Amruthadhaare ; ಭೂಮಿಕಾ ಹಣೆಗೆ ಗೌತಮ್ ಸಿಹಿ ಮುತ್ತು, ಕನಸಾ-ನನಸಾ ? ಮುಂದೆ ಮತ್ತೆ ಕಾದಿದೆಯಾ ಆಪತ್ತು ?

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿ ಬಿಡಾರ ಹೂಡಿದ್ದಾರೆ. ಆದರೆ.. ಈ ಬಾರಿ ಗೌತಮ್‌ ಕಂಡು ಭೂಮಿಕಾ ಓಡಿ ಹೋಗಿಲ್ಲ. ಬದಲಿಗೆ ಬದುಕಿನಲ್ಲಿ ಎದುರಾದ ಸವಾಲನ್ನು ಧೈರ್ಯವಾಗಿ ಎದುರಿಸುವ ನಿರ್ಧಾರ ಮಾಡಿದ್ದಾಳೆ. ಆದರೆ, ಇದೇ ಸಮಯದಲ್ಲಿ ಗೌತಮ್ ಜೊತೆ ಇರುವ ಅದೃಷ್ಟ ದೇವತೆಯನ್ನು ಕಂಡು ಚಿಂತೆಗೀಡಾಗಿದ್ದಳು ಭೂಮಿಕಾ. ಸದ್ಯ ಈ ಚಿಂತೆಯನ್ನು ಕಾವೇರಿ ದೂರ ಮಾಡಿದ್ದು...

ಗೌತಮ್ ಜೊತೆ ಇರುವ ಮಿಂಚು ರಹಸ್ಯ ಭೂಮಿಕಾಗೆ ಗೊತ್ತಾಗಿದೆ. ಇದರಿಂದ ನಿರಾಳವಾಗಿರುವ ಭೂಮಿಕಾ ಸದ್ಯ ಮಿಂಚುನ ಮನೆಗೆ ಕರೆದು ಆಕೆಯ ಆರೈಕೆ ಮಾಡುತ್ತಿದ್ದಾಳೆ. ತಾಯಿಯ ಪ್ರೀತಿಯನ್ನು ನೀಡುತ್ತಿದ್ದಾಳೆ. ಪ್ರೀತಿಯಿಂಧ ಸಜ್ಜಪ್ಪ ಮಾಡಿದ್ದಾಳೆ. ಇದೇ ಸಮಯದಲ್ಲಿ ಮಿಂಚು ಹಾವ-ಭಾವ-ಮಾತುಗಳಿಂದ ಭೂಮಿಕಾಗೆ ಗೌತಮ್ ಜೊತೆ ಕಳೆದ ಹಳೆಯ ದಿನಗಳು ನೆನಪಾಗುತ್ತಿವೆ.

A Kiss of Hope Gautham-Bhoomika s Kiss Leaves Amruthadhaare Viewers Breathless and Confused

ಮತ್ತೊಂದು ಕಡೆ ತನ್ನ ಅಣ್ಣ ಗೌತಮ್‌ನ ಆಸ್ತಿಯನ್ನೇನೋ ಪಡೆದಿರುವ ಜೈದೇವ್‌ಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗಿ ಲಾಯರ್‌ ಹೇಳಿದಂತೆ ಶಕುಂತಲಾ ಮತ್ತು ಜೈದೇವ್ ಇಬ್ಬರೂ ಈಗ ಭೂಮಿಕಾಳನ್ನು ಹುಡುಕಿ ಸಹಿ ತೆಗೆದುಕೊಳ್ಳಲು ಪ್ಲಾನ್ ಮಾಡಿದ್ದಾರೆ.

ಈ ಹಿನ್ನೆಲೆ ಹೇಗಾದರೂ ಮಾಡಿ ಗೌತಮ್ ಮತ್ತು ಭೂಮಿಕಾಳನ್ನು ಹುಡುಕಿಯೇ ತೀರಬೇಕೆಂದು ಶಪಥ ಮಾಡಿರುವ ಜೈದೇವ್ ಸದ್ಯ ತನ್ನ ಹುಡುಗರನ್ನು ಪತ್ತೆದಾರಿ ಕೆಲಸಕ್ಕೆ ಕಳುಹಿಸಿದ್ದಾನೆ.

ಇದೇ ಸಮಯದಲ್ಲಿ ಮಲ್ಲಿಯನ್ನು ಜೈದೇವ್ ಕಡೆ ಹುಡುಗರು ನೋಡಿದ್ದು ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ಓಡೋಡಿ ಬಂದಿರುವ ಜೈದೇವ್ ತನ್ನ ಹುಡುಗರ ಮುಖಕ್ಕೆ ಉಗಿದು ಸರಿಯಾಗಿ ಹುಡುಕುವಂತೆ ಹೇಳಿದ್ದಾನೆ.

