Fit Boss: ಬಿಗ್ ಬಾಸ್ ಅಲ್ಲ.. 'ಫಿಟ್ ಬಾಸ್'.. ಕನ್ನಡ ಇತಿಹಾಸದಲ್ಲೇ ವಿಭಿನ್ನ ರಿಯಾಲಿಟಿ ಶೋ!

By ಅನಿತಾ ಬನಾರಿ

ಕನ್ನಡದಲ್ಲಿ ಈಗಾಗಲೇ ಹಲವಾರು ರೀತಿಯ ಶೋಗಳು ಹೊರಬರುತ್ತಿವೆ. ಡ್ಯಾನ್ಸ್ ರಿಯಾಲಿಟಿ ಶೋಗಳು, ಸಂಗೀತ ಶೋಗಳು, ಬಿಗ್ ಬಾಸ್ ನಂತಹ ಬಿಗ್ ರಿಯಾಲಿಟಿ ಶೋಗಳು ಜೊತೆಗೆ ಮದುವೆ ಆದವರಿಗೂ ಶೋಗಳು, ಪುಟಾಣಿ ಮಕ್ಕಳಿಗೂ ಟ್ಯಾಲೆಂಟ್ ಶೋಗಳು, ಅಮ್ಮಂದಿರಿಗೂ ಅಪ್ಪಂದಿರಿಗೂ, ಮದುವೆ ಆಗದೇ ಇರುವ ಬ್ಯಾಚುಲರ್ಸ್‌ಗೂ ರಿಯಾಲಿಟಿ ಶೋ ಗಳನ್ನು ಹಲವಾರು ಕನ್ನಡ ವಾಹಿನಿಗಳು ನಡೆಸಿಕೊಳ್ಳುತ್ತಾ ಬಂದಿದೆ. ಇದೀಗ ಅಂತದ್ದೇ ಒಂದು ಹೊಸ ರಿಯಾಲಿಟಿ ಶೋ ಆರಂಭವಾಗಲಿದ್ದು ಇದು ಎಲ್ಲಾ ರೀತಿಯ ವೆರೈಟಿಯನ್ನು ಮೀರಿ ಫಿಟ್ನೆಸ್ ಬಗ್ಗೆ ಆಗಿದೆ.

ಹೌದು, ಫಿಟ್ನೆಸ್‌ಗಾಗಿ ಹೊಸ ರಿಯಾಲಿಟಿ ಶೋ ಒಂದು ಲಾಂಚ್ ಆಗಿದ್ದು, ಸಿರಿಗನ್ನಡ ಚಾನೆಲ್ ಜೊತೆಗೆ ಆಯುಷ್ ಟಿವಿ ಈ ಶೋ ಅನ್ನು ಪ್ರಸಾರಗೊಳಿಸಲಿದೆ. ಅಂದಹಾಗೆ, ಈ ಶೋನ ವಿಶೇಷವೆಂದರೆ ಬಿಗ್ ಬಾಸ್ ಸೀಸನ್ 8ರಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದ ಪ್ರಶಾಂತ್ ಸಂಬರಗಿ ಈ ಶೋವಿನ ನಿರೂಪಕ.

fit-boss-kannada-movie-reality-show

'ಫಿಟ್ ಬಾಸ್' ಎಂಬ ಹೆಸರಿನಲ್ಲಿ ಮೂಡಿ ಬರಲಿರುವ ಈ ಶೋಗೆ ಈಗಾಗಲೇ ಬಹಳಷ್ಟು ಪಾಪ್ಯುಲಾರಿಟಿ ಸಿಕ್ಕಿದ್ದು, ಜನರು ಈ ಶೋಗಾಗಿ ಕಾಯುತ್ತಿದ್ದಾರೆ. ಫಿಟ್ನೆಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಆಯುಷ್ ಟಿವಿ ಹಾಗೂ ಸಿರಿಗನ್ನಡ ವಾಹಿನಿಗಳು ಈ ಶೋ ಅನ್ನು ತುಂಬಾ ಒಳ್ಳೆಯ ಉದ್ದೇಶದಿಂದ ತಮ್ಮ ಚಾನೆಲ್‌ಗಳಲ್ಲಿ ಪ್ರಸಾರಗೊಳಿಸಲಿವೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಫಿಟ್ ಇಂಡಿಯಾ ಮೂಮೆಂಟ್ ಅಂತೂ ಬಹಳ ಜೋರಾಗಿ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ಥೂಲಕಾಯದವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಈ ಫಿಟ್ ಬಾಸ್‌ಗೆ ಬರಲು ಕಾತುರರಾಗಿದ್ದರು. ಒಂದೊಳ್ಳೆ ಉದ್ದೇಶವನ್ನು ಇಟ್ಟುಕೊಂಡಿರುವ ಈ ಶೋ ಬರೀ ಮನೋರಂಜನೆ ಅಷ್ಟೇ ಅಲ್ಲದೆ ಹಲವಾರು ವೀಕ್ಷಕರಲ್ಲಿಯೂ ಬಹಳಷ್ಟು ಅರಿವು ಮೂಡಿಸುತ್ತದೆ ಎಂಬ ಆಶಾ ಭಾವನೆ ಇದೆ.

