ಸ್ನೇಹಿತರಿಗೂ ಹೇಳದೇ ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ, 5 ತಿಂಗಳ ನಂತರ ಹೊರ ಬಿತ್ತು ಸತ್ಯ

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಇಂಥಾ ಕಾಲದಲ್ಲಿ ಅದರಲ್ಲಿಯೂ ಈ ಬಣ್ಣದ ಲೋಕದಲ್ಲಿ ಹಲವಾರು ಜನ ಮದುವೆಯಾಗಿದ್ದರೂ ಆಗಿಲ್ಲ ಅಂತಾರೆ.

ಮದುವೆಯಾದ ವಿಚಾರ ಹೊರ ಜಗತ್ತಿಗೆ ಗೊತ್ತಾದರೆ ಅವಕಾಶಗಳು ಸಿಗಲ್ಲ ಎನ್ನುವ ಭಯದಲ್ಲಿ ಎಲ್ಲವನ್ನೂ ಗೌಪ್ಯವಾಗಿ ಇಡುವ ಪ್ರಯತ್ನ ಮಾಡುತ್ತಾರೆ.ಆದರೆ ಸತ್ಯ ಯಾವತ್ತಾದರೂ ಒಮ್ಮೆ ಹೊರ ಬರಲೇಬೇಕು. ಹೀಗಾಗಿ ಆ ನಂತರ ಸಮಾಜಕ್ಕೆ ಹೆದರಿ ತಮ್ಮ ಸಂಸಾರದ ಗುಟ್ಟನ್ನು ರಟ್ಟು ಮಾಡುತ್ತಾರೆ. ಉದಾಹರಣೆಗೆ ''ಸಬಾ ಖಾನ್''.

A New Chapter Bigg Boss 12 s Saba Khan Reveals Shocking Wedding Secret After 5 Months

ಹೌದು.. ಸಬಾ ಖಾನ್.. ಹಿಂದಿ ''ಬಿಗ್ ಬಾಸ್‌ ಸೀಸನ್ 12''ರ ಸ್ಫರ್ಧಿ. ತನ್ನ ಸಹೋದರಿ ''ಸೋಮಿ ಖಾನ್'' ಅವರೊಂದಿಗೆ 2018ರಲ್ಲಿ ಹಿಂದಿ ''ಬಿಗ್ ಬಾಸ್'' ಮನೆ ಪ್ರವೇಶ ಮಾಡಿದ್ದ ಸಬಾ ಖಾನ್ ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ.

ಕಿರುತೆರೆಯ ಪ್ರೇಕ್ಷಕರ ವರ್ಗ ಈ ಇಬ್ಬರು ಸಹೋದರಿಯರನ್ನು ''ದಬಾಂಗ್ ಸಹೋದರಿ''ಯರು ಎಂದೇ ಕರೆಯುತ್ತಿತ್ತು. ಅಷ್ಟರ ಮಟ್ಟಿಗೆ ಕಿರುತೆರೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವರು ಸಬಾ ಖಾನ್ ಮತ್ತು ಸೋಮಿ ಖಾನ್.

ಇಂಥಾ ಸಬಾ ಖಾನ್ ಸದ್ಯ ತಾವು ಮದ್ವೆಯಾಗಿರುವ ವಿಚಾರವನ್ನು ಐದು ತಿಂಗಳ ನಂತರ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಬಾ ನನ್ನ ಮದುವೆಯ ವಿಷಯವನ್ನು ಇಂದು ನಾನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿ ನನಗೆ ''ಬಿಗ್ ಬಾಸ್‌'' ಮನೆಯಲ್ಲಿರುವಾಗಲೇ ಸಿಕ್ಕಿದೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಹೀಗೆ ಮುಂದುವರೆಯಲಿ ಎಂದಿದ್ದಾರೆ.

