'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ಈ ಶ್ವಾನವೇ ಪ್ರಮುಖ ಪಾತ್ರಧಾರಿ.. ನಟಿಸುತ್ತಿರೋದು '777 ಚಾರ್ಲಿ'ನಾ?
'ರಾಧಾ ರಮಣ' ಧಾರಾವಾಹಿಯ ಖ್ಯಾತ ನಟ ಸ್ಕಂದ ಅಶೋಕ್ ಇದೀಗ ಹೊಸದೊಂದು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು 'ಅವನು ಮತ್ತು ಶ್ರಾವಣಿ' ಎಂಬ ಶೀರ್ಷಿಕೆ ಅಡಿಯಲ್ಲಿ ನಿರ್ದೇಶಕ ಮೈಸೂರು ಮಂಜು ರ ನಿರ್ದೇಶನದಲ್ಲಿ ಈ ಧಾರಾವಾಹಿ ಹೊರಬರುತ್ತಿದೆ. ಹೊಸದೊಂದು ಪಾತ್ರದ ಜೊತೆಗೆ ಹೊಸ ಕಾನ್ಸೆಪ್ಟ್‌ನೊಂದಿಗೆ ಒಂದು ವಿಶೇಷ ಜೀವಿಯನ್ನು ತೋರಿಸುತ್ತಿದ್ದಾರೆ. ಅದುವೇ ಈ ಶ್ವಾನ.
ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಹಿಟ್ ಆಗಿದೆ. ಈ ಬೆನ್ನಲ್ಲೇ ಶ್ವಾನ ಪ್ರಿಯರೂ ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಲ್ಲದೆ ಆದೆಷ್ಟೋ ಬೀದಿ ನಾಯಿಗಳನ್ನು ಸಾಕಲು ಮುಂದಾದರು. ಅದರಲ್ಲಿ ಚಾರ್ಲಿ ಪಾತ್ರವನ್ನು ಮಾಡಿದ್ದ ಲ್ಯಾಬ್ರೇಡರ್ ಜಾತಿಯ ನಾಯಿಯ ಅಭಿನಯಕ್ಕೆ ಎಲ್ಲರೂ ಮಾರುಹೋಗಿದ್ದರು.

ಇದೀಗ ನಾಯಿಯನ್ನು ಒಂದು ಪ್ರಮುಖ ಪಾತ್ರದಲ್ಲಿ ತೋರಿಸಲಾಗುತ್ತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ಈ ಪ್ರಯತ್ನ ನಡೆಯುತ್ತಿದೆ ಮೂಲಗಳು. ಹೌದು, ನಟ ಸ್ಕಂದ ಅಶೋಕ್ ಅವರು ಅಭಿನಯಿಸಲಿರುವ ಹೊಸ ಧಾರಾವಾಹಿಯಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಒಂದು ಲ್ಯಾಬ್ರೇಡಾರ್ ಜಾತಿಯ ನಾಯಿ.
ಒಬ್ಬ ಹುಡುಗ ಹಾಗೂ ಹುಡುಗಿಯ ಪ್ರೀತಿಗೆ ಮುಖ್ಯ ಕಾರಣವಾಗುವ ಈ ಶ್ವಾನವನ್ನು ಅವರು ತಮ್ಮ ಮಗುವಿನಂತೆ ಸಾಕುತ್ತಾರೆ. ಜೊತೆಗೆ ತಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಲಿವಿನ್ ರಿಲೇಶನ್‌ಶಿಪ್ ಆರಂಭಿಸುತ್ತಾರೆ. ಈ ರೀತಿಯ ಕಥಾವಸ್ತು ಹೊಂದಿರುವ ಧಾರಾವಾಹಿ ಇದಾಗಿದ್ದು ಹೊಸದೊಂದು ಕಾನ್ಸೆಪ್ಟ್ ಅನ್ನು ಹೇಳುತ್ತಿರುವುದರಲ್ಲಿ ಡೌಟೇ ಇಲ್ಲ.

