twitter
    For Quick Alerts
    ALLOW NOTIFICATIONS  
    For Daily Alerts

    'ಡ್ರಾಮಾ ಜ್ಯೂನಿಯರ್ಸ್' ತೀರ್ಪುಗಾರರಿಗೆ ವೀಕ್ಷಕರೊಬ್ಬರು ಬರೆದಿರುವ ಪತ್ರ ಇದು.!

    By Harshitha
    |

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಪುರೋಹಿತರ ವೃತ್ತಿಗೆ ಅವಹೇಳನ ಮಾಡಲಾಗಿರುವ ಕುರಿತು ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಜೀ ಕನ್ನಡ ವಾಹಿನಿ ಹಾಗೂ ಡ್ರಾಮಾ ಜ್ಯೂನಿಯರ್ಸ್ ವಿರುದ್ಧ ಟೀಕೆ ಶುರುವಾಗಿದೆ. ಈ ಮಧ್ಯೆ ಕಾರ್ಯಕ್ರಮದ ವೀಕ್ಷಕರೊಬ್ಬರು 'ಡ್ರಾಮಾ ಜ್ಯೂನಿಯರ್ಸ್' ತೀರ್ಪುಗಾರರಾದ ಲಕ್ಷ್ಮಿ, ಟಿ.ಎನ್.ಸೀತಾರಾಂ ಹಾಗೂ ವಿಜಯ್ ರಾಘವೇಂದ್ರ ರವರಿಗೆ ಒಂದು ಪತ್ರ ಬರೆದಿದ್ದಾರೆ. ಆ ಪತ್ರ ಇಲ್ಲಿದೆ, ಓದಿರಿ...

    A letter to 'Drama Juniors' Judges by Viewer

    ಲಕ್ಷ್ಮಿ, ಸೀತಾರಾಮ್ ಮತ್ತು ರಾಘವೇಂದ್ರ,

    ನಮಸ್ಕಾರ... ನಿಮ್ಮ್ಮ ಮೇಲೆ ಒಂದು ನಂಬಿಕೆ ಇಟ್ಟುಕೊಂಡಿದ್ದೆವು. ನೀವುಗಳು ಯಾರನ್ನೂ ನೋಯಿಸುವುದಿಲ್ಲ ಎಂದು.

    'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!'ಜೀ ಕನ್ನಡ'ದಿಂದ ದೊಡ್ಡ ಎಡವಟ್ಟು: ಕೋಪೋದ್ರೇಕದಿಂದ ಗುಟುರು ಹಾಕಿದ ಬ್ರಾಹ್ಮಣರು.!

    ನಾನು ಬ್ರಾಹ್ಮಣನಾಗಿ ಟೀಕೆ, ವಿಚಾರ, ವಿಮರ್ಶೆ ಮತ್ತು ಹಾಸ್ಯವನ್ನು ಸ್ವಾಗತಿಸುತ್ತೇನೆ. ಏಕೆಂದರೆ ಇದು ಬ್ರಾಹ್ಮಣರ ಒಂದು ಶಕ್ತಿ ಕೂಡ. ಆದರೆ ನೀವುಗಳು ಹೋದ ವಾರದ ಕಾರ್ಯಕ್ರಮವನ್ನು ತಡೆಯಬಹುದಿತ್ತು. ಆದರೆ ನೀವುಗಳು ಸ್ಕ್ರಿಪ್ಟ್ ಬರೆದವರೊಂದಿಗೆ ಶಾಮೀಲಾಗಿಬಿಟ್ಟು ಒಂದು ಜಾತಿಗೆ ನೋವು ಮಾಡಿದಿರಿ. ಇದು ನೀವು ನಮಗೆ ಮಾಡಿದ ದ್ರೋಹ.

    ಸಿಡಿದೆದ್ದ ಬ್ರಾಹ್ಮಣರು: ಜೀ ಕನ್ನಡ ವಾಹಿನಿಗೆ 'ಧಿಕ್ಕಾರ' ಕೂಗಿದ ಓದುಗರು.!ಸಿಡಿದೆದ್ದ ಬ್ರಾಹ್ಮಣರು: ಜೀ ಕನ್ನಡ ವಾಹಿನಿಗೆ 'ಧಿಕ್ಕಾರ' ಕೂಗಿದ ಓದುಗರು.!