ಇನ್ನೂ ಸಬಾ ಮದುವೆಯಾಗಿದ್ದು ಇಂದು ನಿನ್ನೆಯಲ್ಲ. ಬದಲಿಗೆ 5 ತಿಂಗಳ ಹಿಂದೆಯೇ ಸಬಾ ಮದುವೆ ನಡೆದಿದೆ. ಆದರೂ ಈ ವಿಚಾರವನ್ನು ಸಬಾ ಎಲ್ಲಿಯೂ ಹೇಳಿಲ್ಲ. ಬದಲಿಗೆ ತಮ್ಮ ಮದುವೆಯ ವಿಚಾರ ಲೀಕ್ ಆಗದಂತೆ ನೋಡಿಕೊಂಡಿದ್ದಾರೆ. ಈ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಬಾ ಇದೇ ವರ್ಷ ಏಪ್ರಿಲ್‌ನಲ್ಲಿ ನನ್ನ ಮದುವೆ ಜೋಧ್‌ಫುರ್‌ದಲ್ಲಿ ನಡೆಯಿತು. ಆದರೆ ನಾವು ನಮ್ಮ ಮದುವೆ ವಿಚಾರ ಗೌಪ್ಯವಾಗಿ ಇಡಲು ಬಯಸಿದ್ದೆವು, ಯಾಕೆಂದರೆ ನಮ್ಮ ವ್ಯೆಯಕ್ತಿಕ ಬದುಕಿನ ಮೇಲೆ ಹೆಚ್ಚಿನ ಗಮನ ಕೊಡಬೇಕೆಂದು ನಾವು ಬಯಸಿದ್ದೇವು, ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಅತ್ತೆ ಮಾವ ಮತ್ತು ನನ್ನ ಹೊಸ ಕುಟುಂಬದ ಜೊತೆ ಅತ್ಯಮೂಲ್ಯ ಸಮಯ ಕಳೆಯಲು ಬಯಸಿದ್ದೇ ಹೀಗಾಗಿ ಯಾರಿಗೂ ಹೇಳಲಿಲ್ಲ ಎಂದು ಹೇಳಿದ್ದಾರೆ.

A New Chapter Bigg Boss 12 s Saba Khan Reveals Shocking Wedding Secret After 5 Months

ನಾನು ಮದುವೆಯಾಗುತ್ತಿರುವ ವಿಚಾರವಾಗಲಿ ಅಥವಾ ನಾನು ಮದುವೆಯಾಗಿರುವ ಸುದ್ದಿಯಾಗಲಿ ನನ್ನ ಸ್ನೇಹಿತರಿಗೆ ಕೂಡ ಗೊತ್ತಿಲ್ಲ ಎಂದು ಹೇಳಿರುವ ಸಬಾ ಈಗ ಮದುವೆಯಾಗಿ 5 ತಿಂಗಳಾಗಿದೆ. ನಾನು ನನ್ನ ಹೊಸ ಕುಟುಂಬವನ್ನು ಅರ್ಥ ಮಾಡಿಕೊಂಡಿದ್ದೇನೆ, ಅವರ ಜೊತೆ ಸಮಯ ಕಳೆದಿದ್ದೇನೆ.. ಬಹುಮುಖ್ಯವಾಗಿ ನಾನು ಮತ್ತೆ ಚಿತ್ರರಂಗಕ್ಕೆ ಮತ್ತು ಕಿರುತೆರೆಗೆ ಮರಳಿ ಬರಬೇಕು ಎನ್ನುವ ಆಶಯ ಹೊಂದಿದ್ದೇನೆ ಎಂದು ಹೇಳಿದ್ದಾರೆ.ಒಂದಿಲ್ಲೊಂದು ದಿನ ಸತ್ಯ ಹೇಳಲೇಬೇಕು ಈ ಕಾರಣಕ್ಕೆ ಈಗ ನಾನು ಮದುವೆಯಾಗಿರುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಎಂದು ಕೂಡ ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಸಬಾ ಖಾನ್ ಹೇಳಿದ್ದಾರೆ.

ಅಂದ್ಹಾಗೇ ಸಬಾ ಅವರದ್ದು ಲವ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್. ಮನೆಯವರು ನೋಡಿದ ಜೋಧ್‌ಫುರದ ಉದ್ಯಮಿ ''ವಸೀಮ್ ನವಾಬ್'' ಅವರನ್ನು ಸಬಾ ಮದುವೆಯಾಗಿದ್ದಾರೆ. ಇನ್ನು ಸಬಾ ಅವರ ಸಹೋದರಿ ಸೋಮಿ ಮದುವೆಯಾಗಿದ್ದು ಬೇರೆ ಯಾರನ್ನು ಅಲ್ಲ. ಬದಲಿಗೆ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ಅವರನ್ನು. ಕಳೆದ ವರ್ಷ ಸೋಮಿ ಮತ್ತು ಆದಿಲ್ ಮದುವೆ ನಡೆದಿತ್ತು. ಈಗ ವರ್ಷದ ನಂತರ ಸಬಾ ಕೂಡ ವಸೀಮ್ ಜೊತೆ ಮದುವೆಯಾಗಿದ್ದಾರೆ. ಸದ್ಯ ಸಬಾ ಅವರ ಮದುವೆ ಚರ್ಚೆಯಲ್ಲಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಜನ ಸಬಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

More from Filmibeat

English summary
Saba Khan of Bigg Boss 12 fame is now married to Waseem Nawab. Read about the intimate wedding ceremony in Jodhpur that was kept a secret for 5 months.
Read more about: biggboss bigg boss marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X