ಇನ್ನು ಶಕುನಿಯಂತಹ ಜೈದೇವ್‌ನ ಮಾವ ಲಕ್ಕಿ ಲಕ್ಷ್ಮೀಕಾಂತ್‌ಗೆ ಜ್ಞಾನೋದಯ ಆಗಿದೆ. ಶಕುಂತಲಾ ಮತ್ತು ಜೈದೇವ್ ಜೊತೆಯಲ್ಲಿಯೇ ಇದ್ದು ಖೆಡ್ಡಾ ತೋಡಲು ಲಕ್ಷ್ಮೀಕಾಂತ್ ಮುಂದಾಗಿದ್ದು ಗೌತಮ್ ಮತ್ತು ಭೂಮಿಕಾ ಪರ ನಿಂತಿದ್ದಾನೆ. ಹೀಗಾಗಿ ಜೈದೇವ್‌ಗೆ ಮಲ್ಲಿಯ ಸುಳಿವು ಸಿಕ್ಕ ಹಿನ್ನೆಲೆ ಚಿಂತೆಯಲ್ಲಿ ಮುಳುಗಿರುವ ಲಕ್ಷ್ಮೀಕಾಂತ್ ಮಲ್ಲಿಯನ್ನು ಹೇಗೆ ಎಚ್ಚರಿಸಲಿ ಎಂದು ಯೋಚನೆ ಮಾಡುತ್ತಿದ್ದಾನೆ. ಆತಂಕ್ಕೀಡಾಗಿದ್ದಾನೆ.

A Kiss of Hope Gautham-Bhoomika s Kiss Leaves Amruthadhaare Viewers Breathless and Confused

ಇದ್ಯಾವುದರ ಅರಿವು ಇಲ್ಲದೇ ಮಿಂಚು ಜೊತೆ ಸದ್ಯ ಭೂಮಿಕಾ ಕಾಲ ಕಳೆಯುತ್ತಿದ್ದಿದ್ದು ಕೈಯಲ್ಲಿರುವ ಮಚ್ಚೆಯ ಕುರಿತು ಭೂಮಿಕಾ ವಿಚಾರಿಸಿದ್ದಾಳೆ. ಆಗ ಮಿಂಚು ಇದು ತುಂಬಾ ಲಕ್ಕಿ ಅಂತೆ ತುಂಬಾ ಜನ ಹೇಳ್ತಾರೆ. ಆದರೆ ನಾನು ಅನ್ ಲಕ್ಕಿ ಎಂದು ಹೇಳುತ್ತಾಳೆ.

ಮಿಂಚು ಆಡಿದ ಈ ಮಾತುಗಳಿಗೆ ಭಾವುಕಗೊಳ್ಳುವ ಭೂಮಿಕಾ ಆ ತರ ಏನೂ ಇಲ್ಲ ನೀನು ಅಂದರೆ ನನಗೆ ತುಂಬಾ ಇಷ್ಟ, ನನಗಷ್ಟೇ ಅಲ್ಲ ಈ ವಠಾರದಲ್ಲಿರುವ ಎಲ್ಲರಿಗೂ ನೀನು ಇಷ್ಟ ಎಂದು ಹೇಳುತ್ತಾಳೆ. ಭೂಮಿಕಾ ಮನೆಯಿಂದ ಮಿಂಚು ಮರಳಿ ಮನೆಗೆ ಬಂದಿದ್ದು ಕುತೂಹಲದಿಂದ ಕಾಯುತ್ತಿದ್ದ ಗೌತಮ್ ಏನೇನಾಯ್ತು ಎಂದು ವಿಚಾರಿಸುತ್ತಾನೆ. ಆಗ ನಿಮ್ಮ ಬಗ್ಗೆ ಮ್ಯಾಮ್ ತುಂಬಾ ವಿಚಾರಿಸಿದರು ಎಂದು ಮಿಂಚು ಹೇಳಿದಾಗ ಗೌತಮ್ ಖುಷಿಯಾಗುತ್ತಾನೆ.

