ಬಿಗ್‌ಬಾಸ್ ಮೈಕೆಲ್ ಟ್ಯಾಟೂ ಗೆಸ್ ಮಾಡಿದ್ರೆ ಸಿಗುತ್ತಂತೆ ಗಿಫ್ಟ್; ಬಂದ ಕಮೆಂಟ್ ಎಷ್ಟು ಗೊತ್ತಾ..?
ಬಿಗ್ ಬಾಸ್ ಮನೆಯಿಂದ ಹೊರ ಬಂದಾದ ಮೇಲೂ ಹಲವರು ತಮ್ಮ ಬಾಂಧವ್ಯ ಮುಂದುವರೆಸಿದ್ದಾರೆ. ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೆ. ಕುಶಲೋಪರಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಈಶಾನಿ, ಮೈಕೆಲ್, ರಕ್ಷಕ್, ಸ್ನೇಹಿತ್, ನೀತೂ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ತನಿಷಾ, ವರ್ತೂರು ಸಂತೋಷ್. ಹೀಗೆ ಬಿಗ್ ಬಾಸ್ ಮನೆಯೊಳಗೆ ಆತ್ಮೀಯವಾಗಿದ್ದವರ ಬಾಂಧವ್ಯ ಮನೆಯಿಂದ ಹೊರಗೆ ಬಂದ ಮೇಲೂ ಮುಂದುವರೆದಿದೆ.
ಆದರೆ, ಕೊನೆ ಕೊನೆಯಲ್ಲಿ ಕೆಲವರಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಬಂದಿತ್ತು. ಅದರಲ್ಲಿ ಸ್ನೇಹಿತ್-ನಮ್ರತಾ, ಕಾರ್ತಿಕ್-ಸಂಗೀತಾ ಇವರೆಲ್ಲಾ ಒಟ್ಟಾಗಿ ಅದೇ ಬಾಂಧವ್ಯದಿಂದ ಇನ್ನು ಕಾಣಿಸಿಕೊಂಡಿಲ್ಲ. ಕಲರ್ಸ್ ಕನ್ನಡ ಮಾಡಿದ್ದಂತಹ ಇಂಟರ್ ವ್ಯೂನಲ್ಲಿ ಮಾತ್ರ ಕಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಮೈಕಲ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ನೀತೂ ಟ್ಯಾಟೂ ಶಾಪ್‌ಗೆ ಮೈಕಲ್ ಭೇಟಿ
ನೀತೂ ಮಂಗಳಮುಖಿಯರ ಸಮುದಾಯದಲ್ಲಿಯೇ ಇದ್ದರು. ಹೇಗೆ ಬದುಕಬೇಕೆಂದು ತೋರಿಸಿಕೊಟ್ಟವರು. ತನ್ನದೇ ಸ್ವಂತ ಉದ್ಯಮ ನಡೆಸುವ ಮೂಲಕ ಸ್ವಾಭಿಮಾನದಿಂದ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟವರು. ಸ್ವಂತ ಟ್ಯಾಟೂ ಶಾಪ್ ಇಟ್ಟುಕೊಂಡಿದ್ದಾರೆ. ಟ್ಯಾಟೂ ಆರ್ಟಿಸ್ಟ್ ಕೂಡ ಆಗಿರುವ ನೀತೂ ಅವರೇ ಟ್ಯಾಟೂ ಹಾಕುತ್ತಾರೆ. ಈ ಬಾರಿಯ ಬಿಗ್ ಬಾಸ್‌ನಲ್ಲೂ ಕಾಣಿಸಿಕೊಂಡಿದ್ದವರು.