    ಬ್ರಾಹ್ಮಣ್ಯ ಬಿಟ್ಟು ಹೋದವರು ಇದ್ದಾರೆ. ಆದರೆ ಇಟ್ಟುಕೊಂಡವರು ಹೆಮ್ಮೆ ಮತ್ತು ಜವಾಬ್ದಾರಿಯಿಂದ ಇದ್ದಾರೆ. ಇವರಲ್ಲಿ ನಟ ನಟಿಯರು, ಹಾಲು ಮಾರುವವರು, ಚರಂಡಿ ಕ್ಲೀನ್ ಮಾಡುವವರು, ಪೂಜಾರಿಗಳು, ಆಟೋ ಮತ್ತು ಏರೋಪ್ಲೇನ್ ಓಡಿಸುವವರು ಎಂ.ಎಲ್.ಎ, ಎಂ.ಪಿಗಳು ಎಲ್ಲರೂ ಇದ್ದಾರೆ. ನಿಯತ್ತಿನಿಂದ ಬ್ರಾಹ್ಮಣ ಕಲ್ಪನೆಗೆ ಧಕ್ಕೆ ಬಾರದಂತೆ ಬದುಕಿದ್ದಾರೆ.

    ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?

    ಹಾಸ್ಯ ಮಾಡಿ ಆದ್ರೆ ನೋವು ಮಾಡ ಬೇಡಿ. ಏನು ಹೇಳಲಿ... ಮಾವಿನ ಮರದಂತಿರುವರೇ ಬೇವಿನ ಕಾಯಿಯ ಕೆಲಸ ಮಾಡಿದ್ರೆ ಯಾರಿಗೆ ಹೇಳುವುದು? ಕಲ್ಲು ಹೊಡೆಯಬೇಕೇ? ಥೂ ಎನ್ನಬೇಕೆ? ಬಹಿಶ್ಕಾರ ಹಾಕಬೇಕೇ.

    ನಾವುಗಳು ಆ ದಾರಿಯವರಲ್ಲ... ನೋವು ನುಂಗುವರು... ನ್ಯಾಯಕ್ಕಾಗಿ ನ್ಯಾಯದ ಹಾದಿಯಲ್ಲೇ ಕಾಯುವವರು.

    ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡು ಪ್ರತಿಬಾರಿ ಊಟ ಮಾಡಿ.. ದೇವರು ನಿಮಗೆ ಒಳ್ಳೆಯ ಮನಸ್ಸು ಕೊಡಲಿ.

    ಮಕ್ಕಳು ಅಡಲ್ಟ್ ಕಂಟೆಂಟ್ ಮಾಡಬಾರದು. ಡುಯೆಟ್ ಸಾಂಗ್ಸ್ ಮಾಡಬಾರದು. ಇದರಿಂದ ಅವರ ಮನಸ್ಸಿನ ಮೇಲೆ ಪರಿಣಾಮ ಬೀಳಬಹುದು. ವಯೋಸಹಜ ಧರ್ಮ ಎನ್ನುವುದು ಎಲ್ಲರಿಗೂ ಅಪ್ಲೈ ಆಗಬೇಕು. ಸಿಹಿ ಕಹಿ ಇರಲಿ ...ಆದ್ರೆ ನೋವು ಮಾತ್ರ ಯಾವ ಜಾತಿಗೂ ಬೇಡ. ಎಲ್ಲ ಜಾತಿಗಳು ಅವರವರ ಭಾವಕ್ಕೆ ತಕ್ಕಂತೆ ಹೆಮ್ಮೆಯಿಂದ ಬದುಕುವ ಅವಕಾಶ ಕೊಡಿ.

    ಧನ್ಯವಾದಗಳು,

    ಸ್ನೇಹ ಶೀಲಾ

    English summary
    Insult for Brahmin Community in 'Drama Juniors': A Viewer writes letter to Judges of Drama Juniors.
    Thursday, August 10, 2017, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X