ಭೂಮಿಕಾ ಹಣೆಗೆ ಗೌತಮ್ ಸಿಹಿ ಮುತ್ತು

ಇಂದು (ಅಕ್ಟೋಬರ್ 28 ) ಬಿಡುಗಡೆಯಾದ ಪ್ರೋಮೊದಲ್ಲಿ ಭೂಮಿಕಾ ಮನೆಗೆ ಗೌತಮ್ ಬಂದಿದ್ದಾನೆ. ನಿದ್ದೆಯಿಂದ ಎದ್ದು ಕುಂತ ಭೂಮಿಕಾ ನೀವು ಇಲ್ಲೇನು ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ಧಾಳೆ. ಆಗ ಭೂಮಿಕಾ ಕೈ ಹಿಡಿದು ನನ್ನ ನೋಡಿದರೆ ನಿಮಗೇನು ಅನಿಸಲ್ವಾ..? ನನ್ನ ಕಂಡರೆ ನಿಮಗೆ ಪ್ರೀತಿ ಇಲ್ವಾ..? ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಿ. ನಾನು ಕಾಣಿಸದೇ ಇದ್ದಾಗ, ನೋಡಬೇಕು ಅನಿಸಲ್ವಾ..? ನೋಡಿದರೆ ನನ್ನ ಜೊತೆ ಮಾತಾಡಬೇಕು ಅನಿಸಲ್ವಾ..? ಮಾತಾಡಿದರೆ ಪ್ರೀತಿ ಮಾಡಬೇಕು ಅಂತ ಅನಿಸಲ್ವಾ..? ಪ್ರೀತಿ ಮಾಡಿದರೆ ಅಪ್ಕೋಬೇಕು ಅನಿಸಲ್ವಾ..? ಎಂದು ಗೌತಮ್ ಡೈಲಾಗ್ ಹೊಡೆಯುತ್ತಾನೆ. ಎದ್ದೇಳಲು ಮುಂದಾಗುತ್ತಾನೆ. ಆಗ ಗೌತಮ್ ಕೈ ಹಿಡಿದು ಅಪ್ಪಿಕೊಳ್ಳುವ ಭೂಮಿಕಾ ನಿಮ್ಮಿಂದ ದೂರ ಇರೋಕೆ ನನ್ನಿಂದ ಆಗ್ತಿಲ್ಲ. ನನ್ನ ಕರ್ಕೊಂಡು ಎಲ್ಲಾದರೂ ದೂರ ಹೋಗಿ ಎಂದು ಹೇಳುತ್ತಾಳೆ.

ಸದ್ಯ ಈ ಪ್ರೋಮೋ ನೋಡಿ ''ಅಮೃತಧಾರೆ'' ಪ್ರೇಕ್ಷಕರು ಖುಷಿಯಾಗಿದ್ದಾರೆ. ಬಹುತೇಕರು ಈ ಬಾರಿಯಾದರೂ ಇದು ಸುಳ್ಳಾಗದಿರಲಿ.. ಕನಸಾಗದಿರಲಿ ಎಂದು ಆಶಿಸುತ್ತಿದ್ದಾರೆ. ಧಾರಾವಾಹಿಯ ನಿರ್ದೇಶಕರಲ್ಲಿ ಮತ್ತೆ ಕನಸೆಂದು ತೋರಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಮತ್ತೂ ಕೆಲವರು ಇದೇನಾದರೂ ಕನಸಾಗಿದ್ದರೆ ಸರಿ ಇರಲ್ಲ ಎಂದು ಎಚ್ಚರಿಕೆಯನ್ನು ಕೂಡ ನಿರ್ದೇಶಕರಿಗೆ ನೀಡುತ್ತಿದ್ಧಾರೆ.

ಇನ್ನು ಇದರ ನಡುವೆ ಸದ್ಯ ಜೈದೇವ್ ಗೆ ಮಲ್ಲಿ ವಾಸಸ್ಥಳ ಎಲ್ಲಿ ಎನ್ನುವುದು ಗೊತ್ತಾಗಿದೆ. ಇನ್ನೇನು ಮಲ್ಲಿಯ ವಠಾರಕ್ಕೆ ಜೈದೇವ್ ಬಂದರೂ ಅಚ್ಚರಿ ಇಲ್ಲ. ಹಾಗೊಂದು ವೇಳೆ ಹುಡುಕಿಕೊಂಡು ಬಂದರೆ, ಮುಂದೇನಾಗಲಿದೆ. ಭೂಮಿಕಾ ಜೀವಕ್ಕೆ ಮತ್ತೆ ಆಪತ್ತು ಇದೆಯಾ..? ಗೌತಮ್ ಪ್ರಾಣಕ್ಕೆ ಶಕುಂತಲಾ ಮತ್ತು ಜೈದೇವ್ ಮತ್ತೆ ಸಂಚಕಾರ ತರಬಹುದು ಎಂಬ ಭಯದಿಂದ ಭೂಮಿಕಾ ಮತ್ತೆ ಓಡಿ ಹೋಗುತ್ತಾಳಾ..? ಈ ಪ್ರಶ್ನೆಗಳು ಕೂಡ ಹಲವು ಪ್ರೇಕ್ಷಕರನ್ನು ಕಾಡುತ್ತಿವೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Prepare for a shocking twist! A tender moment—a kiss of hope—between Gautham and Bhoomika has the entire Amruthadhaare audience in tears and totally confused. Watch the full scene details here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X