"ಪ್ರಸ್ತುತ ಲಿವ್ ಇನ್ ರಿಲೇಶನ್ ಶಿಪ್ ಸರ್ವೆ ಸಾಮಾನ್ಯ ಎಂಬಂತಾಗಿದೆ. ಸಮಾಜದಲ್ಲಿ ವರ್ಷಾನುಗಟ್ಟಲೆಯಿಂದ ನಡೆದುಕೊಂಡು ಬಂದ ಮದುವೆ ಸಂಪ್ರದಾಯ ಈ ರೀತಿಯ ವಿಚಾರಗಳನ್ನು ವಿರೋಧಿಸಿಕೊಂಡು ಹುಡುಗ ಹುಡುಗಿ ಇಷ್ಟಪಟ್ಟರೆ ಪರಸ್ಪರ ಒಟ್ಟಿಗೆ ಇರುವುದು ಎಂಬ ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಲಿವ್ ಇನ್ ರಿಲೇಶನ್‌ಶಿಪ್‌ನ ಸಾಧ್ಯತೆ ಬಾಧ್ಯತೆಗಳನ್ನು ತೋರಿಸುವುದೇ ಈ ಧಾರಾವಾಹಿ ಕಥೆ" ಎಂದು ನಟ ಸ್ಕಂದ ಶುಕ್ ಹೇಳಿಕೊಂಡಿದ್ದಾರೆ. ಜೊತೆಗೆ ನಾಯಿಯು ಇಡೀ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ.
'ಅವನು ಮತ್ತು ಶ್ರಾವಣಿ'ಯಲ್ಲಿ ನಾಯಕ ಅಭಿಮನ್ಯು ಆಗಿ ನಟಿಸಲಿರುವ ಸ್ಕಂದ ಅಶೋಕ್‌ಗೆ ಶ್ವಾನದೊಂದಿಗೆ ನಟಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಅರಿವಾಗಿದೆಯಂತೆ. ಕೆಲವೊಮ್ಮೆ ಬೇಕಾದ ರೀತಿ ಶಾಟ್ ಬರದೇ ಇರುವಾಗ ಪದೇ ಪದೆ ರಿಟೇಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಸ್ಕಂದ ಅವರಿಗೆ ಇದೊಂದು ಅದ್ಭುತ ಅನುಭವವಂತೆ.
ನಾಯಿಗೆ ಅವರು ಕಥೆಯಲ್ಲಿ ಚಿಕೋ ಎಂದು ಹೆಸರಿಟ್ಟಿದ್ದಾರೆ. ನಾಯಿಗೆ ಯಾವುದೇ ರೀತಿ ಹಿಂಸೆಯಾಗದಂತೆ ಅದರ ಅನುಕೂಲಕ್ಕೆ ಸರಿಯಾಗಿ ಶೂಟ್ ಮಾಡುತ್ತಿರುವುದರಿಂದ ಇದೊಂದು ಚಾಲೆಂಜಿಂಗ್ ವಿಚಾರ ಎಂಬುದು ಸ್ಕಂದ ಅಭಿಪ್ರಾಯ. ಆದರೂ ಈ ಹೊಸ ಅನುಭವ ಸ್ಕಂದಗೆ ಸಂತೃಪ್ತಿ ಕೊಟ್ಟಿದೆಯಂತೆ.
ಅಂದಹಾಗೆ ನಟ ಸ್ಕಂದ ಅಶೋಕ್ 'ರಾಧಾ ರಮಣ' ಧಾರಾವಾಹಿ ಮೂಲಕ ಬಹಳಷ್ಟು ಹೆಸರು ಮಾಡಿದ್ದರು. ಅದಕ್ಕೂ ಮೊದಲು ಯು ಟರ್ನ್ ಸೇರಿ ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ನಂತರ ಬ್ರೇಕ್ ತೆಗೆದುಕೊಂಡು ಎರಡು ವರ್ಷಗಳ ಕಾಲ ಸಿನಿಮಾ ಕಡೆಗೆ ಗಮನಹರಿಸಿದ ಇವರು ಇದೀಗ ಒಂದು ಒಳ್ಳೆಯ ಕಥೆಯ ಮೂಲಕ ಧಾರಾವಾಹಿಗೆ ಮರಳಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.


Click it and Unblock the Notifications