ಮೈಕೆಲ್‌ಗಿದೆ ಟ್ಯಾಟೂ ಕ್ರೇಜ್
ಬಿಗ್ ಬಾಸ್ ಸೀಸನ್ 10ರಲ್ಲಿ ನಾನ್ ಕನ್ನಡಿಗನಾಗಿ ಮೈಕೆಲ್ ಅಜಯ್ ಕೂಡ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಗೆ ಹೋದಾಗ ಅಷ್ಟೇನು ಕನ್ನಡ ಗೊತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಅವರಿಗಿದ್ದ ಕನ್ನಡದ ಮೇಲಿನ ಪ್ರೇಮ ಬಿಗ್ ಬಾಸ್ ಜರ್ನಿ ಮುಗಿಯುವುದರೊಳಗೆ ಹೆಚ್ಚಿನ ಮಟ್ಟದಲ್ಲಿಯೇ ಕನ್ನಡ ಕಲಿತಿದ್ದರು. ಎಲ್ಲರಿಂದಾನೂ ಶಬ್ಬಾಶ್ ಎನಿಸಿಕೊಂಡಿದ್ದರು. ಕನ್ನಡಿಗರ ಮನಸ್ಸು ಗೆದ್ದ ಮೈಕೆಲ್‌ಗೆ ಟ್ಯಾಟೂ ಕ್ರೇಜ್ ಕೂಡ ಕಡಿಮೆ ಏನು ಇಲ್ಲ. ಅವರು ಆಫ್ ಶರ್ಟ್ ಹಾಕಿದ್ದಾಗ ಅವರ ಮೈಮೇಲಿರುವ ಸಾಕಷ್ಟು ಟ್ಯಾಟೂ ಬಿಗ್ ಬಾಸ್‌ನಲ್ಲಿಯೇ ಅನಾವರಣವಾಗಿದೆ.
ಟ್ಯಾಟೂ ಊಹಿಸಿದವರಿಗೆ ಗಿಫ್ಟ್
ಮೈಕೆಲ್ ಕೂಡ ಬರ್ಗರ್ ಶಾಪ್ ಇಟ್ಟಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಅವರ ಬರ್ಗರ್ ಶಾಪ್‌ಗೆ ನೀತೂ ಭೇಟಿ ನೀಡಿದ್ದರು. ಇದೀಗ ನೀತೂ ಟ್ಯಾಟೂ ಶಾಪ್‌ಗೆ ಭೇಟಿ ನೀಡಿರುವ ಮೈಕೆಲ್, ಹೊಸದಾಗಿ ಒಂದು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಒಂದು ವಿಡಿಯೋ ಕೂಡ ಮಾಡಿದ್ದಾರೆ. "ನಾನೀಗ ಹಾಕಿಸಿಕೊಳ್ಳುತ್ತಿರುವ ಟ್ಯಾಟೂ ಯಾವುದೆಂದು ನೀವೂ ಗೆಸ್ ಮಾಡಿದರೆ ಒಂದು ಸ್ಪೆಷಲ್ ಗಿಫ್ಟ್ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಮಣ್ಣಿನ ಮಗನಿಗೆ ಮುಗಿಬಿದ್ದ ಫ್ಯಾನ್ಸ್
ಬಿಗ್ ಬಾಸ್ ಮನೆಗೆ ಬಂದಾಗ ಮೈಕಲ್‌ಗೆ ಕನ್ನಡ ಬರುತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಕನ್ನಡವನ್ನು ಓದುವುದಕ್ಕೂ ಶುರು ಮಾಡಿದ್ದರು. ಕಷ್ಟಪಟ್ಟಾದರೂ ಸ್ವಂತವಾಗಿ ಕನ್ನಡದ ಟಾಸ್ಕ್ ಬುಕ್ ಓದುತ್ತಿದ್ದರು. ಇದು ಕನ್ನಡದ ಜನತೆಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಅದೇ ಕಾರಣಕ್ಕೆ ಮೈಕೆಲ್‌ಗೆ ಮಣ್ಣಿನ ಮಗ ಎಂಬ ಬಿರುದನ್ನೇ ನೀಡಿದ್ದರು. ಇದೀಗ ಮೈಕೆಲ್ ಟ್ಯಾಟೂ ಕಮೆಂಟ್‌ಗೆ ನಾ ಮುಂದು ತಾ ಮುಂದು ಅಂತ ಕಮೆಂಟ್ ಹಾಕುತ್ತಿದ್ದಾರೆ. 'ಮಣ್ಣಿನ ಮಗ' ಅಂತಾನೇ ಟ್ಯಾಟೂ ಹಾಕಿಸಿಕೊಳ್ಳುತ್ತಿರಬಹುದು ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಒಂದೇ ಗಂಟೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ವು ಕಮೆಂಟ್ಸ್ ಬಂದಿದೆ.


Click it and Unblock the Notifications