ಅಕ್ಟೋಬರ್ 16ರಿಂದ ಅಂದರೆ ಇದೇ ಸೋಮವಾರ ಸಂಜೆ 7:00ಯಿಂದ ಆಯುಷ್ ಟಿವಿಯಲ್ಲಿ ಹಾಗೂ ಎಂಟು ಗಂಟೆಗೆ ಸಿರಿಗನ್ನಡ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು ಇದರ ನಿರೂಪಕ ಪ್ರಶಾಂತ್ ಸಂಬರಗಿ ಇದರ ಬಗ್ಗೆ ಹೇಳಿದ್ದಾರೆ‌. ಇದೊಂದು ಬಹಳ ವಿಭಿನ್ನ ಶೋ ಈ ಶೋನಲ್ಲಿ ನಿರೂಪಕನಾಗಿ ಭಾಗಿಯಾಗಿದ್ದು ಪ್ರಶಾಂತ್ ಅವರಿಗೆ ಬಹಳ ಖುಷಿ ಕೊಟ್ಟಿದೆಯಂತೆ.

fit-boss-kannada-movie-reality-show

ಪ್ರಶಾಂತ್ ಸಂಬರಗಿ ಅವರು ಇಲ್ಲಿಯವರೆಗೆ ಬೇರೆ ಬೇರೆ ರಿಯಾಲಿಟಿ ಶೋ ಗಳಲ್ಲಿ ಬೇರೆ-ಬೇರೆ ರೀತಿಯ ಪಾತ್ರಗಳನ್ನು ವಹಿಸಿದ್ದಾರೆಯಂತೆ. ಆದರೆ, ಇದೇ ಮೊದಲ ಬಾರಿಗೆ ಅವರು ನಿರೂಪಕನಾಗಿ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹಲವರಿಗೆ ನಿಜಕ್ಕೂ ಪ್ರೇರಣೆ ಆಗುವಂತಹ ಈ ಕಾರ್ಯಕ್ರಮದ ನಿರೂಪಕ ಆಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಪ್ರಶಾಂತ್ ಅವರಿಗೆ ಖುಷಿಯಿದೆಯಂತೆ.

ಆಡಿಷನ್ ಸಮಯದಲ್ಲಿ ಈ ಶೋಗೆ 2,000ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ಅದರಲ್ಲಿ ನೂರಕ್ಕೂ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಲಾಯಿತಂತೆ. ನಂತರ 21 ದಿನಗಳ ಕಾಲ ಅವರ ತೂಕವನ್ನು ಇಳಿಸಲು ವೈಜ್ಞಾನಿಕವಾಗಿಯೂ ಸೇರಿ ಬೇರೆ ಬೇರೆ ರೀತಿಯ ಸಮಸ್ಯೆ ಹಾಗೂ ಪರಿಹಾರಗಳನ್ನು ಕಂಡುಕೊಂಡಿದ್ದಾರಂತೆ. ಫಿಟ್ನೆಸ್ ಜೊತೆಗೆ ಮೋಜು ಮಸ್ತಿ ಸ್ನೇಹ ಈ ರೀತಿ ವಿಭಿನ್ನ ಎಲಿಮೆಂಟ್‌ಗಳನ್ನು ಒಳಗೊಂಡ ಈ 21 ದಿನದ ರಿಯಾಲಿಟಿ ಶೋ ಇದೀಗ ಪ್ರಸಾರವಾಗಲಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

More from Filmibeat

English summary
A different reality show in Kannada television history Fit Boss begins
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X