ಹತ್ತು ವರ್ಷದ ನಂತರ ತಂದೆ ತಾಯಿಯಾಗುತ್ತಿದ್ದಾರೆ ಎಂದು ''ಬಾಂಬೆ ಟೈಮ್ಸ್''' ವರದಿ ಮಾಡಿದೆ. ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಇಬ್ಬರು ಕಾತುರದಿಂದ ಕಾಯುತ್ತಿದ್ದು ಸೀಮಂತ ಸಮಾರಂಭ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಕೂಡ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

A Decade of Love Divyanka Tripathi and Vivek Dahiya Ready to Embrace Parenthood

ಸದ್ಯ ಇವರಿಬ್ಬರ ಅಭಿಮಾನಿಗಳು ಈ ಸುದ್ದಿಯನ್ನು ಕೇಳಿ ಥ್ರಿಲ್ ಆಗಿದ್ದು ದಿವ್ಯಾಂಕ ತ್ರಿಪಾಠಿ ಮತ್ತು ವಿವೇಕ್ ದಹಿಯಾಗೆ ಹಲವರು ಶುಭ ಕೋರುತ್ತಿದ್ದಾರೆ. ಅಂದ್ಹಾಗೇ ಮದುವೆಯಾದ ಎರಡು ವರ್ಷದ ನಂತರ ದಿವ್ಯಾಂಕ ಮತ್ತು ವಿವೇಕ್ ನಚ್ ಬಲಿಯೇ ರಿಯಾಲಿಟಿ ಶೋನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದರು. ಕಾರ್ಯಕ್ರಮದ ವಿಜೇತರಾಗಿ ಹೊರ ಹೊಮ್ಮಿದ್ದರು.

ಸದ್ಯ ದಿವ್ಯಾಂಕ ತ್ರಿಪಾಠಿ ಕಿರುತೆರೆಯಿಂದ ವಿಮುಖರಾಗಿ ತಮ್ಮ ಗಮನವನ್ನು ಬೆಳ್ಳಿತೆರೆ ಮತ್ತು ವೆಬ್ ಸರಣಿಗಳತ್ತ ವಹಿಸಿದ್ದಾರೆ. ''ಅದೃಶ್ಯಂ''.. ''ಇನ್‌ವಿಸಿಬಲ್ ವುಮನ್''.. ''ಮ್ಯಾಜಿಕ್ ಆಫ್ ಶಿರಿ''.. ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದಾರೆ.

ಮತ್ತೊಂದು ಕಡೆ ಪತ್ನಿಯಂತೆ ವಿವೇಕ್ ದಹಿಯಾ ಕೂಡ ಸಿನಿಮಾದತ್ತ ಗಮನ ವಹಿಸಿದ್ದಾರೆ. ''ಚಾಲಬಾಜ್''.. ''ಸ್ಟೇಟ್ ಆಫ್ ಸೀಜ್- ಟೆಂಪಲ್ ಅಟ್ಯಾಕ್'' ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮದುವೆಯಾದ ಹತ್ತು ವರ್ಷದ ನಂತರ ಇಬ್ಬರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಸಿದ್ಧರಾಗಿದ್ದಾರೆ. ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ತಮ್ಮ ಆಪ್ತರನ್ನು ಸೀಮಂತ ಶಾಸ್ತ್ರಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

More from Filmibeat

English summary
Is 'DiVek' expecting? Divyanka Tripathi and Vivek Dahiya reportedly set to welcome their first baby after 10 years of marriage. Inside the baby shower rumors!
Read more about: pregnancy pregnent ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X